ನೀವು ತಿನ್ನುವ ಹಣ್ಣುಗಳ ಸುರಕ್ಷತೆಯ ಬಗ್ಗೆ ಗೊತ್ತಾ ?

May 17, 2019
10:00 AM

ಇತ್ತೀಚೆಗೆ ಕೃತಕವಾಗಿ ಹಣ್ಣುಗಳನ್ನು ಮಾಗುವಂತೆ ಮಾಡುವ ಕುರಿತಾಗಿ ಜನರಿಂದ ದೂರುಗಳು ಕೇಳಿ ಬರುತ್ತಿವೆ. ಅದರಲ್ಲೂ ಮಾವಿನಕಾಯಿಗಳನ್ನು
ರಾಸಾಯನಿಕಗಳನ್ನು ಬಳಸಿ ಹಣ್ಣುಮಾಡುವ ಪರಿಸ್ಥಿತಿಗಳು ಹೆಚ್ಚುತ್ತಿವೆ. ದೆಹಲಿಯಲ್ಲಿನ ಸ್ಥಳೀಯ ತಂಡಗಳು ನಡೆಸಿದ ಆನ್ಲೈನ್ ಸರ್ವೇಕ್ಷಣೆಯ ಪ್ರಕಾರ, ಈ ಅಂಶಗಳ ಕುರಿತಾಗಿ ಜನರಲ್ಲಿ ಇರುವ ಮಾಹಿತಿಯ ಬಗ್ಗೆ ಕಲೆ ಹಾಕಲಾಯಿತು.

Advertisement
Advertisement
Advertisement

ಪರಿ ವೀಕ್ಷಣೆಯಲ್ಲಿ 13 ಸಾವಿರ ವಿಶಿಷ್ಟ ನಾಗರಿಕರ ಮತಗಳು ಒಳಗೊಂಡಂತೆ 24000 ಅಭಿಪ್ರಾಯಗಳು ಬಂದವು. ಆ ಪ್ರತಿಕ್ರಿಯೆಗಳಲ್ಲಿ 78 ಶೇಕಡಾ ಜನರು ಕೃತಕವಾಗಿ ಹಣ್ಣಾಗುವಂತೆ ಮಾಡಿದ ಹಣ್ಣುಗಳನ್ನು ಗುರುತಿಸಲು ಅಸಮರ್ಥರೆಂದು ಒಪ್ಪಿಕೊಂಡರು. ಕೇವಲ 15 ಶೇಕಡ ಜನರು ಮಾತ್ರ ಇದರ ಬಗ್ಗೆ ಮಾಹಿತಿ ಹೊಂದಿದ್ದರು. 68 ಶೇಕಡಾ ಜನರು, ಕೃತಕ ಹಣ್ಣು ಮಾಡುವಿಕೆಯ ವಿಚಾರ ಬಂದಾಗ, ತರಕಾರಿ ಹಾಗೂ ಹಣ್ಣು ಮಾರಾಟಗಾರರನ್ನು ನಂಬುವುದಿಲ್ಲವೆಂದು ಹೇಳಿಕೆ ಕೊಟ್ಟರು.

