ಪಂಜ: ಪಂಜ ವನಿತಾ ಸಮಾಜ ಇದರ ನೂತನ ಕಟ್ಟಡ ಕಾಮಗಾರಿಗೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಒಂದು ಲಕ್ಷ ರೂಪಾಯಿ ಧನಸಹಾಯವನ್ನು ಮಂಜೂರು ಮಾಡಿದ್ದಾರೆ. ಈ ಚೆಕ್ ಅನ್ನು ಪ್ರಿಯದರ್ಶಿನಿ ಶ್ರೇಯಾಂಸ್ ಕುಮಾರ್ ಶೆಟ್ಟಿಮೂಲೆ ಇವರು ಮೂಲಕ ಕಟ್ಟಡ ಸಮಿತಿ ಅಧ್ಯಕ್ಷೆ ಪುಷ್ಪಾ ಡಿ ಪ್ರಸಾದ್ ಕಾನತ್ತೂರು ಇವರಿಗೆ ಹಸ್ತಾಂತರಿಸಿದರು. ಕಟ್ಟಡಕ್ಕೆ ಸಹಾಯಧನ ನೀಡುವಂತೆ ಇತ್ತೀಚೆಗೆ ಧರ್ಮಸ್ಥಳಕ್ಕೆ ತೆರಳಿ ಡಾ.ವೀರೇಂದ್ರ ಹೆಗ್ಗಡೆ ಅವರಿಗೆ ಸಮಿತಿ ಮನವಿ ಮಾಡಿತ್ತು.
ಚೆಕ್ ವಿತರಣೆ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಸಂತೋಷ್ ಕುಮಾರ್ ರೈ, ಪಂಜ ವಲಯ ಮೇಲ್ವಿಚಾರಕ ವಸಂತ್, ಕೂತ್ಕುಂಜ ಒಕ್ಕೂಟದ ಅಧ್ಯಕ್ಷ ವಿಶ್ವನಾಥ ಸಂಪ, ವನಿತಾ ಸಮಾಜದ ಅಧ್ಯಕ್ಷೆ ಚಂದ್ರಾ ಚಿದ್ಗಲ್, ಖಜಾಂಜಿ ಸತ್ಯಕಲಾ ಗುಂಡಡ್ಕ, ಸದಸ್ಯೆ ಯಶೋಧ , ಪೂರ್ಣಿಮಾ ಜಾಕೆ, ರತ್ನಾವತಿ ಸಂಕಡ್ಕ, ಸವಿತಾ ಸಂಪ, ಪ್ರತಿಮಾ ರೈ ಉಪಸ್ಥಿತರಿದ್ದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel