ಸುಳ್ಯ: ತ್ಯಾಜ್ಯ ಹಾಕಲು, ವಿಲೇವಾರಿ ಮಾಡಲು ಸ್ಥಳವಿಲ್ಲ ಎಂದು ನಗರ ಪಂಚಾಯತ್ ಆವರಣದಲ್ಲಿಯೇ ತುಂಬಿಡಲಾಗಿದ್ದ ತ್ಯಾಜ್ಯವನ್ನು ತೆರವು ಮಾಡುವ ಕಾರ್ಯಾಚರಣೆ ಆರಂಭಗೊಂಡಿದೆ.
Advertisement
ಕಳೆದ ಒಂದು ವರುಷದಿಂದ ಈ ರೀತಿ ನಗರ ಪಂಚಾಯತ್ ಆವರಣದಲ್ಲಿ ಕಸ ತುಂಬಿಡಲಾಗುತ್ತಿದ್ದು ಸುಳ್ಯ ನಗರ ಪಂಚಾಯತ್ ಪರಿಸರ ಅಕ್ಷರಶ: ಡಂಪಿಂಗ್ ಯಾರ್ಡ್ ಆಗಿ ಪರಿವರ್ತನೆಯಾಗಿತ್ತು. ನಗರ ಪಂಚಾಯತ್ ಆವರಣದಲ್ಲಿ ಕಸ ತುಂಬಿಡುವುದು ಭಾರೀ ವಿವಾದ ಸೃಷ್ಟಿಸಿದ ಹಿನ್ನಲೆಯಲ್ಲಿ ಎಚ್ಚೆತ್ತು ಕೊಂಡಿರುವ ನಗರ ಪಂಚಾಯತ್ ಕಸ ವಿಲೇವಾರಿಗೆ ಮುಂದಾಗಿದೆ. ಲಾರಿಗಳಲ್ಲಿ ತುಂಬಿ ಕಸವನ್ನು ಬೇರೆಡೆಗೆ ಸಾಗಿಸಿ ವಿಲೇವಾರಿ ಮಾಡಲಾಗುವುದು. ಬುಧವಾರ ಐದು ಲಾರಿ ಕಸಗಳನ್ನು ತೆರವು ಮಾಡಲಾಗಿದೆ. ಒಂದೆರಡು ದಿನಗಳಲ್ಲಿ ತೆರವು ಕಾರ್ಯ ಪೂರ್ತಿಯಾಗಲಿದೆ ಎಂದು ನಗರ ಪಂಚಾಯತ್ ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement