ನವದೆಹಲಿ: ಲೋಕಸಭಾ ಚುನಾವಣೆಯ 5 ಹಂತದ ಮತದಾನ ಪ್ರಕ್ರಿಯೆ ಸೋಮವಾರ ನಡೆಯಲಿದೆ. ದೇಶದ 7 ರಾಜ್ಯಗಳ 51 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಈ ಕ್ಷೇತ್ರಗಳಲ್ಲಿ ಪಕ್ಷಗಳ ಪ್ರಮುಖರಾದ ಕಾಂಗ್ರೆಸ್ ನ ರಾಯ್ಬರೇಲಿಯಿಂದ ಸೋನಿಯಾ ಗಾಂಧಿ, ಅಮೇಠಿಯಿಂದ ರಾಹುಲ್ ಗಾಂಧಿ, ಬಿಜೆಪಿಯ ರಾಜನಾಥ್ ಸಿಂಗ್ ಲಖನೌ ಕ್ಷೇತ್ರದಿಂದ , ಕೇಂದ್ರ ಸಚಿವ ರಾಜ್ಯ ವರ್ಧನ್ ಸಿಂಗ್ ರಾಥೋಡ್ ಕಣದಲ್ಲಿದ್ದಾರೆ. ಅಮೇಠಿಯಲ್ಲಿ ರಾಹುಲ್ ಗಾಂಧಿ ಹಾಗೂ ಸ್ಮೃತಿ ಇರಾನಿ ನಡುವೆ ಸ್ಫರ್ಧೆ ಇದ್ದರೆ ರಾಯ್ ಬರೇಲಿಯಲ್ಲಿ ಸೋನಿಯಾ ಗಾಂಧಿ ಹಾಗೂ ದಿನೇಶ್ ಪ್ರತಾಪ್ ನಡುವೆ ಸ್ಫರ್ಧೆ ಇದೆ.
ಉತ್ತರ ಪ್ರದೇಶ, ರಾಜಸ್ಥಾನ, ಪಶ್ಚಿಮಬಂಗಾಳ, ಮಧ್ಯಪ್ರದೇಶ, ಬಿಹಾರ, ಜಾರ್ಖಂಡ್ ಸೇರಿದಂತೆ ಇತರ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದ್ದು ಒಟ್ಟು 8.75 ಕೋಟಿ ಮತದಾರರು ಮತದಾನ ಮಾಡಲಿದ್ದಾರೆ. 674 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಮುಂದೆ ಮೇ 12 ಹಾಗೂ ಮೇ.19 ರಂದು 6 ಹಾಗೂ 7 ನೇ ಹಂತದ ಚುನಾವಣೆ ಮುಗಿದು ಮೇ.23 ರಂದು ಮತ ಎಣಿಕೆ ನಡೆಯಲಿದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel