ಸುಳ್ಯ: ಒಂದು ಕಾಲದಲ್ಲಿ ನಗರ ಪಂಚಾಯತ್ ಗೆ ಪ್ರತಿನಿಧಿಗಳನ್ನು ಕಳಿಸುತ್ತಿದ್ದ ಸಿಪಿಐಎಂ ಈ ಬಾರಿಯ ನಗರ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಕಡಿಮೆ.
ಹಿಂದೆಲ್ಲ ನಗರ ಪಂಚಾಯತ್ ಮತ್ತಿತರ ಸ್ಥಳೀಯ ಸಂಸ್ಥೆಗಳಲ್ಲಿ ಸಿಪಿಐಎಂ ಸದಸ್ಯರು ಇರುತ್ತಿದ್ದರು. ನಗರ ಪಂಚಾಯತ್ ನ ಕಳೆದ ಎರಡು ಅವಧಿಯ ಆಡಳಿತ ಮಂಡಳಿಯಲ್ಲಿ ಸಿಪಿಐಎಂ ಪ್ರತಿನಿಧಿ ಇರಲಿಲ್ಲ. ಸಂಘಟನಾ ಚಟುವಟಿಕೆಯಲ್ಲಿ ಪಕ್ಷವು ಸುಳ್ಯದಲ್ಲಿ ಸಕ್ರೀಯವಾಗಿದ್ದರೂ ಈ ಬಾರಿಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆ ಇಲ್ಲ.
‘ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಜಾತ್ಯಾತೀತ ಶಕ್ತಿಗಳನ್ನು ಸಿಪಿಐಎಂ ಯಾವತ್ತೂ ಬೆಂಬಲಿಸುತ್ತದೆ. ಈ ಬಾರಿ ನಗರ ಪಂಚಾಯತ್ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆ ಕಡಿಮೆ. ಚುನಾವಣೆ ಕುರಿತ ಮುಂದಿನ ನಡೆಯನ್ನು ಪಕ್ಷದ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಸಿಪಿಐಎಂ ತಾಲೂಕು ಕಾರ್ಯದರ್ಶಿ ರಾಬರ್ಟ್ ಡಿಸೋಜ ‘ಸುಳ್ಯನ್ಯೂಸ್.ಕಾಂ’ ನೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
ಸಂಘಟನೆಯಲ್ಲಿ ಸಕ್ರೀಯ:
ಸಿಪಿಐಎಂ ಪಕ್ಷದ ಭಾಗವಾದ ಸಿಐಟಿಯುವಿನ ನೇತೃತ್ವದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳು ಸುಳ್ಯದಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸುತಿವೆ. ಕಟ್ಟಡ ಕಾರ್ಮಿಕರ ಸಂಘಟನೆ, ಬೀಡಿ ಕಾರ್ಮಿಕರ ಸಂಘಟನೆ, ಬಿಸಿ ಊಟ ಕಾರ್ಮಿಕರ ಸಂಘಟನೆ, ರಿಕ್ಷಾ ಚಾಲಕರ ಸಂಘಟನೆ ಹೀಗೆ ಹಲವು ಸಂಘಟನೆಗಳು ಚಟುವಟಿಕೆಯಿಂದ ಕೂಡಿದೆ. ಹಲವು ಕಾರ್ಯಕ್ರಮಗಳನ್ನೂ, ಹೋರಾಟಗಳನ್ನು ಸಂಘಟಿಸುತ್ತಾ ಬರುತಿದೆ. ಸಂಘಟನಾತ್ಮಕವಾಗಿ ಸಕ್ರೀಯವಾಗಿದ್ದರೂ ಚುನಾವಣಾ ರಾಜಕೀಯದಿಂದ ಮಾತ್ರ ಕೆಲವು ಸಮಯಗಳಿಂದ ಪಕ್ಷ ದೂರ ಉಳಿದಿದೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ನ.ಪಂ.ಚುನಾವಣೆ- ಸಿಪಿಐಎಂ ಸ್ಪರ್ಧೆ ಸಾಧ್ಯತೆ ಕಡಿಮೆ"