ನೆರೆಪೀಡಿತರನ್ನು ಮರೆತು ಮೋದಿಯಿಂದ ವಿದೇಶದಲ್ಲಿ ರಾಜಕೀಯ ಶೋ- ರಮಾನಾಥ ರೈ ಟೀಕೆ

September 23, 2019
9:13 PM

ಸುಳ್ಯ:ರಾಜ್ಯದ ನೆರೆಪೀಡಿತರನ್ನು ಮರೆತು ಪ್ರಧಾನಮಂತ್ರಿ ನರೇಂದ್ರ ಮೋದಿ ವಿದೇಶದಲ್ಲಿ ರಾಜಕೀಯ ಶೋ ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಟೀಕಿಸಿದ್ದಾರೆ.

Advertisement
Advertisement
Advertisement
Advertisement

ಅಕ್ಟೋಬರ್ ಎರಡರಂದು ಕಾಂಗ್ರೆಸ್ ವತಿಯಿಂದ ಮಂಗಳೂರಿನಲ್ಲಿ ನಡೆಯಲಿರುವ
ಗಾಂಧಿನಡಿಗೆ ಕುರಿತು ಚರ್ಚಿಸಲು ಸುಳ್ಯದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

Advertisement

ಸಾಮಾನ್ಯವಾಗಿ ಯಾವುದೇ ರಾಜ್ಯದಲ್ಲಿ ಪ್ರವಾಹ ಉಂಟಾದರೂ ಪ್ರಧಾನಮಂತ್ರಿಯಾದವರು ವೈಮಾನಿಕ ಸಮೀಕ್ಷೆ ನಡೆಸಿ ಪರಿಹಾರವನ್ನು ಘೋಷಣೆ ಮಾಡುತ್ತಾರೆ. ಆದರೆ ಕರ್ನಾಟಕ ರಾಜ್ಯ ತೀವ್ರತರಹದ ಪ್ರವಾಹಕ್ಕೆ ತುತ್ತಾಗಿ ಜನ ತತ್ತರಿಸಿದರೂ ಪ್ರಧಾನಿಗಳು ಈ ಕಡೆ ತಿರುಗಿ ನೋಡಲಿಲ್ಲ. ಪರಿಹಾರವನ್ನೂ ನೀಡಿಲ್ಲ. ಬದಲಾಗಿ ಅವರು ವಿದೇಶದಲ್ಲಿ ರಾಜಕೀಯ ಶೋ ನಡೆಸುವುದರಲ್ಲಿ ತಲ್ಲೀನರಾಗಿದ್ದಾರೆ ಎಂದು ಟೀಕಿಸಿದರು. ದೇಶ ಕಂಡು ಕೇಳರಿಯದ ರೀತಿಯಲ್ಲಿ ಆರ್ಥಿಕ ದುಸ್ಥಿತಿಯನ್ನು ಎದುರಿಸುತ್ತಿದೆ. ಜನರ ಜೀವನಾಡಿಯಾಗಿದ್ದ ಬಿಎಸ್ಎನ್ಎಲ್ ಸಂಪೂರ್ಣ ನಾಶದತ್ತ ಸಾಗಿದೆ. ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಅಭಿವೃದ್ಧಿಗೆ ಶ್ರಮಿಸದ ಕೇಂದ್ರ ಸರಕಾರ ಖಾಸಗೀ ಮೊಬೈಲ್ ಕಂಪೆನಿಗಳ ಬೆಳವಣಿಗೆಗೆ ಪರೋಕ್ಷ ಸಹಾಯ ಮಾಡಿದೆ ಎಂದು ಆರೋಪಿಸಿದರು.

ದ.ಕ.ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್‌.ಮಹಮ್ಮದ್, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಮುಖಂಡರಾದ ಕಾವು ಹೇಮನಾಥ ಶೆಟ್ಟಿ, ಧನಂಜಯ ಅಡ್ಪಂಗಾಯ, ಭರತ್ ಮುಂಡೋಡಿ, ಎಂ.ವೆಂಕಪ್ಪ ಗೌಡ, ದಿವ್ಯಪ್ರಭಾ ಚಿಲ್ತಡ್ಕ, ಡಾ.ಬಿ.ರಘು, ರಾಜೀವಿ ರೈ, ಎಸ್.ಸಂಶುದ್ದೀನ್, ಚಂದ್ರಶೇಖರ ಕಾಮತ್, ಪಿ.ಸಿ.ಜಯರಾಮ, ಮಹಮ್ಮದ್ ಆಲಿ, ವಿಜಯಕುಮಾರ್ ರೈ, ಕಳಂಜ ವಿಶ್ವನಾಥ ರೈ, ಪಿ.ಎಸ್.ಗಂಗಾಧರ, ಅಶೋಕ್ ನೆಕ್ರಾಜೆ, ತೀರ್ಥರಾಮ ಜಾಲ್ಸೂರು, ಕೆ.ಎಂ.ಮುಸ್ತಪಾ, ಅನುಸೂಯ, ಲೀಲಾ ಮನಮೋಹನ್, ಲಕ್ಷ್ಮಿ ಸುಬ್ರಹ್ಮಣ್ಯ, ಬೀರಾಮೊಯ್ದೀನ್, ಸಿದ್ದಿಕ್ ಸುಳ್ಯ, ಶಾಫಿ ಕುತ್ತಮೊಟ್ಟೆ, ಭವಾನಿಶಂಕರ ಕಲ್ಮಡ್ಕ, ಲಕ್ಷ್ಮಣ ಶೆಣೈ, ಸುಧೀರ್ ರೈ ಮೇನಾಲ, ಪ್ರವೀಣಾ ಮರುವಂಜ, ಶ್ರೀಲತಾ ಪ್ರಸನ್ನ, ಸುಜಯಾ ಕೃಷ್ಣ, ಅನಿಲ್ ರೈ, ಸಚಿನ್ ರಾಜ್ ಶೆಟ್ಟಿ, ಶ್ರೀಹರಿ ಕುಕ್ಕುಡೇಲು, ನಂದರಾಜ ಸಂಕೇಶ, ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕುಡಿಯುವ ನೀರಿನ ಸಮಸ್ಯೆ | ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಸೂಚನೆ
February 28, 2025
8:45 PM
by: ದ ರೂರಲ್ ಮಿರರ್.ಕಾಂ
ಕಾಫಿ ಉತ್ಪಾದನೆಯಲ್ಲಿ ಭಾರತವು  ಏಳನೇ ದೇಶ |
February 28, 2025
7:51 AM
by: The Rural Mirror ಸುದ್ದಿಜಾಲ
ತೊಗರಿ ಖರೀದಿಗೆ ನೋಂದಣಿ ಮಾಡಿಸುವಂತೆ ಕಲಬುರ್ಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮನವಿ
February 28, 2025
7:40 AM
by: ದ ರೂರಲ್ ಮಿರರ್.ಕಾಂ
ಚಿಕ್ಕಮಗಳೂರು ಕಾಡ್ಗಿಚ್ಚಿನಿಂದ ಕಾಫಿ ತೋಟ, ಅರಣ್ಯ ಪ್ರದೇಶ ನಾಶ | ಡ್ರೋನ್‌ ಮೊರೆ ಹೋಗುತ್ತಿರುವ ಅರಣ್ಯ ಇಲಾಖೆ |
February 28, 2025
7:34 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror