ನ.ಪಂ.ಚುನಾವಣೆಗೆ ಸಿದ್ಧತೆ ಪೂರ್ಣ : ಮೂರು ಅತಿಸೂಕ್ಷ್ಮ ಮತಗಟ್ಟೆಗಳು

Advertisement

ಸುಳ್ಯ: ಸುಳ್ಯ ನಗರ ಪಂಚಾಯತ್ ಗೆ ಇಂದು ಮತದಾನ ನಡೆಯಲಿದ್ದು ಸಿದ್ಧತೆಗಳು ಪೂರ್ಣಗೊಂಡಿದೆ. ಮತದಾನಕ್ಕಾಗಿ 20 ಮತಗಟ್ಟೆಗಳನ್ನು ಸಿದ್ಧಪಡಿಸಲಾಗಿದೆ. 20 ಮತಗಟ್ಟೆಗಳ ಪೈಕಿ ಮೂರು ಅತಿ ಸೂಕ್ಷ್ಮ ಮತಗಟ್ಟೆಗಳು ಎಂದು ವಿಂಗಡಿಸಲಾಗಿದೆ.

Advertisement

ಮಸ್ಟರಿಂಗ್ ಕೇಂದ್ರವಾದ ಸುಳ್ಯ ನೆಹರೂ ಸ್ಮಾರಕ ಮಹಾ ವಿದ್ಯಾಲಯದಿಂದ ನಿನ್ನೆ ಮಧ್ಯಾಹ್ನದ ವೇಳೆಗೆ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇವಿಎಂ ಮತ್ತು ಇತರ ಸಾಮಾಗ್ರಿಗಳೊಂದಿಗೆ ಮತಗಟ್ಟೆ ಕಡೆಗೆ ತೆರಳಿದರು. ಅಧ್ಯಕ್ಷ ಮತಗಟ್ಟೆ ಅಧಿಕಾರಿ, ಮೂರು ಮಂದಿ ಮತಗಟ್ಟೆ ಅಧಿಕಾರಿಗಳು, ಓರ್ವ ಡಿಗ್ರೂಪ್ ಸಿಬ್ಬಂದಿ ಸೇರಿ ಐದು ಮಂದಿ ಹಾಗು ಮೂರು ಮಂದಿ ಭದ್ರತಾ ಸಿಬ್ಬಂದಿಗಳನ್ನು ಪ್ರತಿ ಮತಗಟ್ಟೆಗೆ ನಿಯೋಜನೆ ಮಾಡಲಾಗಿದೆ. ಬೆಳಿಗ್ಗೆ ಏಳರಿಂದ ಸಂಜೆ ಐದರ ತನಕ ಮತದಾನ ನಡೆಯಲಿದೆ.

Advertisement
Advertisement

 

Advertisement

20 ವಾರ್ಡ್‍ಗಳಲ್ಲಿರುವ 6,928 ಪುರುಷ ಮತ್ತು 7,165 ಮಹಿಳೆಯರು ಸೇರಿ ಒಟ್ಟು 14,093 ಮತದಾರರು 53 ಮಂದಿ ಅಭ್ಯರ್ಥಿಗಳ ಚುನಾವಣಾ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ವಾರ್ಡ್ ಸಂಖ್ಯೆ 14(ಕಲ್ಲುಮುಟ್ಲು), 15(ನಾವೂರು), 16(ಕಾಯರ್ತೋಡಿ) ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಮತಗಟ್ಟೆಗಳು ಎಂದು ವಿಂಗಡಿಸಲಾಗಿದೆ. ಇಲ್ಲಿ ಹೆಚ್ಚಿನ ಬಂದೋಬಸ್ತ್ ಏರ್ಪಡಿಸಲಾಗುವುದು.

ನಗರ ಪಂಚಾಯತ್ ಚುನಾವಣೆಯಲ್ಲಿ ಮತ ಯಂತ್ರದ ಬಳಕೆ ಮಾಡಲಾಗುವುದು. ಆದರೆ ವಿವಿ ಪ್ಯಾಟ್ ಬಳಕೆ ಈ ಚುನಾವಣೆಯಲ್ಲಿ ಇರುವುದಿಲ್ಲ. 20 ಮತಗಟ್ಟೆಗಳಿಗಾಗಿ 27 ಇವಿಎಂಗಳನ್ನು ಸಿದ್ಧಪಡಿಸಲಾಗಿದೆ.

Advertisement

ಪೊಲೀಸ್ ಇಲಾಖೆಯೂ ಸಿದ್ಧ:
ಸುಳ್ಯ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಪೊಲೀಸ್ ಇಲಾಖೆ ಚುನಾವಣೆಗೆ ಭದ್ರತಾ ವ್ಯವಸ್ಥೆಯನ್ನು ಮಾಡಿದೆ. ಮೂರು ಮಂದಿ ಉಪನಿರೀಕ್ಷಕರು, ಆರು ಮಂದಿ ಎಎಸ್‍ಐ, 15 ಮಂದಿ ಹೆಡ್ ಕಾನ್ಸೇಟಬಲ್ಸ್, 27 ಮಂದಿ ಪೊಲೀಸ್ ಸಿಬ್ಬಂದಿಗಳು, 27 ಮಂದಿ ಗೃಹ ರಕ್ಷಕ ದಳದ ಸಿಬ್ಬಂದಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ. ಮಸ್ಟರಿಂಗ್ ಕೇಂದ್ರವಾದ ನೆಹರೂ ಸ್ಮಾರಕ ಮಹಾವಿದ್ಯಾಲಯದಲ್ಲಿ ಚುನಾವಣೆಗೆ ನಿಯೋಜನೆಗೊಂಡ ಪೊಲೀಸರಿಗೆ ಮಾಹಿತಿ ಮತ್ತು ಸೂಚನೆಗಳನ್ನು ನೀಡಲಾಯಿತು.

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ನ.ಪಂ.ಚುನಾವಣೆಗೆ ಸಿದ್ಧತೆ ಪೂರ್ಣ : ಮೂರು ಅತಿಸೂಕ್ಷ್ಮ ಮತಗಟ್ಟೆಗಳು"

Leave a comment

Your email address will not be published.


*