ಧರ್ಮಸ್ಥಳ: ಸಹನಶೀಲ ಸ್ವಭಾವದ, ಅಗಾಧ ಭಾಷಾ ಪಾಂಡಿತ್ಯ ಹೊಂದಿರುವ, ಹೃದಯ ಶ್ರೀಮಂತಿಕೆ ಹೊಂದಿರುವ ನಾಡೋಜ ಹಂಪಸಂದ್ರ ನಾಗರಾಜಯ್ಯ (ಹಂಪನಾ) ಅವರುಕನ್ನಡ ನಾಡು-ನುಡಿ, ಸಂಸ್ಕೃತಿಗೆ ಅಮೂಲ್ಯ ಸೇವೆ ನೀಡಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಶುಕ್ರವಾರ ಉಜಿರೆಯಲ್ಲಿಎಸ್.ಡಿ.ಎಂ.ಕಾಲೇಜಿನಲ್ಲಿ ಕನ್ನಡ ಸಂಘ ಮತ್ತು ಕನ್ನಡ ಸಾಹಿತ್ಯ ಪರಿಷತ್‍ನ ಬೆಳ್ತಂಗಡಿನ ತಾಲೂಕು ಘಟಕದ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಹಂಪನಾ ವ್ಯಕ್ತಿ, ಕೃತಿ: ಅನುಸಂಧಾನ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ಇಂದು “ಶಾಸ್ತ್ರಿ” ಪರಂಪರೆ ಕಣ್ಮರೆಯಾಗಿದೆ. ಜೈನಧರ್ಮದ ಆಳವಾದ ಅಧ್ಯಯನ ಮಾಡಿದವರು “ಶಾಸ್ತ್ರಿ” ಆಗುತ್ತಾರೆ. ಆದರೆ ಇಂದು ವಿಶೇಷ ಧಾರ್ಮಿಕ ಅಧ್ಯಯನ ಮಾಡಿದ ಶಾಸ್ತ್ರಿಗಳ ಕೊರತೆ ಎದ್ದು ಕಾಣುತ್ತಿದೆ. ಜೈನಧರ್ಮದಲ್ಲಿ ವಿಶೇಷ ಅಧ್ಯಯನ, ಸಂಶೋಧನೆ ಮಾಡಿದ ಹಂಪನಾ ಇಂದುಎಲ್ಲರಿಗೂ ಧರ್ಮದ ಬಗ್ಗೆ ಅಧಿಕೃತ ಮಾಹಿತಿ ನೀಡುವ “ಹಂಪನಾ ಶಾಸ್ತ್ರಿ” ಆಗಿದ್ದಾರೆ ಎಂದು ಹೆಗ್ಗಡೆಯವರು ಶ್ಲಾಘಿಸಿದರು.
ನಾಡೋಜ ಕಮಲಾ ಹಂಪನಾ ವಿರಚಿತ “ಬೇರು-ಬೆಂಕಿ-ಬಿಳಲು” ಕೃತಿ ಬಿಡುಗಡೆ ಮಾಡಿದ ಹೇಮಾವತಿ ವಿ. ಹೆಗ್ಗಡೆಯವರು ಮಾತನಾಡಿ, ತಮ್ಮಜೀವನಾನುಭವವನ್ನು, ನೋವು-ನಲಿವನ್ನು ಕಮಲಾ ಹಂಪನಾ ಪುಸ್ತಕದಲ್ಲಿ ವಿವರಿಸಿದ್ದು ಕಾದಂಬರಿಯಂತೆ ಸುಲಿತವಾಗಿ ಓದಿಸಿಕೊಂಡು ಹೋಗುತ್ತದೆಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಿವೃತ್ತ ಪ್ರಾಧ್ಯಾಪಕ ಬಿ.ಎ. ವಿವೇಕ ರೈ ಶುಭಾಶಂಸನೆ ಮಾಡಿ, ವ್ಯಕ್ತಿಯು ವೃತ್ತಿಯಿಂದ ನಿವೃತ್ತನಾದ ಬಳಿಕ ಆತನ ನಿಜವಾದಜೀವನಆರಂಭವಾಗುತ್ತದೆ. ವಿದ್ಯಾರ್ಥಿಗಳು ನಿರಂತರಓದುವ ಹವ್ಯಾಸದೊಂದಿಗೆಅಧ್ಯಯನ ಶೀಲತೆ ಬೆಳೆಸಿಕೊಳ್ಳಬೇಕು.ಪ್ರಾಕೃತ ಹಾಗೂ ಸಂಸ್ಕೃತ ಅಧ್ಯಯನದೊಂದಿಗೆ ಹಳೆಗನ್ನಡ ಕಾವ್ಯಗಳನ್ನು ಓದಬೇಕು ಎಂದರು.
