ಶೇಣಿ ಗೋಪಾಲಕೃಷ್ಣ ಭಟ್ಟರ ‘ಹಿರಣ್ಯಕಶಿಪು’
(ಪ್ರಸಂಗ : ಪ್ರಹ್ಲಾದ ಚರಿತ್ರೆ)
ಸಂದರ್ಭ : ಹರಿನಾಮಸ್ಮರಣೆಯನ್ನು ಬಿಡದ ಮಗನ ಕುರಿತು ಕ್ರೋಧ. ಆತನನ್ನು ಕೊಲ್ಲಿಸಲು ಯತ್ನಿಸಿದರೂ ವಿಫಲ. ಕೊನೆಗೆ ಮಡದಿಯ ಮೂಲಕ ವಿಷ ಕೊಡುವ ನಿರ್ಧಾರ.
“…. ನೀನು ತಾಯಿಯಾಗಿ ಉಳಿಯುತ್ತಿಯೋ, ಹೆಂಡತಿಯಾಗಿ ಉಳಿಯುತ್ತಿಯೋ.. ಅಂದರೆ ಇದೋ… ಹಿಡಿ… ಇದನ್ನು ಪ್ರಹ್ಲಾದನಿಗೆ ಕೊಡತಕ್ಕದ್ದು. ಇಷ್ಟವಿಲ್ಲವೋ…. ನನಗೆ ಕೊಡು ಕಯಾದು… ಇದು ನಿನಗೆ ಅಪ್ಪಣೆ.
…ಗೃಹಿಣಿಯಾಗಿ ಬಂದ ಮೇಲೆ ನಿನ್ನ ಕೈಯಿಂದ ಅಘ್ರ್ಯ, ನಿನ್ನ ಕೈಯಿಂದ ಅನ್ನಪಾನಗಳನ್ನು ಸ್ವೀಕರಿಸಿದ್ದೇನೆ. ಮಕ್ಕಳಿಗೆ ತಾಯಿಯಾಗಿ ಇಕ್ಕಿದೆ. ಗಂಡನಿಗೆ ಹೆಂಡತಿಯಾಗಿ ಇಕ್ಕಿದೆ… ಕಯಾದು.. ನಿನ್ನ ಕೈಯಲ್ಲಿರುವ ಹಾಲಾಹಲ ನನಗೆ ಇಕ್ಕು. ಅಲ್ಲಿದಿದ್ದರೆ ಅವನಿಗೆ (ಪ್ರಹ್ಲಾದನಿಗೆ) ಕೊಡು. ನೆಟ್ಟ ಕೈಯಿಂದ ಕೀಳುವುದಕ್ಕೆ ಯತ್ನಿಸಿದೆ. ಕಿತ್ತರೂ ಅದು ಮತ್ತೂ ಮತ್ತೂ ಬೇರನ್ನು ಎಲ್ಲಿಯೋ ಕ್ಷೇತ್ರದಲ್ಲಿ ಉಳಿಸಿಕೊಂಡಿದೆ. ಈಗ ಬೇರನ್ನೇ ಸುಡುವ ಯೋಚನೆ ನನ್ನದು. ಸ್ವಾತಂತ್ರ್ಯ ನಿನಗೆ ಕೊಟ್ಟಿದ್ದೇನೆ. ನೀನು ಮಗನಿಗೆ ತಾಯಿಯಾದರೆ ಸಾಕೋ; ಅಲ್ಲ, ನನಗೆ ಅರ್ಧಶರೀರೆಯಾಗಬೇಕೋ ನಿನಗೆ ಬಿಟ್ಟದ್ದು.. ನೀನು ಅವನಿಗೆ ಕೊಡುವುದಿಲ್ಲಾ… ನನಗೆ ಕೊಡು ಕಯಾದು.. ನನ್ನ ಆಜ್ಞೆ.
(ವಿಷ ಕುಡಿದು ಬದುಕಿ ಪುನಃ ತಂದೆಯಲ್ಲಿಗ ಪ್ರಹ್ಲಾದ ಬಂದಾಗ)
.. ಹೌದು ಮಗನೇ… ವಿಷ ಮೇಲೆ ಇದ್ದರೂ ಕೂಡಾ ಒಳಗೆ ನಿನ್ನ ಕುರಿತಾದ ‘ಅಮೃತ’ ನನಗೂ ಇದೆ. ನಿನ್ನಮ್ಮನಿಗೂ ಉಂಟು. ಆದ ಕಾರಣ ಆ ಪ್ರೇಮಾಮೃತದ ಮೇಲಿನ ‘ವಿಷ’ ಆಯಿತದು. ಬುಡದಲ್ಲಿದ್ದಂತಹ ಅಮೃತ ಈ ವಿಷದಲ್ಲಿ ಸೇರಿದ್ದು ಗೊತ್ತಾಗಲಿಲ್ಲ….
ನಿನಗೆ ಸಂಪೂರ್ಣ ಬೆಂಬಲ.. ಇನ್ನೊಬ್ಬನಿದ್ದಾನೆ.. ಮಗನೇ, ನಿನ್ನ ಅಪ್ಪ ನಾನು ಎಂದು ಊರಿನವರಿಗೆ ಮುಖ ತೋರಿಸಲು ನಾಚಿಕೆಯಾಗುತ್ತದೆ. ನನಗೆ, ಯಾಕೆ? ಪ್ರಪಂಚವನ್ನೇ ರಕ್ಷಿಸುವ ಮಹಾಪ್ರಭು ನಾನು. ಅಂತಹ ನಾನು ನಿನಗೆ ಅಪ್ಪನಾಗಿ ನನ್ನ ರಕ್ಷೆಯಲ್ಲಿ ನೀನಿಲ್ಲ, ಕಂಡವರ ಕೈಯ ರಕ್ಷೆಯಲ್ಲಿದ್ದಿ ಅಂತಾದ್ರೆ…..