ಮಡಿಕೇರಿ: ವಿರಾಜಪೇಟೆ ರೋಟರಿ ಕ್ಲಬ್ ವತಿಯಿಂದ ಕ್ಲಬ್ ಮಹೀಂದ್ರ ಹಾಗೂ ಕೂರ್ಗ್ ಕ್ಲೀನ್ ಸಂಘಟನೆಯ ಸಹಯೋಗದಲ್ಲಿ ಸ್ವಚ್ಛತೆಯ ಜಾಗೃತಿ ಸೈಕಲ್‍ಜಾಥಾ ಆಯೋಜಿಸಲಾಗಿತ್ತು.
ವಿರಾಜಪೇಟೆಯಿಂದ ಕರಡ ಗ್ರಾಮದವರೆಗಿನ 15 ಕಿ.ಮೀ. ಸೈಕಲ್ ಜಾಥಾಕ್ಕೆರೋಟರಿ ವಲಯ 6 ರ ಕಾರ್ಯದರ್ಶಿ ಅನಿಲ್ ಎಚ್.ಟಿ. ವಿರಾಜಪೇಟೆಯಲ್ಲಿ ಹಸಿರು ನಿಶಾನೆ ಮೂಲಕ ಚಾಲನೆ ನೀಡಿದರು. ಸ್ವಚ್ಛದೇಶ, ಸ್ವಚ್ಛ ಸಮಾಜದ ಯೋಜನೆ ದೇಶವ್ಯಾಪಿ ಕ್ರಾಂತಿಯಂತಾಗಿದ್ದು ವಿರಾಜಪೇಟೆ ರೋಟರಿ ಸೈಕಲ್ ಜಾಥಾದ ಮೂಲಕ ಈ ಸಂದೇಶನ್ನು ವಿನೂತನವಾಗಿ ಸಾರುತ್ತಿರುವುದು ಶ್ಲಾಘನೀಯ ಎಂದು ಅನಿಲ್ ಹೇಳಿದರು.
ವಿರಾಜಪೇಟೆ ರೋಟರಿಯ ಜೋನಲ್ ಲೆಫ್ಟಿನೆಂಟ್ ಡಾ.ಎಸ್.ವಿ.ನರಸಿಂಹನ್ ಮಾತನಾಡಿ, ಸ್ವಚ್ಛತೆಯ ಜಾಗೃತಿ ಪ್ರತೀಯೋರ್ವರಲ್ಲಿಯೂ ಸದಾ ಕಾಲ ಇರುವಂತಾಗಬೇಕು. ಜೀವನಪೂರ್ತಿ ಸಾಮಾಜಿಕ ಹೊಣೆಗಾರಿಕೆಯಂತೆ ಸ್ವಚ್ಛತೆ ಬಗ್ಗೆ ತಿಳುವಳಿಕೆ ಮೂಡಬೇಕೆಂದು ಅಭಿಪ್ರಾಯಪಟ್ಟರು.
ಕೂರ್ಗ್ ಕ್ಲೀನ್ ಸಂಸ್ಥೆಯ ಬಡುವಂಡ ಅರುಣ್ ಅಪ್ಪಚ್ಚು ಮಾಹಿತಿ ನೀಡಿ, 24 ಸೈಕಲಿಸ್ಟ್ ಗಳು ವಿರಾಜಪೇಟೆಯಿಂದ ಕದನೂರು ಗ್ರಾಮಕ್ಕಾಗಿ ಕ್ಲಬ್ ಮಹೀಂದ್ರದವರೆಗೆ ಸೈಕಲಿಂಗ್ ಜಾಥಾ ನಡೆಸುತ್ತಿದ್ದು, ಜನರಲ್ಲಿ ಸ್ವಚ್ಛತೆಯ ಮಹತ್ವದ ಬಗ್ಗೆ ಸೈಕಲ್‍ಜಾಥಾದ ಮೂಲಕ ತಿಳುವಳಿಕೆ ಮೂಡಿಸುವ ಪ್ರಯತ್ನ ಇದಾಗಿದೆ. ಈಗಾಗಲೇ ಹಲವಾರು ಕಡೆ ಕೂರ್ಗ್ ಕ್ಲೀನ್ ಸಂಘಟನೆಯಿಂದ ಸ್ವಚ್ಛತಾ ಜಾಗೃತಿ ಅಭಿಯಾನಗಳು ನಡೆದಿದೆ. ನನ್ನ ಕಸ – ನನ್ನ ಹೊಣೆ ಎಂಬುದು ಪ್ರತಿಯೋರ್ವನ ಮನಸ್ಸಿನಲ್ಲಿ ತಾನಾಗಿಯೇ ಮೂಡಿದರೆ ಸ್ವಚ್ಛ ಸಮಾಜದ ಪರಿಕಲ್ಪನೆ ಸುಲಭವಾಗಿ ಈಡೇರುತ್ತದೆ ಎಂದರಲ್ಲದೇ, ಅನೇಕರು ಕೊಡಗಿನ ನದಿಗಳಿಗೆ ಮನೆಯ ತ್ಯಾಜ್ಯ ತಂದು ಸುರಿದು ಪವಿತ್ರ ನದಿಯನ್ನು ಮಲಿನಗೊಳಿಸುತ್ತಿದ್ದಾರೆ. ಈ ಮಾಲಿನ್ಯ ನಿಲ್ಲಬೇಕುಎಂದು ಮನವಿ ಮಾಡಿದರು.
ಕ್ಲೀನ್ ಕೂರ್ಗ್ ಸಂಘಟನೆಯ ಸಂಚಾಲಕ ಪ್ರಶಾಂತ್ , ವಿರಾಜಪೇಟೆ ರೋಟರಿ ಕ್ಲಬ್‍ಅಧ್ಯಕ್ಷ ಕೆ,ಎಚ್, ಆದಿತ್ಯ , ಕ್ಲಬ್ ಮಹೀಂದ್ರ ರೆಸಾರ್ಟ್ ಮ್ಯಾನೇಜರ್ ಜಿಷ್ಣುಉಣ್ಣಿ ಮಾತನಾಡಿದರು. ವಿರಾಜಪೇಟೆರೋಟರಿ ಕಾಯದರ್ಶಿ ಭರತ್‍ರಾಮ್‍ರೈ , ರೋಟರಿ ಸದಸ್ಯರು ಹಾಜರಿದ್ದರು.