ನಮ್ಮನ್ನ ನಾಲ್ಕು ಜನ ಮೆಚ್ಚಿ ಗೌರವಿಸುವಂತಾಗಬೇಕು: ನಟ ಪ್ರವೀಣ್ ತೇಜ್

September 16, 2019
11:45 AM

ಬೆಳ್ಳಾರೆ: ನಾವು ಬದುಕಿದ್ದಷ್ಟೂ ಕಾಲ ಏನನ್ನಾದರೂ ಸಾಧಿಸಲೇಬೇಕು. ಜೀವದಲ್ಲಿ ನಮ್ಮನ್ನು ನಾಲ್ಕು ಜನಮೆಚ್ಚಬೇಕು ಮತ್ತು ಗೌರವಿಸಬೇಕು. ಆಗ ನಮ್ಮ ಜನ್ಮಕ್ಕೆ ಸಾರ್ಥಕತೆ ದೊರೆಯುವುದು  ಎಂದು ಚಲನಚಿತ್ರ ನಟ ಪ್ರವೀಣ್ ತೇಜ್ ಹೇಳಿದರು.

Advertisement
Advertisement
Advertisement

ಬೆಳ್ಳಾರೆ ಜೇಸಿಐ ಸಪ್ತಾಹ ಪ್ರಯುಕ್ತ ಕೋಟೆಮುಂಡುಗಾರು ದಕಜಿಹಿಪ್ರಾ ಶಾಲೆಯಲ್ಲಿ ಖ್ಯಾತ ವೈದ್ಯ ಡಾ| ನಾರಾಯಣ ಭಟ್ ಸ್ಮರಣಾರ್ಥ ನಡೆದ ಉಚಿತ ವೈದ್ಯಕೀಯ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

Advertisement

ಮುಖ್ಯ ಅತಿಥಿಯಾದ ಗೃಹರಕ್ಷಕದಳದ ದಕ್ಷಿಣ ಕನ್ನಡ ಜಿಲ್ಲಾ ಕಮಾಂಡೆಂಟ್ ಡಾ| ಮುರಳಿಮೋಹನ ಚೂಂತಾರು ಮಾತನಾಡಿ ಸಾರ್ವಜನಿಕರಿಗೆಂದೇ ಏರ್ಪಡಿಸುವ ಉಚಿತ ವೈದ್ಯಕೀಯ ಶಿಬಿರದ ಲಾಭವನ್ನು ಜನತೆ ಪಡೆದುಕೊಳ್ಳಬೇಕು. ಅರೋಗ್ಯವನ್ನು ಸದಾ ಸ್ವಾಸ್ಥ್ಯವಾಗಿಡಬೇಕು ಎಂದರು. ಡಾ| ನಾರಾಯಣ ಭಟ್ ಭಾವಚಿತ್ರಕ್ಕೆ ಅವರ ಪತ್ನಿ ಮಹಾಲಕ್ಷ್ಮೀ ಪುಷ್ಪಾರ್ಚನೆಗೈದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ಳಾರೆ ಜೆಸಿಐ ಅಧ್ಯಕ್ಷ ಲೋಕೇಶ್ ತಂಟೆಪ್ಪಾಡಿ ವಹಿಸಿ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಸುಳ್ಯ ಜನಜಾಗೃತಿ ವೇದಿಕೆಯ ಅಧ್ಯಕ್ಷ ವಿಶ್ವನಾಥ ರೈ ಕಳಂಜ, ಚರ್ಮರೋಗ ತಜ್ಞ ಡಾ| ನವೀನ್, ಕಳಂಜ ಯುವಕ ಮಂಡಲ ಅಧ್ಯಕ್ಷ ಲಕ್ಷ್ಮೀಶ ಕಜೆಮೂಲೆ, ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಗಂಗಾಧರ ತೋಟದಮೂಲೆ, ಜೇಸಿಐ ಪೂರ್ವಾಧ್ಯಕ್ಷ ಜಯರಾಮ ಉಮಿಕ್ಕಳ, ಕಳಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಯಶೋಧ.ಎಂ ಉಪಸ್ಥಿತರಿದ್ದರು.

ಚಲನಚಿತ್ರ ನಿರ್ಮಾಪಕ ಮುರಳಿಧರ್ ಪ್ರಸ್ತಾವಿಸಿ ಸ್ವಾಗತಿಸಿದರು. ಅಂದಾಜು ಒಂದೂವರೆ ಸಾವಿರ ಗ್ರಾಮಸ್ಥರು ಶಿಬಿರದಲ್ಲಿ ಭಾಗವಹಿಸಿದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಈ ಬಾರಿಯ ಬಜೆಟ್‌ನಲ್ಲಿ ಅಡಿಕೆ ಬೆಳೆ ರಕ್ಷಣೆಗೆ 67 ಕೋಟಿ ರೂಪಾಯಿ ನಿರೀಕ್ಷೆ | ಕರ್ನಾಟಕ ಸರ್ಕಾರದಿಂದಲೂ ತನ್ನ ಪಾಲನ್ನು ಮೀಸಲಿಡಲು ಒತ್ತಾಯ |
January 24, 2025
8:57 PM
by: ದ ರೂರಲ್ ಮಿರರ್.ಕಾಂ
ವರ್ಷದ ಬಳಿಕ ಮನೆಗೆ ಸೇರಿದ ಬಿಹಾರದ ಮಹಿಳೆ | ಪುನರ್ಜನ್ಮ ನೀಡಿದ ಸಾಯಿನಿಕೇತನ ಸೇವಾಶ್ರಮ |
January 24, 2025
11:33 AM
by: ದ ರೂರಲ್ ಮಿರರ್.ಕಾಂ
ಮುಂದಿನ ವರ್ಷದಿಂದ ಎಪಿಎಂಸಿಗಳಲ್ಲಿ ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ
January 24, 2025
6:49 AM
by: The Rural Mirror ಸುದ್ದಿಜಾಲ
ಶ್ರೀಲಂಕಾದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾದರಿ |
January 23, 2025
8:49 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror