ಸುಬ್ರಹ್ಮಣ್ಯ: ಶಾಲೆಗೆ ರಜೆ ಸಿಕ್ಕಿದ ಹಿನ್ನಲೆಯಲ್ಲಿ ಮಕ್ಕಳ ಜೊತೆ ತವರಿಗೆ ಬಂದಿದ್ದ ಮಹಿಳೆ ಹೊಳೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಮಂಗಳವಾರ ಸುಬ್ರಹ್ಮಣ್ಯದ ಅಗರಿಕಜೆಯಲ್ಲಿ ನಡೆದಿದೆ. ಮೃತ ದುರ್ದೈವಿ ಮಹಿಳೆ ಗುತ್ತಿಗಾರು ನಿವಾಸಿ ಛತ್ರಪ್ಪಾಡಿ ಕುಮಾರ ಎಂಬವರ ಪತ್ನಿ ರಾಧಾ(35) ಎಂದು ಗುರುತಿಸಲಾಗಿದೆ.
ಸುಬ್ರಹ್ಮಣ್ಯ ಅಗರಿಕಜೆ ಕುಂಞ ಅವರ ಪುತ್ರಿ ರಾಧಾಳನ್ನು ಗುತ್ತಿಗಾರಿನ ಛತ್ರಪ್ಪಾಡಿ ನಿವಾಸಿ ಕುಮಾರ ಎನ್ನುವವರಿಗೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿಗಳಿಗೆ ಮೂವರು ಮಕ್ಕಳಿದ್ದು ಶಾಲೆಗೆ ರಜೆ ದೊರೆತ ಕಾರಣ ದಂಪತಿಗಳು ಮಕ್ಕಳ ಜತೆ ತವರು ಮನೆಯಾದ ಅಗರಿಕಜೆಗೆ ಎ.20ರಂದು ಬಂದಿದ್ದರು.
ಮಂಗಳವಾರ ಮನೆ ಪಕ್ಕದ ಹೊಳೆಗೆ ಹೊಳೆಯಲ್ಲಿ ಕೊಚ್ಚಿ ಬರುವ ಅಡಿಕೆ ಹೆಕ್ಕಲೆಂದು ತೆರಳಿದ್ದ ವೇಳೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ. ಪತ್ನಿ ಬರದೆ ಇರುವುದನ್ನು ಗಮನಿಸಿದ ಗಂಡ ಹುಡುಕುತ್ತ ಹೊಳೆಯತ್ತ ತೆರಳಿದಾಗ ಮಹಿಳೆಯ ಚಪ್ಪಲಿ ನೀರಿನಲ್ಲಿ ತೇಲುತ್ತಿರುವುದು ಕಂಡುಬಂದಿದೆ. ಈ ವೇಳೆ ಮಹಿಳೆಯ ಮೃತ ದೇಹ ನೀರಿನಲ್ಲಿ ಕಂಡುಬಂದಿದೆ. ಸುಬ್ರಹ್ಮಣ್ಯ ಪೆÇಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.
ನೀರಿನ ಹೊಂಡಕ್ಕೆ ಬಿದ್ದು ಮಹಿಳೆ ಸಾವು

Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
ಇಷ್ಟವಾದರೆ Subscribe ಮಾಡಿ
Be the first to comment on "ನೀರಿನ ಹೊಂಡಕ್ಕೆ ಬಿದ್ದು ಮಹಿಳೆ ಸಾವು"