ಧರ್ಮಸ್ಥಳ: ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಅಧೀನದಲ್ಲಿರುವ ತಂಜಾವೂರಿನ ದಕ್ಷಿಣ ವಲಯ ಕೇಂದ್ರದ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಸಹಯೋಗದೊಂದಿಗೆ ಮಾ.10 ಮಂಗಳವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾ ಭವನದಲ್ಲಿ ಹಾಗೂ 11 ಮತ್ತು 12 ರಂದು (ಬುಧವಾರ ಮತ್ತು ಗುರುವಾರ) ಉಜಿರೆಯಲ್ಲಿ “ವನರಂಗ” ಬಯಲು ರಂಗಮಂದಿರದಲ್ಲಿ “ಭಾರತೀಯ ಲೋಕ ಉತ್ಸವ, ಧರ್ಮಸ್ಥಳ – 2020” ಆಯೋಜಿಸಲಾಗಿದೆ.
Advertisement
ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೊರಾಂ, ನಾಗಾಲ್ಯಾಂಡ್, ಸಿಕ್ಕಿಂ, ಕರ್ನಾಟಕ, ತ್ರಿಪುರಾ ಮೊದಲಾದ ರಾಜ್ಯಗಳಿಂದ ನೂರಾರು ಮಂದಿ ಜಾನಪದ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿದ್ದಾರೆ.ಮಂಗಳವಾರ ಸಂಜೆ 6 ಗಂಟೆಗೆ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಹೇಮಾವತಿ ವೀ. ಹೆಗ್ಗಡೆಯವರು ಸಮಾರಂಭವನ್ನು ಉದ್ಘಾಟಿಸುವರು.
Advertisement
ಪ್ರತಿ ದಿನ ಸಂಜೆ ಆರು ಗಂಟೆಯಿಂದ ಎಂಟು ಗಂಟೆವರೆಗೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರವನ್ನು ವೀಕ್ಷಿಸಲು ಕಲಾಭಿಮಾನಿಗಳಿಗೆ ಮುಕ್ತ ಅವಕಾಶವಿದೆ ಎಂದು ಸಂಘಟಕರು ತಿಳಿಸಿದ್ದಾರೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement