ಪಂಜ ನೆಕ್ಕಿಲ ಬದ್ರಿಯಾ ಜುಮಾ ಮಸ್ಜಿದ್ ಗೆ ಭೇಟಿ

October 26, 2019
8:36 PM

ಸುಳ್ಯ: ಕರ್ನಾಟಕ ಮುಸ್ಲಿಂ ಜಮಾಅತ್ ಸುಳ್ಯ ತಾಲೂಕು ಸಮಿತಿಯ ನಾಯಕರ ನೇತೃತ್ವದಲ್ಲಿ ಪ್ರಥಮ ಬಾರಿಗೆ ಪಂಜ ನೆಕ್ಕಿಲ ಬದ್ರಿಯಾ ಜುಮ್ಮಾ ಮಸ್ಜಿದ್ ಗೆ  ಭೇಟಿ  ನೀಡಿದರು.

ಈ ಸಂದರ್ಭದಲ್ಲಿ ಮಸ್ಜಿದ್ ನ ಆಡಳಿತ ಸಮಿತಿಯ ಅಧ್ಯಕ್ಷ  ಉಮ್ಮರ್ ಸೀಗೆಯಡಿ ತಮ್ಮ ಮಸ್ಜಿದ್ ಮತ್ತು ಮದರಸ ಕಾರ್ಯ ವೈಖರಿಯ ಬಗ್ಗೆ ಮಾಹಿತಿಯನ್ನು ನೀಡಿದರು. ಕೆಲವು ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಹಾಗೂ ವಕ್ಫ್ ಇಲಾಖೆಯ ವತಿಯಿಂದ ಮದರಸ ಮಸೀದಿ ಗಳಿಗೆ ಬರುವ ಅನುದಾನವನ್ನು ತರಿಸುವಲ್ಲಿ ಸಹಕರಿಸಲು ಮನವಿಯನ್ನು ಮಾಡಿದರು.

ಇದಕ್ಕೆ ಸ್ಪಂದಿಸಿದ ಕರ್ನಾಟಕ ಮುಸ್ಲಿಂ ಜಮಾಅತ್ ಸುಳ್ಯ ತಾಲೂಕು ಸಮಿತಿಯ ಅದ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ ಸಮಿತಿ ರಚನೆ ಬಳಿಕ ಮೊಹಲ್ಲಾ ಬೇಟಿ ಕಾರ್ಯಕ್ರಮ ಇದು ಪ್ರಥಮವಾಗಿದ್ದು ಸಮಿತಿಯ ಎಲ್ಲಾ ಹಿರಿಯ ಕಿರಿಯ ನಾಯಕರ ಸಹಕಾರ ಪಡೆದು ಮೊಅಲ್ಲ ಅಭಿವೃದ್ಧಿ ಗೆ ಶ್ರಮಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಹಾಜಿ ಮುಸ್ತಫಾ ಕೆ ಎಂ,ಉಪಾಧ್ಯಕ್ಷ ಪಿ ಎ ಮಹಮ್ಮದ್, ಪ್ರ ಕಾರ್ಯದರ್ಶಿ ಇಬ್ರಾಹಿಂ ಕದಿಕ್ಕಡ್ಕ,ಎಲಿಮಲೆ ಮಸ್ಜಿದ್ ಅದ್ಯಕ್ಷ ಇಕ್ಬಾಲ್ ಎಲಿಮಲೆ, ಸಮಿತಿಯ ಕಾರ್ಯದರ್ಶಿ ಹಸೈನಾರ್ ಜಯನಗರ ಹಾಗೂ ನೆಕ್ಕಿಲ ಜುಮ್ಮಾ ಮಸ್ಜಿದ್ ಕಮಿಟಿಯ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ಭಾಗವಹಿಸಿದ್ದರು. ಮಸ್ಜಿದ್ ಕಮಿಟಿಯ ವತಿಯಿಂದ ನೂತನ ಅದ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ ರವರಿಗೆ ಹೂ ಗುಚ್ಛ ನೀಡಿ ಗೌರವಿಸಲಾಯಿತು.

ಉಮರ್ ಸೀಗೆಯಡಿ ಸ್ವಾಗತಿಸಿ ಹಸೈನಾರ್ ಜಯನಗರ ವಂದಿಸಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

“ಕೃಷಿ ಕೂಳೆ ಸುಡುವುದು ಮುಗಿದುಹೋಯ್ತು…!” | ರೈತರಿಗೆ ಹೊಸ ಆದಾಯದ ದಾರಿ, ಕೂಳೆಯಿಂದ ಬಿಟುಮೆನ್ ತಯಾರಿ
March 31, 2026
6:47 AM
by: ಮಿರರ್‌ ಡೆಸ್ಕ್
“ಮಹಿಳೆಯರಿಗೆ ಶಕ್ತಿ ನೀಡಿದರೆ ಕೃಷಿ ಬಲವಾಗುತ್ತದೆ..!” | ವಿಶ್ವದ ಗಮನ ಸೆಳೆಯುತ್ತಿದೆ ಇನ್‌ಕ್ಲೂಸಿವ್‌ ಅಗ್ರಿಕಲ್ಚರ್‌ ಮಾದರಿ
March 31, 2026
6:31 AM
by: ದ ರೂರಲ್ ಮಿರರ್.ಕಾಂ
‘ಗ್ರೀನ್ ಕ್ರೈಮ್’ | ಹವಾಮಾನ ಸಂಕಷ್ಟವಲ್ಲ, ಇದು “ಪರಿಸರ ಅಪರಾಧ” | ಮನೋವಿಜ್ಞಾನಿಯ ಪುಸ್ತಕ ಜಗತ್ತಿಗೆ ಎಚ್ಚರಿಕೆ
March 31, 2026
6:09 AM
by: ದ ರೂರಲ್ ಮಿರರ್.ಕಾಂ
ಘಾನಾದಲ್ಲಿ ಮರ ಬೆಳೆ ವೈವಿಧ್ಯೀಕರಣ ಅಭಿಯಾನಕ್ಕೆ ಚಾಲನೆ | ಕೃಷಿ ಕ್ಷೇತ್ರದಲ್ಲಿ ಮಹತ್ವದ ಪರಿವರ್ತನೆ
March 30, 2026
10:09 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror