ನಗರ ಪಂಚಾಯತ್ ಚುನಾವಣೆ : ಎಸ್‍ಡಿಪಿಐ ಏಕೈಕ ಸದಸ್ಯ ಈ ಬಾರಿ ಪಕ್ಷೇತರ ಸ್ಪರ್ಧೆ..?

Advertisement

ಸುಳ್ಯ: ಕಳೆದ ಬಾರಿ ಚುನಾವಣೆಯಲ್ಲಿ ಗೆಲ್ಲುವ ಮೂಲಕ ನಗರ ಪಂಚಾಯತ್‍ನಲ್ಲಿ ಎಸ್‍ಡಿಪಿಐಗೆ ಖಾತೆ ತೆರೆದಿದ್ದ ಕೆ.ಎಸ್.ಉಮ್ಮರ್ ಈ ಬಾರಿ ಪಕ್ಷೇತರನಾಗಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಮಾಹಿತಿ ದೊರೆತಿದೆ.

Advertisement

ನಗರ ಪಂಚಾಯತ್ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಸುಳ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು ಪಕ್ಷಗಳ ಅಭ್ಯರ್ಥಿಗಳಾಗಲು ಪೈಪೋಟಿ ಆರಂಭಗೊಂಡಿದೆ. ಕಳೆದ ಬಾರಿ 14ನೇ ವಾರ್ಡ್‍ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ನಗರ ಪಂಚಾಯತ್‍ಗೆ ಆಯ್ಕೆಯಾಗಿದ್ದ ಉಮ್ಮರ್ ತಮ್ಮ ಕಠಿಣ ನಿಲುವುಗಳ ಮೂಲಕ ಗಮನ ಸೆಳೆದಿದ್ದರು. ಈ ಬಾರಿಯೂ ನಗರ ಪಂಚಾಯತ್ ಚುನಾವಣೆಯಲ್ಲಿ ಎಸ್‍ಡಿಪಿಐ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಈ ಕುರಿತು ಅಂತಿಮ ನಿರ್ಧಾರ ಮತ್ತು ಅಭ್ಯರ್ಥಿಗಳ ಘೋಷಣೆ ಇನ್ನಷ್ಟೇ ನಡೆಯಬೇಕಿದೆ. ಆದರೆ ಈ ಬಾರಿ ಪಕ್ಷೇತರನಾಗಿ ಕಣಕ್ಕಿಳಿಯುವ ಇಂಗಿತವನ್ನು ಕೆ.ಎಸ್.ಉಮ್ಮರ್ ವ್ಯಕ್ತಪಡಿಸಿರುವುದು ಮಾತ್ರ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಕಳೆದ ಬಾರಿ ಸ್ಪರ್ಧಿಸಿದ್ದ ವಾರ್ಡ್‍ನಲ್ಲಿ ಮೀಸಲಾತಿ ಬದಲಾದ ಕಾರಣ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಆದುದರಿಂದ ಈ ಬಾರಿ ಬೋರುಗುಡ್ಡೆ ವಾರ್ಡ್‍ನಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿ ಎಲ್ಲರ ಬೆಂಬಲ ಕೇಳುವ ಚಿಂತನೆಯನ್ನು ಕೆ.ಎಸ್.ಉಮ್ಮರ್ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

“ಈ ಬಾರಿಯೂ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ. ಪಕ್ಷೇತರನಾಗಿ ಸ್ಪರ್ಧಿಸುವ ಯೋಚನೆ ನಡೆಸಿದ್ದೇನೆ ಈ ಕುರಿತು ಅಂತಿಮ ನಿರ್ಧಾರ ಕೆಲವೇ ದಿನದಲ್ಲಿ ಪ್ರಕಟಿಸುವುದಾಗಿ” ಕೆ.ಎಸ್.ಉಮ್ಮರ್ “ಸುಳ್ಯ ನ್ಯೂಸ್.ಕಾಂ” ಗೆ ತಿಳಿಸಿದ್ದಾರೆ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ನಗರ ಪಂಚಾಯತ್ ಚುನಾವಣೆ : ಎಸ್‍ಡಿಪಿಐ ಏಕೈಕ ಸದಸ್ಯ ಈ ಬಾರಿ ಪಕ್ಷೇತರ ಸ್ಪರ್ಧೆ..?"

Leave a comment

Your email address will not be published.


*