ನಪಂ ಚುನಾವಣೆ : ಸುಳ್ಯದ ಅಭಿವೃದ್ಧಿಗೆ ಆಮ್ ಆದ್ಮಿ ಪಕ್ಷದ ಆದ್ಯತೆ ಪ್ರಕಟ

Advertisement

ಸುಳ್ಯ: ಸುಳ್ಯದ ಅಭಿವೃದ್ಧಿ ಆಮ್ ಆದ್ಮಿ ಪಕ್ಷವು ತನ್ನದೇ ವಿವಿಧ ಆದ್ಯತೆಗಳನ್ನು ಪ್ರಕಟಿಸಿದೆ. ಸುಳ್ಯ ನಗರವನ್ನು  ಅಭಿವೃದ್ಧಿ ಮಾಡುವ  ಬಗ್ಗೆ ಆಮ್ ಆದ್ಮಿ ಈ ಬಾರಿ ಚುನಾವಣೆಗೂ ಸ್ಪರ್ಧೆ ಮಾಡುತ್ತಿದೆ. 15 ಅಂಶಗಳನ್ನು ಆಮ್ ಆದ್ಮಿ ಪಟ್ಟಿ ಮಾಡಿದೆ.

Advertisement

ಸುಳ್ಯನಗರ, ಇಡೀ ಸುಳ್ಯ ತಾಲೂಕಿನ ಜನತೆಗಾಗಿ ಮಾತ್ರವಲ್ಲದೆ ಇಲ್ಲಿನ ಶಿಕ್ಷಣ ಕ್ಷೇತ್ರದಲ್ಲಿ , ವ್ಯಾಪಾರ ಮಾಡುವ, ವಾಹನ ಚಾಲನೆ ಮಾಡುವ ಎಲ್ಲ ರೀತಿ ವೃತ್ತಿಯನ್ನು ಅವಲಂಬಿಸಿದ ಸುಳ್ಯ ಮತದಾರದಲ್ಲದಿದ್ದರೂ ಮತ್ತು ಇತರ ವಿಚಾರಕ್ಕೆ ನಗರಕ್ಕೆ ಭೇಟಿ ನೀಡುವ ಎಲ್ಲಾ ಜನಸಾಮಾನ್ಯರ ಆಶಾದಾಯಕ ವಾತಾವರಣ ನಿರ್ಮಾಣದ ಅಭಿವೃದ್ಧಿ ಬಯಸುತ್ತದೆ. ಸುಳ್ಯದ ಜನತೆ, ವಿದ್ಯಾರ್ಥಿಗಳು ಹಾಗೂ ಇಲ್ಲಿ ಬೇಟಿ ಮಾಡುವ ಜನರ ಪ್ರಮುಖ ಆದ್ಯತೆಗಳು ಹೀಗಿದೆ,

Advertisement
Advertisement

ಸುಳ್ಯದ ಸರ್ವಾಂಗೀಣ ಅಭಿವೃದ್ಧಿ ಒಂದು ನಗರ ಪಂಚಾಯತ್  ಪುರಸಭೆ ಅಂಗೀಕಾರಕ್ಕೆ ಒತ್ತಾಯ

  •  ಅತ್ಯುತ್ತಮ ಅಗಲೀಕೃತ ಸರ್ವಋತು ರಸ್ತೆ ಸಂಪರ್ಕ
  •  ಶುದ್ದ ಕುಡಿಯುವ ನೀರು 20000 ಲೀಟರ್ ಉಚಿತ, ಪಯಸ್ವಿನಿ ನದಿಗೆ ಕಿಮಿಗೆ ಒಂದರಂತೆ ಕನಿಷ್ಟ 5 ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಒತ್ತಾಯ, ಮಳೆ ನೀರು ಕೊಯ್ಲು ಯೋಜನೆ ,ಸರಕಾರಿ ಹಾಗೂ ಖಾಸಗಿ ಬಾವಿ,ಕೊಳವೆಬಾವಿ ಪುನರುಜ್ಜೀವನ ಯೋಜನೆ, ಅಂತರ್ಜಲ ಅಭಿವೃದ್ಧಿ ಯೋಜನೆ
  •  24/7 ವಿದ್ಯುತ್ ಸೌಲಭ್ಯ, ಸೋಲಾರ್ ವಿದ್ಯುತ್ ವಾರ್ಡ್ ಗೆ ಪರಿವರ್ತನೆ
  •  ಅತ್ಯಂತ ಸ್ವಚ್ಛ ನಗರವಾಗಿ ಪರಿವರ್ತನೆ
  •  ಒಳ ಚರಂಡಿ  ಯೋಜಿತ ಗ್ರೇಟರ್ ಸುಳ್ಯ
  •  ಸುಳ್ಯದಲ್ಲಿ ರೈತರಿಗೆ ಮತ್ತು ಎಲ್ಲಾ ವ್ಯಾಪಾರಕ್ಕೆ  , ವೃತ್ತಿಗಳಿಗೆ ಅನುಕೂಲ ವಾತಾವರಣ.
  •  ವಾರ್ಡ್ ಸಮಿತಿ ಮತ್ತು ಎಲ್ಲಾ ನಗರ ಸಂಘ ಸಂಸ್ಥೆಗಳ ಆಧಾರಿತ ಕಾವಲು ಸಮಿತಿ
  •  ತಜ್ಞರ ಸಮಿತಿಗಳ ಮೂಲಕ ಯೋಜನೆ ಕಾರ್ಯರೂಪ
  •  ರಸ್ತೆ ಇಕ್ಕೆಲಗಳಲ್ಲಿ ಪಾದಚಾರಿ ಕಾಲುದಾರಿ ಅಭಿವೃದ್ಧಿ
  •  ಎಲೆಕ್ಟ್ರಿಕ್ ಸ್ಮಶಾನ ನಿರ್ಮಾಣಕ್ಕೆ ಆದ್ಯತೆ
  • ಪಾರ್ಕುಗಳ ಅಭಿವೃದ್ಧಿ ,ನಗರದಲ್ಲಿ ಹಸಿರು ಅಭಿವೃದ್ಧಿ
  •  ಕ್ರೀಡಾಂಗಣಗಳ ಅಭಿವೃದ್ಧಿ
  •  ಸೂಚನಾ ಫಲಕಗಳ ನಗರ
  • ಪಾರದರ್ಶಕ, ಭ್ರಷ್ಟಾಚಾರ ರಹಿತ ವೈಜ್ಞಾನಿಕ ದೃಷ್ಟಿಕೋನದ ಆಡಳಿತ, ಪೂರ್ಣ ಪ್ರಮಾಣದಲ್ಲಿ ಮುನ್ಸಿಪಾಲಿಟಿ ಕಾನೂನು ಅನ್ವಯ ತೆರಿಗೆ ಸಂಗ್ರಹ ಮತ್ತು ಆಡಳಿತ ನಿರ್ವಹಣೆ
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ನಪಂ ಚುನಾವಣೆ : ಸುಳ್ಯದ ಅಭಿವೃದ್ಧಿಗೆ ಆಮ್ ಆದ್ಮಿ ಪಕ್ಷದ ಆದ್ಯತೆ ಪ್ರಕಟ"

Leave a comment

Your email address will not be published.


*