ಪಂಜ : ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಸಿ ವಿತರಣೆ

June 24, 2019
1:00 PM

ಪಂಜ: ಜೇಸಿಐ ಪಂಜ ಪಂಚಶ್ರೀ ವತಿಯಿಂದ ಸರಕಾರಿ ಪಾಡಿಗದ್ದೆ ಶಾಲೆಯಲ್ಲಿ “ವಿಶ್ವ ಪರಿಸರ ದಿನಾಚರಣೆ ಪ್ರಯುಕ್ರ ಹಣ್ಣಿನ ಗಿಡಗಳ ವಿತರಣೆ ಹಾಗೂ ಕಳೆದ ವರುಷಗಳಲ್ಲಿ ನೆಟ್ಟ ಗಿಡಗಳಿಗೆ ಗೊಬ್ಬರ ಹಾಕಿ ಪೋಷಣೆ” ಕಾರ್ಯಕ್ರಮವು ನಡೆಯಿತು.
ಸಂಪನ್ಮೂಲ ವ್ಯಕ್ರಿ ಜೇಸಿಐ ಭಾರತದ ವಲಯ ತರಬೇತುದಾರ ರಾದ ಜೇಸಿ ತೀರ್ಥನಂದ ಕೊಡಂಕಿರಿ ಹಣ್ಣಿನ ಗಿಡವನ್ನು ಮುಖ್ಯ ಶಿಕ್ಷಕಿ ಧರ್ಮವತಿ.ಟಿ .ಇವರಿಗೆ ಹಸ್ತಾತರಿಸುವ ಮೂಲಕ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿ “ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಮರಗಿಡಗಳನ್ನು ನಾಶ ಮಾಡುವ ಮೂಲಕ ಪರಿಸರವನ್ನು ಹಾಳು ಮಾಡುತ್ತಿದ್ದು, ಈಗಾಗಲೇ ಎಚ್ಚೆತ್ತು ಕೊಳ್ಳದಿದ್ದರೆ ಅಲ್ಲಲಿ ಸಂಭವಿಸುತ್ತಿರುವ ಪ್ರಕೃತಿ ವಿಕೋಪದ ಜತೆಗೆ ಮತ್ತಷ್ಟು ವಿಕೋಪ ಗಳನ್ನು ಎದುರಿಸಬೇಕಾ ಗುತ್ತದೆ” ಎಂದು ಪರಿಸರದ ಉಳಿವಿನ ಮಹತ್ವವ ನ್ನು ವಿವರಿಸಿದರು.
ವೇದಿಕೆಯಲ್ಲಿ ಜೇಸಿಐ ಪಂಜ ಪಂಚಶ್ರಿಯ ಅಧ್ಯಕ್ಷರಾದ ಜೇಸಿ ವಾಸುದೇವ ಮೇಲ್ಪಾಡಿ ಸಭಾಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ವಾಚಣ್ಣ ಕೆರೆಮೂಲೆ, ಶಾಲಾ ಮುಖ್ಯ ಶಿಕ್ಷಕಿ ಧರ್ಮವತಿ.ಟಿ., ಪಂಜ ಕ್ಲಸ್ಟರ್‍ನ ಸಮೂಹ ಸಂಪನ್ಮೂಲ ವ್ಯಕ್ತಿ ಯಶೋಧರ.ಕೆ. ವೇದಿಕೆಯಲ್ಲಿದ್ದರು. ಮುಖ್ಯ ಶಿಕ್ಷಕಿ ಮಾತನಾಡಿ ಜೇಸಿಐ ಪಂಜ ಪಂಚಶ್ರೀಯ ಈ ಕಾರ್ಯಕ್ರಮ ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜೇಸಿ ಶಿವಪ್ರಸಾದ್ ಹಾಳೆಮಜಲು ಅಥಿತಿಗಳನ್ನು ವೇದಿಕೆಗೆ ಆಹ್ವಾನಿಸಿದ ರು. ಜೇಸಿ ನಾಗಮಣಿ ಕೆದಿಲ ಜೇಸಿ ವಾಣಿ ವಾಚಿಸಿದರು. ಕಾರ್ಯದರ್ಶಿ ಪ್ರವೀಣ್ ಕಾಯರ ವಂದಿಸಿದರು.
ಸ್ಥಾಪಕಾಧ್ಯಕ್ಷ ಜೇಸಿ ದೇವಿಪ್ರಸಾದ್ ಜಾಕೆ, ಜೇಸಿ ಷಣ್ಮುಖ ಕಟ್ಟ, ಶಾಲಾ ಎಸ್.ಡಿ.ಎಮ್.ಸಿ ಸದಸ್ಯರುಗಳು ಪೋಷಕರು ಹಾಗೂ ಎಲ್ಲಾ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸುಮಾರು 90 ಹಣ್ಣಿನ ಗಿಡಗಳನ್ನು ಎಲ್ಲಾ ವಿದ್ಯಾರ್ಥಿಗಳ ಮನೆಗೆ ಹಂಚಲಾಯಿತು. ಹಾಗೂ ಕಳೆದ ವರ್ಷ ನೆಟ್ಟ ಗಿಡಗಳಿಗೆ ಗೊಬ್ಬರ ಹಾಕಿ ಪೋಷಣೆ ಮಾಡಲಾಯಿತು.

Advertisement
Advertisement
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
January 28, 2026
3:48 PM
by: ಮಿರರ್‌ ಡೆಸ್ಕ್
ಸುಳ್ಯದಲ್ಲಿ 265 ಅರ್ಹ ರೈತರಿಗೆ ಕೃಷಿ ಸವಲತ್ತುಗಳ ವಿತರಣೆ
January 20, 2026
6:24 AM
by: ದ ರೂರಲ್ ಮಿರರ್.ಕಾಂ
ಜನವರಿ 23 ರಿಂದ ಕದ್ರಿ ಫಲಪುಷ್ಪ ಪ್ರದರ್ಶನ
January 3, 2026
9:25 PM
by: ದ ರೂರಲ್ ಮಿರರ್.ಕಾಂ
ಜ.4 : ಮುಕ್ಕೂರಿನಲ್ಲಿ ಕಾಳುಮೆಣಸು, ಕಾಫಿ ಗಿಡ ಕೃಷಿ ಮತ್ತು ನಿರ್ವಹಣೆ ಹಾಗೂ ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣ , ಮಣ್ಣಿನ ಪೋಷಕಾಂಶಗಳ ಬಗ್ಗೆ ಮಾಹಿತಿ ಕಾರ್ಯಾಗಾರ
December 28, 2025
11:26 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror