ಸುಳ್ಯ: ಕಳೆದ ಕೆಲವು ದಿನಗಳಿಂದ ಅಲ್ಲಲ್ಲಿ ಮಳೆಯಾಗುತ್ತಿದೆ. ನಾಳೆಯ ವಾತಾವರಣ ಸುಳ್ಯ ಪ್ರದೇಶದಲ್ಲಿ ಹೇಗಿರಬಹುದು ಎಂಬ ನಿರೀಕ್ಷೆ, ಕಾತರ ಎಲ್ಲರಲ್ಲೂ ಇದೆ.
ಹವಾಮಾನ ಇಲಾಖೆ ಆಗಾಗ ವೆದರ್ ರಿಪೋರ್ಟ್ ನೀಡುತ್ತದೆ. ಭಾರತದ ಹವಾಮಾನ ತಿಳಿಸುವ ಉಪಗ್ರಹ ಚಿತ್ರವನ್ನು ಆಗಾಗ ಅಪ್ ಲೋಡ್ ಕೂಡಾ ಮಾಡುತ್ತಾರೆ. ಆದರೆ ಇದನ್ನು ಅರ್ಥ ಮಾಡಿಕೊಳ್ಳಲು ನಮಗೆ ಕಷ್ಟವಾಗುತ್ತದೆ. ಇಂತಹ ಸೌಲಭ್ಯವನ್ನು ಸರಳವಾಗಿ ಗಮನಿಸಿ ನಮಗೆ ತಿಳಿಸುತ್ತಾರೆ, ಕೃಷಿಕ ಸಾಯಿಶೇಖರ್ ಕರಿಕಳ. ಅನೇಕರು ನಾಳೆಯ ವೆದರ್ ಹೇಗಿದೆ ಎಂದು ಸಾಯಿಶೇಖರ್ ಅವರನ್ನು ಕೇಳಿದ್ದು ಇದೆ. ಅದಕ್ಕಾಗಿ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡುತ್ತಿರುವ ಸಾಯಿಶೇಖರ್ ಈಗ “ಸುಳ್ಯನ್ಯೂಸ್.ಕಾಂ” ಗೆ ಮಾಹಿತಿ ನೀಡಿದ್ದಾರೆ. ನಾಳೆಯ ವೆದರ್ ಹೇಗಿದೆ ಎಂದು ಕೇಳಿದ್ದಕ್ಕೆ ಅವರು ಸ್ಯಾಟಲೈಟ್ ಚಿತ್ರ ನೋಡಿ ಹೀಗೆ ಹೇಳಿದ್ದಾರೆ, ಕೆಲವೊಮ್ಮೆ ವಾತಾವರಣ ತಕ್ಷಣದ ಏರುಪೇರಿನಿಂದ ವ್ಯತ್ಯಾಸ ಇರಬಹುದು ಎಂದು ಅವರು ಹೇಳುತ್ತಾ,
ನಾಳೆ ಮಡಿಕೇರಿ ಭಾಗದಲ್ಲಿ ಉತ್ತಮ ಮಳೆ ಸಾಧ್ಯತೆ ಇದೆ. ಆಗುಂಬೆ ಸಾಧಾರಣ ಮಳೆ ಸಾಧ್ಯತೆ ಇದೆ. ಹಾಗಾಗಿ ಸುಳ್ಯ, ಸುಬ್ರಹ್ಮಣ್ಯ ಸುತ್ತಮುತ್ತ ಭಾಗಗಳಲ್ಲಿ ಮೋಡ ಆಥವಾ ತುಂತುರು ಮಳೆ ಸಾಧ್ಯತೆ ಇದೆ. ಉಳಿದ ದ. ಕ. ಭಾಗಗಳಲ್ಲಿ ಮೋಡದ ವಾತಾವರಣ ಇರಬಹುದು ಎಂದು ಅವರು ಹೇಳಿದ್ದಾರೆ.
ಸಾಯಿಶೇಖರ್ , ಕರಿಕಳ