ನಗರ ಪಂಚಾಯತ್ ತ್ಯಾಜ್ಯ ವಿಲೇವಾರಿಗೆ ವೈಜ್ಞಾನಿಕ ಕ್ರಮ

ಸುಳ್ಯ: ಸುಳ್ಯ ನಗರ ಪಂಚಾಯತ್  ತ್ಯಾಜ್ಯ ವಿಲೇವಾರಿಗೆ ವೈಜ್ಞಾನಿಕ ಕ್ರಮ ಕೈಗೊಳ್ಳಲು ನಗರ ಪಂಚಾಯತ್ ನಿರ್ಧರಿಸಿದೆ.

Advertisement

ನಗರದಲ್ಲಿ ಸಂಗ್ರಹವಾಗುವ ಹಸಿ ಕಸವನ್ನು ಗೊಬ್ಬರ ತಯಾರಿಗೆ ಕಳುಹಿಸಲಾಗುತ್ತದೆ. ಆದರೆ ಒಣ ಕಸವನ್ನು ನಗರ ಪಂಚಾಯತ್ ಕಚೇರಿ ಬಳಿಯ ಕಟ್ಟಡದಲ್ಲಿ ತುಂಬಿಡುವುದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರೇ ಸ್ಥಳಕ್ಕೆ ಆಗಮಿಸಿ ಕಸವನ್ನು ತೆರವು ಮಾಡಲು ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದರು. ಈ ಹಿನ್ನಲೆಯಲ್ಲಿ ಒಣ ಕಸವನ್ನು ವೈಜ್ಞಾನಿಕವಾಗಿ ಸಂಸ್ಕರಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕೆ ಸುಮಾರು 40 ಲಕ್ಷ ರೂಪಾಯಿ  ವೆಚ್ಚದಲ್ಲಿ `ಬರ್ನಿಂಗ್ ಮೆಷಿನ್’ ಖರೀದಿಸಲಾಗುವುದು. 14ನೇ ಹಣಕಾಸು ಯೋಜನೆಯಲ್ಲಿನ ಅನುದಾನವನ್ನು ಬಳಸಿ ಯಂತ್ರದ ಖರೀದಿಗೆ ಕ್ರಿಯಾ ಯೋಜನೆ ತಯಾರಿಸಿ ಜಿಲ್ಲಾಧಿಕಾರಿಗೆ ಅನುಮೋದನೆಗೆ ಕಳುಹಿಸಲಾಗಿದೆ ಎಂದು ನಗರ ಪಂಚಾಯತ್ ಮುಖ್ಯಾಧಿಕಾರಿ ಶ್ರೀಧರ ಎ.ಎಂ. ತಿಳಿಸಿದ್ದಾರೆ.

Advertisement

ಜಿಲ್ಲಾಧಿಕಾರಿಗಳಿಂದ ಅನುಮೋದನೆ ದೊರೆತ ಕೂಡಲೇ ಟೆಂಡರ್ ಕರೆದು ಯಂತ್ರಗಳನ್ನು ಖರೀದಿ ಮಾಡಲಾಗುವುದು. ನಗರ ಪಂಚಾಯತ್ ನಲ್ಲಿ ಸಂಗ್ರಹವಾದ ಕಸದ ವಿಲೇವಾರಿ ಮೊದಲಿಗೆ ನಡೆಸಲಾಗುವುದು. ಪ್ರತಿ ದಿನ ಒಂದು ಟನ್ ಒಣ ಕಸವನ್ನು ಸಂಸ್ಕರಣೆ ಮಾಡುವ ಯಂತ್ರವನ್ನು ತರಿಸಲಾಗುವುದು. ಕಲ್ಚರ್ಪೆಯಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕದಲ್ಲಿಯೇ ಯಂತ್ರಗಳ ಜೋಡಣೆ ಮಾಡಿ ಅಲ್ಲಿಯೇ ಸಂಸ್ಕರಣೆ ಮಾಡಲಾಗುವುದು. ಯಂತ್ರಗಳನ್ನು ತರುವ ಮೊದಲು ಕಲ್ಪರ್ಪೆಯಲ್ಲಿ ಶೇಖರಣೆಯಾಗಿರುವ ಕಸವನ್ನು ವಿಲೆವಾರಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ನೀರಿನ ಟ್ಯಾಂಕ್‍ಗಳ ಸ್ವಚ್ಛತೆಗೆ ಕ್ರಮ
ನಗರ ಪಂಚಾಯತ್ ನ ವಿವಿಧ ವಾರ್ಡ್‍ಗಳಲ್ಲಿನ ಕುಡಿಯುವ ನೀರಿನ ಟ್ಯಾಂಕ್‍ಗಳ ಸ್ವಚ್ಛತೆಯನ್ನು ಕಾಪಾಡಲು ಕ್ರಮ ಕೈಗೊಳ್ಳಲಾಗುವುದು. ಯಂತ್ರಗಳನ್ನು ಬಳಸಿ ಟ್ಯಾಂಕ್‍ಗಳನ್ನು ಸ್ವಚ್ಛ ಮಾಡಿ ಟ್ಯಾಂಕ್‍ನ ಒಳಗಡೆ ಬಣ್ಣ ಬಳಿದು, ಲೀಕೇಜ್‍ಗಳನ್ನು ಮುಚ್ಚಿ ಸಮರ್ಪಕವಾಗಿ ನಿರ್ವಹಣೆ ಮಾಡಲಾಗುವುದು. ನಾಳೆಯಿಂದ ಟ್ಯಾಂಕ್‍ಗಳನ್ನು ಸ್ವಚ್ಛತೆ ಮಾಡುವ ಕಾರ್ಯ ಆರಂಭವಾಗಲಿದೆ ಎಂದು ಮುಖ್ಯಾಧಿಕಾರಿ ಶ್ರೀಧರ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

Advertisement

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Advertisement

Be the first to comment on "ನಗರ ಪಂಚಾಯತ್ ತ್ಯಾಜ್ಯ ವಿಲೇವಾರಿಗೆ ವೈಜ್ಞಾನಿಕ ಕ್ರಮ"

Leave a comment

Your email address will not be published.


*