ನ.15 ಡಾ.ಪ್ರಭಾಕರ ಶಿಶಿಲರ ಆತ್ಮಕಥನ ‘ಬೊಗಸೆ ತುಂಬಾ ಕನಸು’ ಬಿಡುಗಡೆ

October 30, 2019
9:47 PM

ಸುಳ್ಯ: ಹಿರಿಯ ಸಾಹಿತಿ, ವಿದ್ವಾಂಸ, ನಿವೃತ್ತ ಪ್ರಾಂಶುಪಾಲ ಡಾ.ಬಿ. ಪ್ರಭಾಕರ ಶಿಶಿಲರ ಆತ್ಮಕಥನ ‘ಬೊಗಸೆ ತುಂಬಾ ಕನಸು’ ಪುಸ್ತಕ ಬಿಡುಗಡೆ ಸಮಾರಂಭ ನ.15 ರಂದು ಪೂ.10 ಕ್ಕೆ ನೆಹರೂ ಸ್ಮಾರಕ ಮಹಾ ವಿದ್ಯಾಲಯದ ಕೆ.ವಿ.ಜಿ ಷಷ್ಟ್ಯಬ್ದ ಭವನದಲ್ಲಿ ನಡೆಯಲಿದೆ.

ಸುಳ್ಯ ನೆಹರೂ ಸ್ಮಾರಕ ಮಹಾ ವಿದ್ಯಾಲಯ ಮತ್ತು ನೆಹರೂ ಸ್ಮಾರಕ ಮಹಾ ವಿದ್ಯಾಲಯದ ಹಳೆ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ. ಮೈಸೂರು ರಾಜ್ ಪ್ರಕಟಿಸಿರುವ ಕೃತಿಯನ್ನು ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಬಿಡುಗಡೆ ಮಾಡಲಿದ್ದಾರೆ. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷ ಡಾ.ಕೆ.ವಿ‌‌.ಚಿದಾನಂದ ಅಧ್ಯಕ್ಷತೆ ವಹಿಸುವರು.

ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ಮುಖ್ಯ ಅತಿಥಿಗಳಾಗುವರು‌. ದೆಹಲಿ ಜವಾಹರಲಾಲ್ ನೆಹರೂ ವಿಶ್ವ ವಿದ್ಯಾನಿಲಯದ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷ ಡಾ.ಬಿ.ಪುರುಷೋತ್ತಮ ಬಿಳಿಮಲೆ ಪ್ರಧಾನ ಭಾಷಣ ಮಾಡುವರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ನಿರ್ದೇಶಕರಾದ ಶೋಭಾ ಚಿದಾನಂದ, ಅಕ್ಷಯ್ ಕೆ.ಸಿ. ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ದರ ಇಳಿಯುತ್ತದೆ, ಕೂಲಿ ಏರುತ್ತದೆ ; ಬೆಳೆಗಾರನಿಗೆ ಉಳಿಯುವುದೇನು?
October 4, 2026
6:58 AM
by: ಪ್ರಬಂಧ ಅಂಬುತೀರ್ಥ
ಕಸೂತಿ ಕಲಿತು ಸ್ವಾವಲಂಬನೆಯತ್ತ ಗ್ರಾಮೀಣ ಮಹಿಳೆಯರು
October 4, 2026
6:47 AM
by: ದ ರೂರಲ್ ಮಿರರ್.ಕಾಂ
ಕರ್ನಾಟಕದಲ್ಲಿ ಬರದ ಹೊಡೆತ – ಬೆಳೆ ನಷ್ಟ ₹60 ಸಾವಿರ ಕೋಟಿವರೆಗೆ ಸಾಧ್ಯತೆ
October 4, 2026
6:37 AM
by: ದ ರೂರಲ್ ಮಿರರ್.ಕಾಂ
ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿದ ಮಾತ್ರಕ್ಕೆ ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್
October 4, 2026
6:31 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror