ನಮೋ 2.0 ಸಂಪುಟದಲ್ಲಿ ಡಿ ವಿ “ಎಸ್ “

Advertisement
ಸುಳ್ಯ: ಇಂದು ಸಂಜೆ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವರು. ಅವರ ಜೊತೆಗೆ ಸಂಪುಟದಲ್ಲಿ ರಾಜ್ಯದ ವಿವಿಧ ಸಂಸದರು ಕೂಡಾ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವರು. ಅವರಲ್ಲಿ ಸುಳ್ಯದ ದೇವರಗುಂಡದ ಡಿ.ವಿ.ಸದಾನಂದ ಗೌಡ ಅವರೂ ಒಬ್ಬರಾಗಿದ್ದು ಇದನ್ನು ಸದಾನಂದ ಗೌಡ ಅವರು ಖಚಿತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯದಿಂದ ಬೆಳಗಾವಿ ಸಂಸದ ಸುರೇಶ್ ಅಂಗಡಿ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಅವರೂ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದರಲ್ಲಿ ಸುರೇಶ್ ಅಂಗಡಿ ಅವರು ಟ್ವೀಟ್ ಮೂಲಕ ಖಚಿತ ಪಡಿಸಿದ್ದಾರೆ.
ಇನ್ನು ಕಳೆದ ಬಾರಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ನಿರ್ಮಲಾ ಸೀತಾರಾಮನ್ ಅವರಿಗೆ ಈ ಬಾರಿ ಕೂಡ ರಾಜ್ಯದಿಂದಲೇ ಮಂತ್ರಿ ಸ್ಥಾನ ನೀಡುವುದು ಖಚಿತವಾಗಿದೆ. ಇದರ ಜೊತೆಗೆ  ಎನ್‌ಡಿಎ ಮಿತ್ರಕೂಟದ ಸಂಸದರು ಸೇರಿದಂತೆ 50 ರಿಂದ 60 ಸಂಸದರು ಸಚಿವ ಸ್ಥಾನಕ್ಕೆ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement
Advertisement

Be the first to comment on "ನಮೋ 2.0 ಸಂಪುಟದಲ್ಲಿ ಡಿ ವಿ “ಎಸ್ “"

Leave a comment

Your email address will not be published.


*