ಅಧ್ಯಕ್ಷತೆ ವಹಿಸಿದ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ನಾಡೋಜ ಚಂದ್ರಶೇಖರ ಕಂಬಾರ ಮಾತನಾಡಿ, ಬ್ರಿಟಿಷರ ಆಡಳಿತದಿಂದ ನಾವು ಅವರದಾಸಾನುದಾಸರಾಗಿ ಬೆಳೆಯಬೇಕಾಯಿತು. ಸ್ವಾತಂತ್ರ್ಯದೊರಕಿದ ಬಳಿಕ ಭಕ್ತಿ ಚಳವಳಿಯಿಂದ ಧಾರ್ಮಿಕ ಉನ್ನತಿ ಸಾಧ್ಯವಾಯಿತು.ಎಲ್ಲರೂ ಮುಕ್ತವಾದ ಭಕ್ತಿಯಿಂದ ದೇವರ ಅನುಗ್ರಹಕ್ಕೆ ಪಾತ್ರರಾಗಲು ಸಾಧ್ಯವಾಯಿತು.ಯಾವುದು ವಿನಯವನ್ನು ನೀಡುತ್ತದೊ ಅದು ನಿಜವಾದ ವಿದ್ಯೆ. ಕಥೆಗಳ ಮೂಲಕ ಬದುಕಿಗೆ ಪೂರಕವಾದ ಅಮೂಲ್ಯ ಮಾರ್ಗದರ್ಶನ ಸಿಗುತ್ತದೆ.ಈ ದಿಸೆಯಲ್ಲಿ ಮೂರು ಸಾವಿರ ಕಥೆಗಳನ್ನು ಬರೆದ ಹಂಪನಾ ಕೊಡುಗೆಅಮೂಲ್ಯವಾಗಿದೆ.ಕಥೆಗಳ ಮೂಲಕ ಬ್ರಹ್ಮ ಸುಖ ನೀಡುವರ ಸಾನುಭವ ದೊರಕುತ್ತದೆ.ನಮ್ಮದುಃಖ ದುಮ್ಮಾನಗಳು ದೂರವಾಗುತ್ತವೆ.
ಪ್ರಾಕೃತ ವಿಶ್ವವಿದ್ಯಾಲಯ ಪ್ರಾರಂಭಿಸಬೇಕುಎಂದುಅವರು ಸರ್ಕಾರವನ್ನು ಒತ್ತಾಯಿಸಿದರು.
ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ.ಎಸ್. ಪ್ರಭಾಕರ್ ಮತ್ತು ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರಕುಮಾರ್‍ಹಾಗೂ ಡಾ. ಬಿ. ಯಶೋವರ್ಮ, ರಾಜ್ಯಶ್ರೀ ಹಂಪನಾ, ಮಾಜಿ ಸಚಿವ ಕೆ.ಅಭಯಚಂದ್ರಜೈನ್ ಉಪಸ್ಥಿತರಿದ್ದರು.
ಕಾಲೇಜಿನಕನ್ನಡ ವಿಭಾಗದ ಮುಖ್ಯಸ್ಥ ಡಾ. ಬಿ.ಪಿ. ಸಂಪತ್‍ಕುಮಾರ್ ಸ್ವಾಗತಿಸಿದರು.ಪ್ರಾಂಶುಪಾಲ ಪ್ರೊ.ಎಸ್. ಸತೀಶ್ಚಂದ್ರ ಧನ್ಯವಾದವಿತ್ತರು.ಡಾ. ರಾಜಶೇಖರ ಹಳೆಮನೆ ಕಾರ್ಯಕ್ರಮ ನಿರ್ವಹಿಸಿದರು.