ಪುತ್ತೂರು: ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ಕ್ಯಾಂಪ್ಕೋದ ನರೇಂದ್ರ ಮೋದಿ ಅಭಿಮಾನಿ ಬಳಗದ ಸಿಬಂದಿಗಳಿಂದ ಗುರುವಾರ ಮಧ್ಯಾಹ್ನ ಊಟದ ವೇಳೆ ಪಾಯಸದ ಹಾಗೂ ಲಡ್ಡು ವಿತರಣೆ ನಡೆಯಿತು.
ಇದೇ ವೇಳೆ ನರೇಂದ್ರ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಮಂಗಳೂರು ಸಿಟಿ ಸೆಂಟರ್ ಎದುರು ವಸಂತಮಹಲ್ ಬಳಿ ಸಂಜೆ 5 ಗಂಟೆಗೆ ಮಹಿಳೆಯರಿಗೆ ಉಚಿತ ಮಲ್ಲಿಗೆಹೂವು ವಿತರಣೆಯು ಮಲ್ಲಿಗೆ ಹೂವಿನ ವ್ಯಾಪಾರಿ ಫಕೀರಬ್ಬ ಅವರಿಂದ ನಡೆಯಲಿದೆ. 100 ಅಟ್ಟೆ (400 ಚೆಂಡು) ಮಲ್ಲಿಗೆಯನ್ನು ಮಹಿಳೆಯರಿಗೆ ಉಚಿತವಾಗಿ ಹಂಚಲಾಗುವುದು ಎಂದು ತಿಳಿಸಿದ್ದಾರೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel