ನಗರದ ಸಮಗ್ರ ಅಭಿವೃದ್ಧಿ ಬಿಜೆಪಿ ಗುರಿ – ಎಸ್.ಅಂಗಾರ

ಸುಳ್ಯ: ಸುಳ್ಯ ನಗರದ ಸಮಗ್ರ ಅಭಿವೃದ್ಧಿ ಬಿಜೆಪಿಯ ಗುರಿ. ನಗರದ ಅಭಿವೃದ್ಧಿ ಯ ದೃಷ್ಠಿಯಿಂದ ಚುನಾವಣಾ ಪ್ರಣಾಳಿಕೆಯನ್ನು ತಯಾರಿಸಲಾಗುವುದು ಎಂದು ಶಾಸಕ ಎಸ್.ಅಂಗಾರ ಹೇಳಿದ್ದಾರೆ.

Advertisement

ಸುಳ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಯ ಅನುಷ್ಠಾನಕ್ಕೆ ಸರಕಾರಕ್ಕೆ 65 ಕೋಟಿಯ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಸರಕಾರ ಅನುದಾನ ಬಿಡುಗಡೆ ಮಾಡಿಲ್ಲ. ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರಕಾರದಿಂದ ಅನುದಾನ ತರಿಸಲಾಗುವುದು ಎಂದರು. ಇತ್ತೀಚಿನ ವರ್ಷಗಳಲ್ಲಿ ಸರಕಾರದಿಂದ ಅನುದಾನ ಬಾರದ ಕಾರಣ ನಗರದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಆರೋಪಿಸಿದರು.

Advertisement

ಒಳಚರಂಡಿ ಯೋಜನೆ ಪೂರ್ತಿಯಾಗಲು ಇನ್ನೂ ಎರಡು ಕೋಟಿ ರೂಗಳ ಅಗತ್ಯವಿದೆ. ಅನುದಾನ ತರಿಸಿ ಅದನ್ನು ಪೂರ್ತಿ ಮಾಡಲಾಗುವುದು. ನಗರದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸ್ಥಳ ಗುರುತಿಸಲಾಗಿದೆ. ಅದು ಎಲ್ಲಿ ಎಂಬುದನ್ನು ಚುನಾವಣೆಯ ಬಳಿಕ ಘೋಷಣೆ ಮಾಡಲಾಗುವುದು ಎಂದರು. ದುಗಲಡ್ಕ -ಕೊಡಿಯಾಲಬೈಲ್ ರಸ್ತೆ ಅಭಿವೃದ್ಧಿ ಸೇರಿದಂತೆ ವಿವಿಧ ರಸ್ತೆಗಳನ್ನು 1.70 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. 12 ವಾರ್ಡ್ ಗಳಲ್ಲಿ ವಿಶೇಷ ಅನುದಾನ ತರಿಸಿ ಅಭಿವೃದ್ಧಿ ನಡೆಸಲಾಗಿದೆ ಎಂದು ಅವರು ಹೇಳಿದರು.

20 ವಾರ್ಡ್ ಗೆಲ್ಲುವ ಗುರಿ- ವೆಂಕಟ್ ವಳಲಂಬೆ

Advertisement

ಸುಳ್ಯ ನಗರ ಪಂಚಾಯತ್ ನ ಎಲ್ಲಾ 20 ವಾರ್ಡ ಗಳಲ್ಲಿಯೂ ಗೆಲ್ಲುವುದು ಬಿಜೆಪಿಯ ಗುರಿ. ಅದಕ್ಕಾಗಿ ಎಲ್ಲಾ ತಂತ್ರಗಳನ್ನೂ ರೂಪಿಸಲಾಗಿದೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿದ್ದಾರೆ.
ಮೆ.21ರಂದು ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಜಿಲ್ಲೆಯ ಏಳು ಮಂದಿ ಬಿಜೆಪಿ ಶಾಸಕರು ನಗರ ಪಂಚಾಯತ್ ನ ವಿವಿಧ ವಾರ್ಡ್ ಗಳಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಳಾದ ಪ್ರಕಾಶ್ ಹೆಗ್ಡೆ, ಸುಬೋದ್ ಶೆಟ್ಟಿ ಮೇನಾಲ, ಬಿಜೆಪಿ ನಗರ ಶಕ್ತಿ ಕೇಂದ್ರದ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ, ಪ್ರಮುಖರಾದ ಎನ್.ಎ.ರಾಮಚಂದ್ರ, ಸುರೇಶ್ ಕಣೆಮರಡ್ಕ, ಪಿ.ಕೆ.ಉಮೇಶ, ಹರೀಶ್ ಬೂಡುಪನ್ನೆ, ಸೋಮನಾಥ ಪೂಜಾರಿ, ಉಪಸ್ಥಿತರಿದ್ದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Be the first to comment on "ನಗರದ ಸಮಗ್ರ ಅಭಿವೃದ್ಧಿ ಬಿಜೆಪಿ ಗುರಿ – ಎಸ್.ಅಂಗಾರ"

Leave a comment

Your email address will not be published.


*