ಕುಕ್ಕೆ: ನೂರಕ್ಕೂ ಅಧಿಕ ಭಕ್ತರಿಂದ ಮತದಾನ ಬಹಿಷ್ಕಾರದ ಎಚ್ಚರಿಕೆ
ಸುಬ್ರಹ್ಮಣ್ಯ: ಮಾಸ್ಟರ್ ಪ್ಲಾನ್ ಯೋಜನೆಯಡಿ ಕುಕ್ಕೆ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಭಾಗವಾಗಿ ಕುಮಾರಧಾರೆ-ಕಾಶಿಕಟ್ಟೆ ನಡುವಿನ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು ಈ ವೇಳೆ ರಸ್ತೆ ಬದಿ ಇರುವ ಆರು ವಿದ್ಯುತ್ ಕಂಬಗಳನ್ನು ಮೆಸ್ಕಾಂ ಇಲಾಖೆ ತಾತ್ಕಾಲಿಕವಾಗಿ ಸ್ಥ್ಥಳಾಂತರಿಸಿ ಅಭಿವೃದ್ಧಿಗೆ ಸಹಕರಿಸದೆ ಇರುವುದಕ್ಕೆ ಕ್ಷೇತ್ರದ ಭಕ್ತರು ಅಸಮಧಾನಗೊಂಡಿದ್ದು, ಅಧಿಕಾರಿಗಳ ಬೇಜಾವಾಬ್ದಾರಿ ವರ್ತನೆಗೆ ಬೇಸತ್ತು ನೂರಾರು ಮಂದಿ ಭಕ್ತರು ಈ ಬಾರಿಯ ಲೋಕಸಭಾ ಚುನಾವಣೆ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾರೆ.
ಮಸ್ಕಾಂ ಇಲಾಖಾಧಿಕಾರಿಗಳು ಚುನಾವಣೆ ನೀತಿ ಸಂಹಿತೆ ಕಾರಣವೊಡ್ಡಿ ಸ್ಥಳಾಂತರಿಸಲು ವ್ಯವಸ್ಥೆಗಳನ್ನು ಮಾಡುತಿಲ್ಲ. ಅನುಮತಿಗಾಗಿ ಚುನಾವಣೆ ಅಧಿಕಾರಿಗಳಿಗೂ ದೇವಸ್ಥಾನದ ಕಡೆಯಿಂದ ಮನವಿಯನ್ನು ನೀಡಿ ಅನುಮತಿಗೆ ಕೇಳಲಾಗಿದೆ. ಇದುವರೆಗೂ ಅದಕ್ಕೆ ಉತ್ತರ ಬಂದಿಲ್ಲ. ಕಂಬ ತೆರವುಗೊಳಿಸದೆ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ರಸ್ತೆ ಅಗೆದಿರಿಸಲಾಗಿದ್ದು ಸಾರ್ವಜನಿಕರ ಓಡಾಟಕ್ಕೆ ಅನಾನುಕೂಲವಾಗುತ್ತಿದೆ. ಕುಮಾರಧಾರ ಸ್ವಾಗತ ಗೋಪುರದಿಂದ ರಸ್ತೆಗೆ ಜಲ್ಲಿ ಹಾಕದೆ ಧೂಳು, ಕೆಸರು ತುಂಬಿಕೊಂಡು ಸಂಚರಿಸಲು ಕಷ್ಟವಾಗಿದೆ. ವಾಹನಗಳಲ್ಲಿ ಸಂಚರಿಸುವಾಗ ಅಪಾಯಕಾರಿ ಸನ್ನಿವೇಶಗಳು ನಿರ್ಮಾಣಗೊಂಡು ಅಪಘಾತಗಳು ಸಂಭವಿಸುತ್ತಿವೆ. ತತ್‍ಕ್ಷಣಕ್ಕೆ ಆರಂಭ ಹಂತದ ಆರು ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಿದಲ್ಲಿ ಕಾಮಗಾರಿ ಮುಂದುವರೆಸಲು ಅನುಕೂಲವಾಗುತ್ತದೆ. ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಸ್ಥಳಾಂತರಿಸದೆ ಇರುವುದರಿಂದ ಸಾರ್ವಜನಿಕರಿಗೆ, ಕ್ಷೇತ್ರಕ್ಕೆ ಬರುವ ಭಕ್ತರಿಗೆ ತೊಂದರೆ ನೀಡಿದಂತಾಗಿದೆ. ಮಂಜೂರುಗೊಂಡ ಕಾಮಗಾರಿಗಳಿಗೆ ಅಧಿಕಾರಿಗಳು ಅಡ್ಡಿಪಡಿಸುತ್ತಿರುವುದರಿಂದ ಭಕ್ತರಿಗೆ ತೊಂದರೆ ಆಗುತ್ತಿರುವ ಕಾರಣ ನಾವು ಈ ಬಾರಿಯ ಚುನಾವಣೆಯನ್ನು ಬಹಿಷ್ಕರಿಸುತ್ತಿದ್ದೇವೆ ಎಂದು ನೂರಕ್ಕೂ ಅಧಿಕ ಮಂದಿ ಬಹಿಷ್ಕಾರದ ಸಹಿ ಮಾಡಿರುವ ಮನವಿಯನ್ನು ಚುನಾವಣಾ ಆಯೋಗದ ಅಧಿಕಾರಿಗಳಿಗೆ ಹಾಗೂ ಸಂಬಂಧಿಸಿದ ಇತರೆ ಅಧಿಕಾರಿಗಳಿಗೆ ಕಳುಹಿಸಿಕೊಟ್ಟಿದ್ದಾರೆ.
ನೀತಿ ಸಂಹಿತೆ ನೆಪದಲ್ಲಿ ಅಭಿವೃದ್ಧಿಗೆ ಮೆಸ್ಕಾಂ ಅಡ್ಡಿ ಆರೋಪ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
ಇಷ್ಟವಾದರೆ Subscribe ಮಾಡಿ
Be the first to comment on "ನೀತಿ ಸಂಹಿತೆ ನೆಪದಲ್ಲಿ ಅಭಿವೃದ್ಧಿಗೆ ಮೆಸ್ಕಾಂ ಅಡ್ಡಿ ಆರೋಪ"