ಪತ್ತನಾಜೆಗೆ ಮಳೆಯೂ ಹತ್ತು ಹನಿ…….. ಇನ್ನು ತುಳುನಾಡಿನಲ್ಲಿ ಬೇಸಾಯದ ಪರ್ವ…..

Advertisement

ಬೆಳಗಿನಿಂದಲೇ ಸಡಗರದಿಂದ ಕೆಲಸ ಮಾಡುತ್ತಿರುವ ಅಜ್ಜಿ ಯನ್ನು ರಜೆಯಲ್ಲಿ ಮನೆಗೆ ಬಂದ ಪುಳ್ಳಿ ನೋಡಿಯೇ ಬಾಕಿ…. ಯಾವಾಗಲೂ ಅಲ್ಲಿ ನೋವು ಇಲ್ಲಿ ನೋವು ಎಂದು ಬೆನ್ನು ಬಗ್ಗಿಸಿ ನಡೆಯುವ ಅಜ್ಜಿಯ ನೋವುಗಳೆಲ್ಲಾ ಮಾಯ…..!

Advertisement
 ಕುತೂಹಲದಿಂದ ನೋಡುತ್ತಿದ್ದ ಮೊಮ್ಮಗಳಿಗೆ ಕೇಳದೇ ಉತ್ತರ ಸಿಕ್ಕಿತು. ಇವತ್ತು ಪತ್ತನಾಜೆಯಲ್ಲವಾ, ಮಾವ ಮನೆಗೆ ಬರುತ್ತಿದ್ದಾನೆ. ಬಹಳ ಸಮಯದ ಮೇಲೆ ಬರುತ್ತಿದ್ದಾನೆ. ನಿನ್ನ ನೋಡಿ ಖುಷಿ ಪಡುತ್ತಾನೆ .  ಯಕ್ಷಗಾನ ಮೇಳದಲ್ಲಿ ವೇಷ ಹಾಕುವ ಮಾವನೆಂದರೆ ಮಕ್ಕಳಿಗೆ ಬಹಳ ಇಷ್ಟ. ಮೇಳದ ರಂಜನೀಯ ಕಥೆಗಳನ್ನು, ಪೌರಾಣಿಕ ಪ್ರಸಂಗಗಳನ್ನು ಹೇಳುತ್ತಿದ್ದರೆ ಮಕ್ಕಳಿಗೆ ಸಮಯ ಹೋದದ್ದೇ ಗೊತ್ತಾಗುತ್ತಿರಲಿಲ್ಲ.  ಹೌದಾ ಮಾವನಿಗೆ ರಜೆಯುಂಟಾ? ಎಷ್ಟು ದಿನ ? ಎಂಬ ಪ್ರಶ್ನೆಗೆ ಅಜ್ಜಿ ಖುಷಿಯಿಂದ ಉತ್ತರ ಕೊಟ್ಟಳು. ನೋಡು ಮಗ ಇಂದು ಪತ್ತನಾಜೆ. ತುಳು ತಿಂಗಳ ಹತ್ತನೇಯ ದಿನ. ಇಂದಿನಿಂದ ಮಳೆಗಾಲ ಆರಂಭ ಎಂಬುದು ಇಲ್ಲಿನವರ ನಂಬಿಕೆ. ಹಾಗಾಗಿ  ಭೂತ ಕೋಲ, ನೇಮ, ತಂಬಿಲ, ಯಕ್ಷಗಾನ, ಜಾತ್ರೆಗಳಿಗೆಲ್ಲ ಇನ್ನೂ ವಿರಾಮ. ಗದ್ದೆ ಬೇಸಾಯದ ಕೆಲಸಗಳೆಲ್ಲ ಆರಂಭಿಸಲು ಸಕಾಲ. ಪತ್ತನಾಜೆಯಾದ ಮೇಲೆ ದೈವ  ಬೂತಗಳೆಲ್ಲಾ ಘಟ್ಟ ಹತ್ತುತ್ತವೆ ಎಂಬುದು ಜನಸಾಮಾನ್ಯರ ನಂಬಿಕೆ.  ದೀಪೋತ್ಸವ ಕ್ಕೆ ಶುರು ಆಗುವ ಮೇಳಗಳ ತಿರುಗಾಟಕ್ಕೆ ಪತ್ತನಾಜೆಯಿಂದ ವಿಶ್ರಾಂತಿ. ಊರಿಂದ ಊರಿಗೆ ತಿರುಗಾಡಿ ಸುಸ್ತಾದ ಕಲಾವಿದರ ಪಯಣಕ್ಕೆ ತಾತ್ಕಾಲಿಕ ವಿರಾಮ. ಬೇಸಾಯ ,ತೋಟದ ಕೆಲಸಗಳಲ್ಲಿ ‌ಮಾವ ತೊಡಗುವುದರಿಂದ ನಮಗೂ ನೆಮ್ಮದಿ ಎಂದು ಅಜ್ಜಿಯ ಕಣ್ಣಲ್ಲಿ ‌ತೆಳ್ಳನೆಯ ಕಣ್ಣೀರು.
ಪತ್ತನಾಜೆಯು ದಕ್ಷಿಣ ಕನ್ನಡ , ಉಡುಪಿ ಕಾಸರಗೋಡುಗಳಲ್ಲಿ  ಆಚರಣೆಲ್ಲಿದೆ. ಹಿಂದೆ  ಆರು ತಿಂಗಳು ಸತತ ಮಳೆಯಾಗುತ್ತಿದ್ದದ್ದರಿಂದ ‌ಜಾತ್ರೆ, ನೇಮಗಳು, ಯಕ್ಷಗಾನ ಗಳನ್ನು ಈ ತಿಂಗಳುಗಳಲ್ಲಿ ‌ನಡೆಸುವುದು ಕಷ್ಟ ಸಾಧ್ಯ ವಾದುದರಿಂದ ಪತ್ತನಾಜೆಯನ್ನು ಒಂದು ಗಡುವೆಂದು ಜನರು ಪರಿಗಣಿಸಿರುವ ಸಾಧ್ಯತೆ ಇದೆ. ಆದರೆ ಇಲ್ಲಿನ ಜನರು ಈ ಪದ್ಧತಿ ಯನ್ನು ಬಹು ಶ್ರದ್ಧೆ ಯಿಂದ ಇಂದಿಗೂ ಪಾಲಿಸಿಕೊಂಡು ಬಂದಿದ್ದಾರೆ.
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಪತ್ತನಾಜೆಗೆ ಮಳೆಯೂ ಹತ್ತು ಹನಿ…….. ಇನ್ನು ತುಳುನಾಡಿನಲ್ಲಿ ಬೇಸಾಯದ ಪರ್ವ….."

Leave a comment

Your email address will not be published.


*