ಸುಳ್ಯ: ನಗರ ಪಂಚಾಯತ್ ಚುನಾವಣೆಗೆ ಸ್ಪರ್ಧಿಸುವ ಆರು ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಇಂದು ಬಿಡುಗಡೆ ಮಾಡಿದೆ. ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಭ್ಯರ್ಥಿ ಪಟ್ಟಿ ಬಿಡುಗಡೆಗೊಳಿಸಿದರು.
20 ವಾರ್ಡ್ ಗಳಲ್ಲಿ 14 ರಲ್ಲಿ ಪ್ರಥಮ ಪಟ್ಟಿಯಲ್ಲಿ ಅಭ್ಯರ್ಥಿ ಘೋಷಣೆ ಆಗಿತ್ತು.
ವಾರ್ಡ್ ಸಂಖ್ಯೆ 2(ಕೊಯಿಕುಳಿ)ರಲ್ಲಿ ಬಾಲಕೃಷ್ಣ ರೈ ದುಗಲಡ್ಕ, 3(ಜಯನಗರ)-ರೋಹಿತ್ ಕೊಯಿಂಗೋಡಿ, 8(ಕುರುಂಜಿಭಾಗ್)- ಶೀಲಾ ಅರುಣ್,
9(ಕುರುಂಜಿಗುಡ್ಡೆ-ಭಸ್ಮಡ್ಕ)- ಪೂಜಿತಾ ಶಿವಪ್ರಸಾದ್, 10(ಕೇರ್ಪಳ-ಪುರಭವನ)- ವಿನಯಕುಮಾರ್ ಕಂದಡ್ಕ, 20(ಕಾನತ್ತಿಲ)-ಸರೋಜಿನಿ ಪೆಲ್ತಡ್ಕ ಅಭ್ಯರ್ಥಿಗಳು.
ಹಲವು ಅಭ್ಯರ್ಥಿ ಆಕಾಂಕ್ಷಿಗಳಿದ್ದು ತೀವ್ರ ಕುತೂಹಲ ಕೆರಳಿಸಿದ್ದ 10ನೇ ವಾರ್ಡ್ ನಲ್ಲಿ ಬಿಜೆಪಿ ನಗರ ಶಕ್ತಿ ಕೇಂದ್ರದ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಅವರನ್ನು ಪಕ್ಷ ಕಣಕ್ಕಿಳಿಸಿದರೆ, ಎಂಟು ಮಂದಿ ಆಕಾಂಕ್ಷಿಗಳಿದ್ದ ಸಾಮಾನ್ಯ ಮಹಿಳಾ ಮೀಸಲು 20ನೇ ವಾರ್ಡ್ ನಲ್ಲಿ ಮಾಜಿ ಸದಸ್ಯೆ ಸರೋಜಿನಿ ಪೆಲ್ತಡ್ಕ ಅವರಿಗೆ ಟಿಕೆಟ್ ಒಲಿದಿದೆ. ಕುತೂಹಲ ಕೆರಳಿಸಿದ್ದ ಎರಡನೇ ವಾರ್ಡ್ ನಲ್ಲಿ ಬಾಲಕೃಷ್ಣ ರೈ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ.