ನಗರ ಪಂಚಾಯತ್ ಚುನಾವಣೆ : ಮತ್ತೆ ಮೂರು ವಾರ್ಡ್ ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ

May 14, 2019
9:54 AM

ಸುಳ್ಯ: ನಗರ ಪಂಚಾಯತ್ ಚುನಾವಣೆಗೆ ಕಾಂಗ್ರೆಸ್ ಮತ್ತೆ ಮೂರು ವಾರ್ಡ್ ಗಳ ಅಭ್ಯರ್ಥಿಗಳನ್ನು ಘೋಷಿಸಿದೆ. ಇದರಿಂದ ಒಟ್ಟು 16 ವಾರ್ಡ್ ಗಳ ಅಭ್ಯರ್ಥಿ ಘೋಷಣೆ ಪೂರ್ತಿಯಾಗಿದೆ.
ವಾರ್ಡ್ ಸಂಖ್ಯೆ 3(ಜಯನಗರ)ರಲ್ಲಿ ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಭಟ್, ವಾರ್ಡ್ ಸಂಖ್ಯೆ 4(ಶಾಂತಿನಗರ)ರಲ್ಲಿ ಶಂಕರ್, ವಾರ್ಡ್ ಸಂಖ್ಯೆ 6(ಬೀರಮಂಗಲ)ರಲ್ಲಿ ಧೀರಾ ಕ್ರಾಸ್ತಾ ಅಭ್ಯರ್ಥಿಗಳಾಗಲಿದ್ದಾರೆ.

ನಾಲ್ಕು ವಾರ್ಡ್ ಗಳಲ್ಲಿ ಮುಂದುವರಿದ ಬಿಕ್ಕಟ್ಟು:

20 ವಾರ್ಡ್ ಗಳಲ್ಲಿ 16 ವಾರ್ಡ್ ಗಳ ಅಭ್ಯರ್ಥಿ ಘೋಷಣೆ ಅಂತಿಮಗೊಳಿಸಿದರೂ ನಾಲ್ಕು ವಾರ್ಡ್ ಗಳ ಬಿಕ್ಕಟ್ಟು ಮುಂದುವರಿದಿದೆ. ವಾರ್ಡ್ ಸಂಖ್ಯೆ  12(ಕೆರೆಮೂಲೆ),  13(ಬೂಡು), 15(ಗಾಂಧಿನಗರ-ನಾವೂರು), 17(ಬೋರುಗುಡ್ಡೆ) ವಾರ್ಡ್ ಗಳಲ್ಲಿ ಅಭ್ಯರ್ಥಿ ಘೋಷಣೆ ಆಗಿಲ್ಲ. ಇಲ್ಲಿ ಆಕಾಂಕ್ಷಿಗಳ ಪಟ್ಟಿ ಜಾಸ್ತಿ ಇರುವುದರಿಂದ ಮತ್ತು ಪ್ರಮುಖ ನಾಯಕರು ಆಕಾಂಕ್ಷಿಗಳಾಗಿರುವ ಕಾರಣ ಅಭ್ಯರ್ಥಿ ಆಯ್ಕೆ ನೇತೃತ್ವಕ್ಕೆ ಕಗ್ಗಂಟಾಗಿದೆ.

ಈ ವಾರ್ಡ್ ಗಳಲ್ಲಿ ಅಭ್ಯರ್ಥಿ ಆಯ್ಕೆ ಮಂಗಳವಾರ ಸಂಜೆಯೊಳಗೆ ಪೂರ್ತಿ ಮಾಡುವುದಾಗಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯನ್.ಜಯಪ್ರಕಾಶ್ ರೈ ತಿಳಿಸಿದ್ದಾರೆ.

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೃಷಿ ಪಂಪ್‌ಸೆಟ್‌ಗೆ 7 ತಾಸು ವಿದ್ಯುತ್ ಪೂರೈಕೆಗೆ ರಾಜ್ಯ ಸರ್ಕಾರ ಬದ್ಧ | ಇಂಧನ ಸಚಿವ ಕೆ.ಜೆ. ಜಾರ್ಜ್
February 19, 2025
7:22 AM
by: The Rural Mirror ಸುದ್ದಿಜಾಲ
ರೈತರ ಬೇಡಿಕೆ ಈಡೇರಿಕೆ ಸರ್ಕಾರದ ಮೊದಲ ಆದ್ಯತೆ- ಮುಖ್ಯಮಂತ್ರಿ ಸಿದ್ದರಾಮಯ್ಯ
February 17, 2025
9:27 PM
by: The Rural Mirror ಸುದ್ದಿಜಾಲ
ರಾಜ್ಯದ ನೀರಾವರಿ ವಿಷಯ | ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ- ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
February 16, 2025
3:07 PM
by: The Rural Mirror ಸುದ್ದಿಜಾಲ
ದೊಡ್ಡ ಪ್ರಮಾಣದಲ್ಲಿ ಮೂಲಸೌಲಭ್ಯ ಅಭಿವೃದ್ಧಿಗೆ ಆದ್ಯತೆ | ಸಚಿವ ಅಶ್ವಿನಿ ವೈಷ್ಣವ್
February 16, 2025
2:58 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

NEWS UPDATE ಪಡೆಯಲು ಇಲ್ಲಿ ಬನ್ನಿ...