Advertisement

ಭಾರತದ” ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ”ವು, ಕೃತಕವಾಗಿ ಹಣ್ಣು ಮಾಡುವುದಕ್ಕೆ ಬಳಸುವ ಕ್ಯಾಲ್ಸಿಯಂ ಕಾರ್ಬೈಡ್ ಹಾಗೂ ಅಸಿಟಿಲೀನ್ ಅನಿಲಗಳನ್ನು ಕಾನೂನಾತ್ಮಕವಾಗಿ ನಿಷೇಧಿಸಿದೆ. ಆದರೂ ಹಣ್ಣು ಮಾರಾಟಗಾರರು ರಾಜಾರೋಷವಾಗಿ ಈ ರಾಸಾಯನಿಕಗಳನ್ನು ,ಹಣ್ಣು ಮಾಡಲು ಬಳಸುತ್ತಿದ್ದಾರೆ. ಬಹಳಷ್ಟು ಪ್ರಸಿದ್ಧಿ ಪಡೆದ ಬ್ರಾಂಡೆಡ್ ಅಲ್ಫಾನ್ಸೋ ಮಾವಿನಹಣ್ಣುಗಳ ಪೆಟ್ಟಿಗೆಗಳಲ್ಲಿ ಕಾಗದದಲ್ಲಿ ಸುತ್ತಿರುವ ಕ್ಯಾಲ್ಸಿಯಂ ಕಾರ್ಬೈಡ್ ಅಥವಾ ಒಣ ಹುಲ್ಲುಗಳ ಅಡಿಯಲ್ಲಿ ಎಥಿಲೀನ್ ಸರ್ವೇಸಾಮಾನ್ಯವಾಗಿದೆ. ಅದರ ಮೇಲೆ ಮಾವಿನಕಾಯಿಗಳನ್ನು ಇಡಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, 84 ಶೇಕಡ ಜನರು, ಕಲಬೆರೆಕೆ ನಿಯಂತ್ರಣ ಮಾಡುವ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಅನುಭವಕ್ಕೆ ಬಂದ ಇಂತಹ ಕಲಬೆರಕೆಯ ಬಗ್ಗೆ ಗಿರಾಕಿಗಳಲ್ಲಿ ವಿಚಾರಿಸಿದಾಗ ಬೇರೆಬೇರೆ ರೀತಿಯ ಉತ್ತರಗಳು ಬಂದವು. ಅವುಗಳ ಅಂಕಿಅಂಶಗಳನ್ನು ಪರಿಶೀಲಿಸಿದರೆ ಬೇರೆಬೇರೆ ಗುಂಪಿನ ಆಹಾರ ಕಲಬೆರಕೆಯ ಶೇಕಡಾವಾರು ಫಲಿತಾಂಶ ಈ ರೀತಿಯಾಗಿದೆ. 30 ಶೇಕಡಾ ಜನರು ಹಣ್ಣು ಮತ್ತು ತರಕಾರಿಗಳಲ್ಲಿ, 13 ಶೇಕಡಾ ಜನರು ಹಾಲಿನಲ್ಲಿ, 29 ಶೇಕಡ ಜನ ಹಿಟ್ಟು, ಸಾಂಬಾರ ಪದಾರ್ಥಗಳು, ತುಪ್ಪ ಇತ್ಯಾದಿ ಜೀನಸು ವಸ್ತುಗಳಲ್ಲಿ ಕಲಬೆರಕೆಯನ್ನು ಕಂಡುಕೊಂಡಿದ್ದರು. 28 ಶೇಕಡಾ ಜನರು ಇದರ ಬಗ್ಗೆ ಅನಿಶ್ಚಿತ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು.

Advertisement

ಆದರೆ, ಬಳಕೆದಾರನಲ್ಲಿ ಅರಿವು ಮೂಡಿಸುವ ಮತ್ತು ಇದನ್ನು ಸರಿಪಡಿಸುವ ಕಾರ್ಯ ಪ್ರಣಾಳಿಕೆಯು ಪ್ರಥಮ ಹೆಜ್ಜೆಯಾಗಬೇಕು. ಆದರೆ ಪ್ರಾಯೋಗಿಕ ಜೀವನದಲ್ಲಿ ಈ ಪ್ರಮುಖ ಅಂಶಗಳು ಕಣ್ಮರೆಯಾಗಿವೆ. ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಮಂಡಳಿಯು ಇದನ್ನೇ ಗುರಿಯಾಗಿಟ್ಟುಕೊಂಡು, ರಾಜ್ಯಗಳ ಆಹಾರ ಇಲಾಖೆ ಹಾಗೂ ಜಿಲ್ಲಾ ಆಡಳಿತದೊಂದಿಗೆ ಸೇರಿಕೊಂಡು ಉದ್ದೇಶಿತ ಬದಲಾವಣೆ ತರುವಲ್ಲಿ ಪ್ರಯತ್ನಿಸಬೇಕಾಗಿದೆ. ಹಾಗೂ, ಹಾಗೆ ಮಾಡಬೇಕಾದಲ್ಲಿ ಸಾರ್ವಜನಿಕ ಆರೋಗ್ಯವು ಸರಕಾರಗಳ ಪ್ರಥಮ ಆದ್ಯತೆಯಾಗಬೇಕು.

