ನಪಂ ಚುನಾವಣೆ: ಚುನಾವಣಾ ಬಹಿಷ್ಕಾರ ಹಿಂಪಡೆದ ಟೂರಿಸ್ಟ್ ವಾಹನ ಚಾಲಕರು

Advertisement

ಸುಳ್ಯ‌:ಸುಳ್ಯ ತಾಲೂಕು ಟೂರಿಸ್ಟ್ ಕಾರು, ವ್ಯಾನ್ ಚಾಲಕ -ಮಾಲಕರ ಸಂಘವು ಘೋಷಿಸಿದ್ದ ನ.ಪಂ.ಚುನಾವಣಾ ಬಹಿಷ್ಕಾರವನ್ನು ಹಿಂಪಡೆಯಲಾಗಿದೆ.

Advertisement

ನ.ಪಂ.ಆಡಳಿತಾಧಿಕಾರಿ ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್ ಮತ್ತು ನಗರ ಪಂಚಾಯತ್ ಮುಖ್ಯಾಧಿಕಾರಿ ಶ್ರೀಧರ್ ಅವರು ಸಂಘದ ಪದಾಧಿಕಾರಿಗಳೊಂದಿಗೆ ನಡೆಸಿದ ಮಾತುಕತೆಯ ಹಿನ್ನಲೆಯಲ್ಲಿ ಬಹಿಷ್ಕಾರವನ್ನು ಹಿಂಪಡೆಯಲಾಗಿದೆ. ಬಳಿಕ ಇವರು ಅಳವಡಿಸಿದ್ದ ಚುನಾವಣಾ ಬಹಿಷ್ಕಾರ ಬ್ಯಾನರ್ ತೆರವು ಮಾಡಲಾಯಿತು. ಟೂರಿಸ್ಟ್ ಕಾರು, ವ್ಯಾನ್ ಗಳಿಗೆ ತಂಗಲು ಸುಸಜ್ಜಿತ ನಿಲ್ದಾಣ ನಿರ್ಮಾಣ ಮಾಡದೇ ಇರುವುದನ್ನು ಪ್ರತಿಭಟಿಸಿ ಚುನಾವಣೆ ಬಹಿಷ್ಕಾರ ಮಾಡಲು ನಿರ್ಧರಿಸಲಾಗಿತ್ತು. ತಾತ್ಕಾಲಿಕವಾಗಿ ಈಗ ಇರುವ ನಿಲ್ದಾಣದಲ್ಲೇ ನಾಮ ಫಲಕ ಅಳವಡಿಸಿ ಟೂರಿಸ್ಟ್ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲು ತಹಶೀಲ್ದಾರ್ ಸೂಚನೆ ನೀಡಿದರು. ಮುಂದೆ ಸರಕಾರಿ ಜಮೀನು ಲಭಿಸಿದಲ್ಲಿ ಬೇರೆ ಕಡೆ ಸುಸಜ್ಜಿತ ನಿಲ್ದಾಣ ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು. ಈ ಹಿನ್ನಲೆಯಲ್ಲಿ ಚುನಾವಣಾ ಬಹಿಷ್ಕಾರ ಹಿಂಪಡೆಯಲಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

 

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ನಪಂ ಚುನಾವಣೆ: ಚುನಾವಣಾ ಬಹಿಷ್ಕಾರ ಹಿಂಪಡೆದ ಟೂರಿಸ್ಟ್ ವಾಹನ ಚಾಲಕರು"

Leave a comment

Your email address will not be published.


*