ನ ಪಂ ಚುನಾವಣೆ : ಅತೃಪ್ತ ಕಾಂಗ್ರೆಸ್ಸಿಗರು ಪ್ರತ್ಯೇಕ ಸಭೆ ನಡೆಸಲು ನಿರ್ಧಾರ

Advertisement

ಸುಳ್ಯ: ಸುಳ್ಯ ನಗರ ಪಂಚಾಯತ್ ಚುನಾವಣೆ ಅಭ್ಯರ್ಥಿ ಘೋಷಣೆ ಆದ ಬಳಿಕ ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಭಿನ್ನಮತ ಶಮನಗೊಳ್ಳುವ ಸಾಧ್ಯತೆ ಕಾಣುತ್ತಿಲ್ಲ. ಬೋರುಗುಡ್ಡೆ ವಾರ್ಡ್ ನಲ್ಲಿ ಕಾಂಗ್ರೆಸ್ ನ ಆರ್.ಕೆ.ಮಹಮ್ಮದ್ ಗೆ ಸೀಟ್ ನಿರಾಕರಣೆಯ ಹಿನ್ನಲೆಯಲ್ಲಿ ಅತೃಪ್ತರಾದ ಕಾಂಗ್ರೆಸ್ ನ ಒಂದು ಗುಂಪು ಪ್ರತ್ಯೇಕ ಸಭೆ ನಡೆಸಿ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಪದಾಧಿಕಾರಿಯೋರ್ವರ ನೇತೃತ್ವದಲ್ಲಿ ಮೇ.20 ರಂದು ನಡೆಯುವ ಸಭೆಯ ಬಳಿಕ ನಿರ್ಧಾರವನ್ನು ಪ್ರಕಟಿಸಲಿದ್ದಾರೆ. ಸಭೆಯಲ್ಲಿ ಬೋರುಗುಡ್ಡೆ, ನಾವೂರು, ಕೆರೆಮೂಲೆ, ಕಲ್ಲುಮುಟ್ಲು ವಾರ್ಡ್ ಗಳ ಅತೃಪ್ತ ಕಾಂಗ್ರೆಸ್ಸಿಗರು ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಇದೆ. ಬೋರುಗುಡ್ಡೆ ವಾರ್ಡ್ ನಲ್ಲಿ ಆರ್.ಕೆ.ಮಹಮ್ಮದ್ ಗೇ ಸೀಟ್ ನೀಡಬೇಕು ಎಂದು ಕಾಂಗ್ರೆಸ್ ನ ಒಂದು ಗುಂಪು ಪ್ರಬಲವಾದ ಬೇಡಿಕೆಯನ್ನಿಟ್ಟಿದ್ದರು. ಅಭ್ಯರ್ಥಿತನಕ್ಕೆ ಕೊನೆಯವರೆಗೆ ರೇಸ್ ನಲ್ಲಿದ್ದ ಆರ್.ಕೆ. ಹೆಸರು ಒಂದು ಹಂತದಲ್ಲಿ ಬಹುತೇಕ ಅಂತಿಮಗೊಂಡಿದೆ ಎಂದು ಹೇಳಲಾಗಿತ್ತು. ಆದರೆ ಕೊನೆಯ ಹಂತದಲ್ಲಿ ಇವರಿಗೆ ಸೀಟ್ ಕೈ ತಪ್ಪಿತ್ತು. ಇದರಿಂದ ಅಸಮಾಧಾನಗೊಂಡ ಆರ್.ಕೆ.ಮಹಮ್ಮದ್ ಪಕ್ಷೇತರನಾಗಿ ನಾಮಪತ್ರ ಸಲ್ಲಿಸಿ ಸಡ್ಡು ಹೊಡೆದಿದ್ದಾರೆ. ಇದೀಗ ಆರ್.ಕೆ ಪರ ಬ್ಯಾಟಿಂಗ್ ಮಾಡುತ್ತಿರುವ ಒಂದು ಗುಂಪು ಪ್ರತ್ಯೇಕ ಸಭೆ ನಡೆಸಿ ಮುಂದಿನ ನಿರ್ಧಾರವನ್ನು ಪ್ರಕಟಿಸಲಿದ್ದಾರೆ ಎಂದು ತಿಳಿದು ಬಂದಿದೆ.

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ನ ಪಂ ಚುನಾವಣೆ : ಅತೃಪ್ತ ಕಾಂಗ್ರೆಸ್ಸಿಗರು ಪ್ರತ್ಯೇಕ ಸಭೆ ನಡೆಸಲು ನಿರ್ಧಾರ"

Leave a comment

Your email address will not be published.


*