ಸುಳ್ಯ: ನಗರ ಪಂಚಾಯತ್ ಚುನಾವಣೆಗೆ ಸಲ್ಲಿಸಿದ ನಾಮಪತ್ರಗಳ ಪರಿಶೀಲನೆ ಪೂರ್ತಿಗೊಂಡಿದೆ. ಸಲ್ಲಿಕೆಯಾದ 66 ನಾಮಪತ್ರಗಳಲ್ಲಿ 65 ನಾಮಪತ್ರಗಳು ಕ್ರಮಬದ್ಧ ವಾಗಿದ್ದು ಸ್ವೀಕೃತಗೊಂಡಿದೆ. ಪಕ್ಷೇತರ ಅಭ್ಯರ್ಥಿ ಕೆ.ಸಿ.ಸುನಿಲ್ ಕುಮಾರ್ ಅವರ ನಾಮಪತ್ರದ ಕುರಿತ ನಿರ್ಧಾರವನ್ನು ಕಾಯ್ದಿರಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ವಾರ್ಡ್ ಸಂಖ್ಯೆ 1-10 ರವರೆಗೆ ವಾರ್ಡ್ ಗಳಲ್ಲಿ ಒಟ್ಟು 28 ನಾಮಪತ್ರಗಳ ಪರಿಶೀಲನೆಯನ್ನು ಚುನಾವಣಾಧಿಕಾರಿ ದೇವರಾಜ್ ಮುತ್ಲಾಜೆ ನೇತೃತ್ವದಲ್ಲಿ ನಡೆದು 27 ನಾಮಪತ್ರಗಳನ್ನು ಸ್ವೀಕರಿಸಿ ಒಂದು ನಾಮಪತ್ರದ ಕುರಿತ ನಿರ್ಧಾರವನ್ನು ನಾಳೆ 11 ಗಂಟೆಗೆ ಮುಂದೂಡಲಾಗಿದೆ.
ವಾರ್ಡ್ ಸಂಖ್ಯೆ 11-20ರವರೆಗೆ ಸಲ್ಲಿಸಿದ ನಾಮಪತ್ರಗಳ ಪರಿಶೀಲನೆ ಚುನಾವಣಾಧಿಕಾರಿ ಎನ್. ಮಂಜುನಾಥ್ ನೇತೃತ್ವದಲ್ಲಿ ನಡೆದು ಸಲ್ಲಿಕೆಯಾದ ಎಲ್ಲಾ 38 ನಾಮಪತ್ರಗಳು ಸ್ವೀಕರಿಸಲಾಗಿದೆ.
ಕಾಯ್ದಿರಿಸಿದ ಪಕ್ಷೇತರ ಅಭ್ಯರ್ಥಿಯ ನಾಮಪತ್ರ :
10ನೇ ವಾರ್ಡ್ ನ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಕೆ.ಸಿ.ಸುನಿಲ್ ಕುಮಾರ್ ಅವರು ಸಲ್ಲಿಸಿದ ನಾಮಪತ್ರದ ಕುರಿತ ನಿರ್ಧಾರವನ್ನು ಚುನಾವಣಾಧಿಕಾರಿಕಾರಿಗಳು ನಾಳೆಗೆ ಮುಂದೂಡಿದ್ದಾರೆ.
ಮತದಾರ ಪಟ್ಟಿಯ ಕ್ರಮ ಸಂಖ್ಯೆ ಸಂಬಂಧಪಟ್ಟು ದೃಢೀಕರಣ ಪತ್ರವನ್ನು ಸಲ್ಲಿಸುವಂತೆ ಚುನಾವಣಾಧಿಕಾರಿ ಸುನಿಲ್ ಕುಮಾರ್ ಗೆ ಸೂಚಿಸಿದ್ದಾರೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ನ ಪಂ ಚುನಾವಣೆ : 65 ನಾಮಪತ್ರ ಸ್ವೀಕೃತ : ಪಕ್ಷೇತರ ಅಭ್ಯರ್ಥಿಯ ನಾಮಪತ್ರ ಕಾಯ್ದಿರಿಸಿದ ಚುನಾವಣಾಧಿಕಾರಿ"