ನಾಳೆಯೇ ಲೋಕಸಭಾ ಚುನಾವಣಾ ಫಲಿತಾಂಶ : ವಿವಿ ಪ್ಯಾಟ್ ಚೀಟಿ ಎಣಿಕೆಯ ಬೇಡಿಕೆ ತಿರಸ್ಕಾರ

Advertisement
Advertisement
Advertisement
ನವದೆಹಲಿ: ಲೋಕಸಭಾ ಚುನಾವಣಾ ಫಲಿತಾಂಶ ನಾಳೆಯೇ ಪ್ರಕಟವಾಗಲಿದೆ. ಕೊನೆಯ ಕ್ಷಣದಲ್ಲಿ ರಾಜಕೀಯ ಪಕ್ಷಗಳ ನಾಯಕರು ಫಲಿತಾಂಶಕ್ಕೆ ಮುನ್ನವೇ ವಿವಿಪ್ಯಾಟ್ ಚೀಟಿಯನ್ನು  ಎಣಿಕೆ ಮಾಡಿದ ಬಳಿಕವೇ ಫಲಿತಾಂಶ ಘೋಷಣೆ ಮಾಡಬೇಕು ಎಂಬ ಬೇಡಿಕೆಯನ್ನು ಚುನಾವಣಾ ಆಯೋಗವು  ತಿರಸ್ಕರಿಸಿದೆ.
ವಿದ್ಯುನ್ಮಾನ ಮತಯಂತ್ರ ಮತ್ತು  ಮತದಾನ ಖಾತ್ರಿಯ ಬಗ್ಗೆ ಯಂತ್ರದ ಚೀಟಿಗಳನ್ನು ತಾಳೆ ಮಾಡಬೇಕೆಂದು ವಿಪಕ್ಷಗಳು ಚುನಾವಣಾ ಆಯೋಗಕ್ಕೆ ಮಂಗಳವಾರ ಮನವಿ ಮಾಡಿದ್ದವು. ಆದರೆ ಚುನಾವಣಾ ಆಯೋಗವು  ಈ ಬೇಡಿಕೆಯನ್ನು ತಿರಸ್ಕರಿಸಿದ್ದು ಮತ ಎಣಿಕೆಯ ಕಡೇ ಕ್ಷಣದ ತಯಾರಿ ನಡೆದಿರುವಾಗ  ಯಾವ ಬದಲಾವಣೆಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.
ಆದರೆ ಏನಾದರೂ ವ್ಯತ್ಯಾಸಗಳು ಕಂಡು ಬಂದರೆ ಅಂತಹ ಲೋಕಸಭೆ ಕ್ಷೇತ್ರದ ಎಲ್ಲಾ ಮತಗಳನ್ನು ಮತ್ತೊಮ್ಮೆ ಪರಿಶೀಲನೆ ಮಾಡಬೇಕು, ಚೀಟಿ ಎಣಿಕೆ ಮಾಡಬೇಕು ಎಂದು  ವಿವಿಧ ಪಕ್ಷಗಳು ಒತ್ತಾಯ ಮಾಡಿವೆ.
ಸುಪ್ರೀಂ ಕೋರ್ಟ್ ಕೂಡಾ ವಿವಿಪ್ಯಾಟ್ ಗಳ  ತಾಳೆಯನ್ನು ಗಮನಿಸಿ ಫಲಿತಾಶ ನೀಡಬೇಕೆಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸಿದೆ, ಅಲ್ಲದೆ  ಜನರ ಆಯ್ಕೆಯನ್ನು ಅನುಮಾನಿಸುವುದಕ್ಕೆ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸಂಜೆ 5 ಗಂಟೆ ಒಳಗೆ ಫಲಿತಾಂಶದ ನಿರೀಕ್ಷೆ :
ದೇಶದ ಎಲ್ಲಾ ಲೋಕಸಭಾ ಕ್ಷೇತ್ರಗಳ ಫಲಿತಾಂಶ ಸಂಜೆಯ ವೇಳೆಗೆ ಲಭ್ಯವಾಗಲಿದೆ. ಪ್ರತೀ  ಲೋಕಸಭಾ ಕ್ಷೇತ್ರದ ತಲಾ 5 ಮತಗಟ್ಟೆಗಳ ವಿವಿಪ್ಯಾಟ್ ಚೀಟಿಗಳನ್ನು ಎಣಿಕೆ ಮಾಡಿ, ಇವಿಎಂ ಫಲಿತಾಂಶದ ಜೊತೆ ತಾಳೆ ಮಾಡಬೇಕಾಗುತ್ತದೆ. ಇದರಿಂದಾಗಿ ಫಲಿತಾಂಶ ಪ್ರಕಟವಾಗಲು ಸುಮಾರು 4 ಗಂಟೆ ತಡವಾಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಇದೀಗ ಈ ಬಗ್ಗೆ ಗೊಂದಲ ನಿವಾರಣೆಯಾಗಿದ್ದು ಸಂಜೆ 3 ಗಂಟೆ ಒಳಗಡೆ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ.

 

Advertisement
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ನಾಳೆಯೇ ಲೋಕಸಭಾ ಚುನಾವಣಾ ಫಲಿತಾಂಶ : ವಿವಿ ಪ್ಯಾಟ್ ಚೀಟಿ ಎಣಿಕೆಯ ಬೇಡಿಕೆ ತಿರಸ್ಕಾರ"

Leave a comment

Your email address will not be published.


*