Advertisement
ಸವಣೂರು: ಸರ್ವೆ ಶ್ರೀ ಷಣ್ಮುಖ ಯುವಕ ಮಂಡಲದ ವತಿಯಿಂದ ಅಂತರ್ಜಲ ವೃದ್ಧಿಗೆ ಸಾರ್ವಜನಿಕರು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ಹಾಗೂ ತರಬೇತಿ ಕಾರ್ಯಕ್ರಮ ” ನೀರಿಂಗಿಸೋಣ ಬನ್ನಿ ” ಸ ಹಿ ಪ್ರಾ ಶಾಲೆ ಭಕ್ತಕೋಡಿಯಲ್ಲಿ ನಡೆಯಿತು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮಂಡೂರಿನ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಗ್ರಾಮಸ್ಥರು ಯುವಕ ಮಂಡಲದ “ನೀರಿಂಗಿಸೋಣ ಬನ್ನಿ ” ಕಾರ್ಯಕ್ರಮದೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದರಲ್ಲದೆ ಸಹಕಾರಿ ಸಂಘದಿಂದ ಸಹಕಾರದ ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯುವಕ ಮಂಡಲದ ಗೌರವಾಧ್ಯಕ್ಷರ ಗ್ರಾಮ ಪಂ ಅಧ್ಯಕ್ಷ ಎಸ್ ಡಿ ವಸಂತ ಅಧ್ಯಕ್ಷತೆ ವಹಿಸಿ ಮಾತನಾಡಿ ಮಳೆ ನೀರಿಂಗಿಸುವ ಹಾಗೂ ಜಲ ಮರುಪೂರಣ ಯೋಜನೆಗಳಿಗೆ ಲಭ್ಯ ಸರಕಾರಿ ಅನುದಾನಗಳ ಬಗ್ಗೆ ಮಾಹಿತಿ ನೀಡಿದರು.
ಯುವಕ ಮಂಡಲದ ಗೌರವ ಸಲಹೆಗಾರರಾದ ವೀರಪ್ಪ ಗೌಡ ಕರಂಬಾರು, ಎಸ್ ಜಿ ಎಂ ಪ್ರೌಢಶಾಲೆಯ ಮುಖ್ಯ ಗುರುಗಳಾದ ಶ್ರೀನಿವಾಸ್ ಎಚ್ ಬಿ ಮುಖ್ಯ ಅತಿಥಿಗಳಾಗಿದ್ದರು.
ಶಿಬಿರಾರ್ಥಿಗಳಿಗೆ ಮಾಹಿತಿ ಮತ್ತು ತರಬೇತಿ ಕಾರ್ಯಕ್ರಮ ನಡೆಸಿಕೊಟ್ಟ ಅಂತರ್ಜಲ ತಜ್ಞ, ಉಪನ್ಯಾಸಕ ಡಾ ಶ್ರೀಶಕುಮಾರ್ ,” ಮಳೆ ನೀರಿಂಗಿಸಲು ಕೈಗೊಳ್ಳಬಹುದಾದ 14 ವಿವಿಧ ವಿಧಾನಗಳ ಮಾಹಿತಿ ನೀಡಿದರು. ಅಂತರ್ಜಲ ಅಭಿವೃದ್ಧಿಗೆ ಪೂರಕವಾಗಿ ನೆಡಬಹುದಾದ ಸಸ್ಯಗಳ ಮಾಹಿತಿ ನೀಡಿದ ಅವರು ಅಕೇಶಿಯಾದಂತಹ ಪ್ರಕೃತಿಗೆ ಮಾರಕವಾದ ಗಿಡಗಳನ್ನು ನೆಡುವ ಬದಲು ಅಶ್ವತ್ಥ, ಆರ್ತಿ, ಬೇಲ, ಬಿಲ್ವ, ಹುಣಸೆ, ಕಹಿಬೇವು, ಮೊದಲಾದ ಗಿಡಗಳನ್ನು ನೆಡುವುದರಿಂದ ಅಂತರ್ಜಲ ಅಭಿವೃದ್ಧಿ ಆಗುತ್ತದೆ ಎಂದರು. ರಾಜಸ್ಥಾನ ರಾಜ್ಯದ ಅರುವಾರಿ ಜಿಲ್ಲೆಯನ್ನು ಮಳೆ ನೀರಿಂಗಿಸುವ ಅಭಿಯಾನದ ಮೂಲಕ ಬರಮುಕ್ತಗೊಳಿಸಿದ ಡಾ ರಾಜೇಂದ್ರ ಸಿಂಗ್ ರಂತವರ ಯಶೋಗಾಥೆಯಿಂದ ಸರ್ವೆ ಗ್ರಾಮದ ಯುವಜನರು ಪ್ರೇರಿತರಾಗಿ ಅಂತರ್ಜಲ ವೃದ್ಧಿಗಾಗಿ ಜಲಯೋಧರಾಗಿ ಸಮರೋಪಾಧಿಯಲ್ಲಿ ದುಡಿಯಬೇಕಿದೆ ಎಂದರು.
ಯುವಕ ಮಂಡಲದ ಅಧ್ಯಕ್ಷರಾದ ಕಮಲೇಶ್ ಸರ್ವೆದೋಳಗುತ್ತು ಪ್ರಸ್ತಾವನೆಗೈದರು. ಕಾರ್ಯಕಾರಿ ಸಮಿತಿ ಸದಸ್ಯ ರಾಮಣ್ಣ ಪೂಜಾರಿ ವಿಜಯ ಬ್ಯಾಂಕ್ ಸ್ವಾಗತಿಸಿದರು, ಡಾ ಪ್ರವೀಣ್ ಸರ್ವೆದೋಳಗುತ್ತು ಅತಿಥಿಗಳನ್ನು ಗೌರವಿಸಿದರು . ವಸಂತ ಪೂಜಾರಿ ಕೈಪಂಗಳದೋಳ ವಂದಿಸಿದರು. ಮಾಜಿ ಅಧ್ಯಕ್ಷರಾದ ರಾಜೇಶ್ ಎಸ್ ಡಿ ಕಾರ್ಯಕ್ರಮ ನಿರೂಪಿಸಿದರು.
Advertisement
ಇದು ನಮ್ಮ YouTube ಚಾನೆಲ್ -
ಇಷ್ಟವಾದರೆ Subscribe ಮಾಡಿ
Advertisement

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ನೀರಿಂಗಿಸೋಣ ಬನ್ನಿ"