ನೂರು ದಿನದ ಆಡಳಿತ ಬಹುದೊಡ್ಡ ಬದಲಾವಣೆ ತಂದಿದೆ- ಪ್ರಧಾನಿ ಮೋದಿ

September 9, 2019
11:00 AM

ನವದೆಹಲಿ: ತನ್ನ ಆಡಳಿತದ ಎರಡನೇ ಅವಧಿಯ ಮೊದಲ ನೂರು ದಿನ ದೇಶದಲ್ಲಿ ಬಹು ದೊಡ್ಡ ಬದಲಾವಣೆಗೆ ಮತ್ತು ಅಭಿವೃದ್ಧಿಗೆ ಮುನ್ನುಡಿ ಬರೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮೋದಿ ನೇತೃತ್ವದ ಎನ್​ಡಿಎ ಒಕ್ಕೂಟದ ಕೇಂದ್ರ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದು ಇಂದಿಗೆ ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ ಮಾತನಾಡಿದ ಅವರು
ಈ ಬಾರಿ ಜನರು ನಮಗೆ ಅಗಾಧವಾದ ಬೆಂಬಲವನ್ನು ನೀಡಿ ಮತ್ತೆ ಅಧಿಕಾರ ನೀಡಿದ್ದಾರೆ. 100 ದಿನಗಳಲ್ಲಿ ನಾವು ಏನೇ ಮಾಡಿದ್ದರು ಅಥವಾ ಏನೇ ದೊಡ್ಡ ನಿರ್ಧಾರಗಳನ್ನು ತೆಗೆದುಕೊಂಡಿದ್ದರು ಅದು ಜನರ ಮೇಲೆ ನಂಬಿಕೆ ಇಟ್ಟು ಹಾಗೂ ಅವರ ಬೆಂಬಲದೊಂದಿಗೆ ಮಾಡಿದ್ದೇವೆ. ನಮ್ಮ ನಿರ್ಧಾರಗಳ ಹಿಂದೆ ದೇಶದ 130 ಕೋಟಿ ಜನರ ಸ್ಫೂರ್ತಿ ಇದೆ ಎಂದು ಹೇಳಿದರು.

Advertisement
Advertisement

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಹರಿಯಾಣದ ರೋಹಟಕ್​ನಲ್ಲಿ ನಡೆದ ಸಮಾವೇಶದಲ್ಲಿ ಈ ವರ್ಷದ ಮೊದಲ ಸಂಸತ್ತಿನಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ಮೋದಿ ಪ್ರಸ್ತಾಪಿಸಿದರು. ಈ ವರ್ಷ ಸಾಕಷ್ಟು ಮಸೂದೆಗಳು ಸಂಸತ್ತಿನಲ್ಲಿ ಅಂಗೀಕಾರವಾದವು. ಕಳೆದ 60 ವರ್ಷಗಳ ಸಂಸತ್ತಿನ ಕಲಾಪದಲ್ಲಿ ನಡೆಯದ ಸಾಕಷ್ಟು ಕೆಲಸಗಳು ಈ ಬಾರಿ ನಡೆದವು ಎಂದು ಮೋದಿ ಹೇಳಿದರು.

ತ್ರಿವಳಿ ತಲಾಕ್​ ಅನ್ನು ಅಪರಾಧ ಎಂದು ಪರಿಗಣಿಸಿದ್ದು, ಮಾಹಿತಿ ಹಕ್ಕು ಕಾಯ್ದೆ ತಿದ್ದುಪಡಿ ಮತ್ತು ಮೋಟಾರು ಕಾಯ್ದೆಯನ್ನು ತಿದುಪಡಿ ಮಾಡಲಾಯಿತು. ಇದರೊಂದಿಗೆ ಮಹತ್ವದ ನಿರ್ಣಯವಾದ ಸಂವಿಧಾನದ ಆರ್ಟಿಕಲ್​ 370 ಮತ್ತು 35(ಎ) ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಮತ್ತು ಅಧಿಕಾರವನ್ನು ರದ್ದುಗೊಳಿಸಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್​ ಅನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡುವ ನಿರ್ಣಯವನ್ನು ತೆಗದುಕೊಳ್ಳಲಾಯಿತು ಇದು ಮಹತ್ವದ ಕೆಲಸಗಳು ಎಂದು ಅವರು ಬಣ್ಣಿಸಿದರು.

Advertisement

Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೃಷಿ ಕೂಡಾ ಅತಿ ಹೆಚ್ಚು ಉದ್ಯೋಗ ಒದಗಿಸುವ ಕ್ಷೇತ್ರ
June 28, 2025
8:14 PM
by: The Rural Mirror ಸುದ್ದಿಜಾಲ
ಮುಂಗಾರು ಮಳೆ ಸುದ್ದಿ | ಕೇರಳದಲ್ಲಿ ತೀವ್ರಗೊಳ್ಳಲಿದೆ ಮಳೆ | ದೆಹಲಿಯಲ್ಲೂ ಮಳೆ ಎಚ್ಚರಿಕೆ | ಹಿಮಾಚಲದಲ್ಲಿ 20 ಕ್ಕೂ ಹೆಚ್ಚು ಜೀವಹಾನಿ |
June 28, 2025
7:14 AM
by: The Rural Mirror ಸುದ್ದಿಜಾಲ
ಕೃಷಿ ಮತ್ತು ಆಹಾರೋತ್ಪನ್ನ ವಲಯದಲ್ಲಿ ಹೂಡಿಕೆಗೆ ಅವಕಾಶ
June 27, 2025
6:26 AM
by: The Rural Mirror ಸುದ್ದಿಜಾಲ
ಬಾಹ್ಯಾಕಾಶ ಕೇಂದ್ರ ತಲುಪಿದ ಶುಭಾಂಶು ಶುಕ್ಲ | ಬಾಹ್ಯಾಕಾಶದಲ್ಲಿ ಧಾರವಾಡದ ಹೆಸರು, ಮೆಂತೆಕಾಳು
June 26, 2025
9:54 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group