ಜೊತೆಗೆ ನಾವು ಒಂದು ಕಡೆಯಲ್ಲಿ ಬಣ್ಣಗಳ ಕುರಿತಾದ ಆಕರ್ಷಣೆಯನ್ನು, ಮೋಹವನ್ನು ಕಳೆದುಕೊಳ್ಳಬೇಕು. ತಾಜಾತನದ ಬಗ್ಗೆ ಗಮನ ಹರಿಸುವ ದೃಷ್ಟಿ ಕೋನ ಬೆಳೆಸಿಕೊಳ್ಳಬೇಕು. ಆದಷ್ಟು ಕಾಯಿಗಳನ್ನು ತಂದು ಮನೆಯಲ್ಲೇ ಹಣ್ಣು ಮಾಡಿಕೊಳ್ಳುವ ಕ್ರಮವೇ ಸೂಕ್ತವೋ ಏನೋ. ನಮ್ಮ ಹಳದಿ ಮೋಹವೇ ವ್ಯಾಪಾರಿಗಳ ಬಂಡವಾಳ ಆಗದಂತೆ ಎಚ್ಚರಿಕೆವಹಿಸಬೇಕು. ಇಂದಿನ ರಾಸಾಯನಿಕ ಕ್ರಾಂತಿಯ ಹಾಗೂ ವ್ಯವಸ್ಥೆಯಲ್ಲಿನ ಭ್ರಷ್ಟತೆಯ ನಡುವೆ, ಸಂಭವಿಸಬಹುದಾದ ಅಪಾಯದಿಂದ ನಾವು ಪಾರಾಗುವ ಉಪಾಯವು, ನಾವು ಹೊಂದುವ” ಅರಿವು” ಮತ್ತು” ಅನುಷ್ಠಾನ” ಅಷ್ಟೇ.

Advertisement

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಸ್ವಲ್ಪ ಜಾಗೃತರಾಗಿ.. | ಐಪಿಎಲ್ ಹಬ್ಬವೋ – ತಿಥಿಯೋ – ಶಾಪವೋ… | ಕ್ರಿಕೆಟ್ ಆಟ – ಬೆಟ್ಟಿಂಗ್ ದಂಧೆ – ಜೂಜಿನ ಮಜಾ ಪ್ರಾರಂಭ…..
March 26, 2024
1:12 PM
by: ವಿವೇಕಾನಂದ ಎಚ್‌ ಕೆ
ಪ್ರಜಾಪ್ರಭುತ್ವದ ದೊಡ್ಡ ಹಬ್ಬ ಚುನಾವಣೆ | ಈ ಬಾರಿಯೂ ಕೋವಿ ಠೇವಣಾತಿ ಗೊಂದಲ | ಕೃಷಿಕರಿಗೆ ತಪ್ಪದ ಬವಣೆ | ಮೂರು ವರ್ಷಗಳಿಂದಲೂ ರೈತರ ಬೇಡಿಕೆಗೆ ಸಿಗದ ಮಾನ್ಯತೆ |
March 20, 2024
10:42 PM
by: ಮಹೇಶ್ ಪುಚ್ಚಪ್ಪಾಡಿ
ಜ್ಞಾನದ ಮರುಪೂರಣ ಅಗತ್ಯ…… ಮರು ಭರ್ತಿ ಮಾಡದಿದ್ರೆ ನಮ್ಮ ವ್ಯಕ್ತಿತ್ವ ಕುಬ್ಜವಾಗುತ್ತಾ ಹೋಗುತ್ತದೆ
March 15, 2024
3:05 PM
by: ವಿವೇಕಾನಂದ ಎಚ್‌ ಕೆ
ಹಾಲು ಮಾಂಸಾಹಾರವೇ…? ಹಾಲಿಗೆ ತನ್ನದೇ ಆದ ಶ್ರೇಷ್ಠತೆ ಇದೆ..
March 15, 2024
2:06 PM
by: ಪ್ರಬಂಧ ಅಂಬುತೀರ್ಥ

You cannot copy content of this page - Copyright -The Rural Mirror