ಪಬ್ ಜಿ ಮೊಬೈಲ್ ಗೇಮಿಗೆ ಮಕ್ಕಳ ಮನಸೇ ನಜ್ಜುಗುಜ್ಜು…! ನಿಮ್ಮ ಮಕ್ಕಳು ಈ ಗೇಮ್ ಆಡ್ತಾರಾ ಮೊದಲು ನೋಡಿ….

May 31, 2019
8:00 AM
ಅಂದೊಂದು ಭಾರೀ ಪೇಮಸ್ಸಾದ ಮೊಬೈಲ್ ಗೇಮಿತ್ತು. ಅದು ಬ್ಲೂವೇಲ್. ಈ ಆಟದಲ್ಲಿ ಕೊನೆಗೆ  ಅದು ಸಾಯಲು ಹೇಳುತ್ತಿತ್ತು. ದೇಶದಾದ್ಯಂತ ಒಮ್ಮೆ ಸಂಚಲನ ಮೂಡಿಸಿತ್ತು.
ಈಗ ಮತ್ತೊಂದು ಗೇಮು ಶುರುವಾಗಿದೆ. ಇದೂ ಆನ್ ಲೈನ್ ವಿಡಿಯೋ ಗೇಮ್. ಇದರಲ್ಲಿ ಮಕ್ಕಳ ಮನಸ್ಸಂತೂ ಮೌನವಾಗಿ ಬಿಡುತ್ತದೆ. ತಲೆಯೊಳಗೆ ಅದೊಂದೇ ತುಂಬಿ ಬಿಡುತ್ತದೆ. ಮನಸ್ಸು ಸದಾ ಅದರ ಗುಂಗಿನಲ್ಲಿರುತ್ತದೆ. ಈ ಗೇಮಿನ ಹೆಸರು ಪಬ್ ಜಿ. ಈ ಆಟಕ್ಕೆ ಮಧ್ಯಪ್ರದೇಶದಲ್ಲಿ ಒಬ್ಬ ಬಾಲಕ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಆ ಆಟವು ಡ್ರಗ್ಸ್ ಗಿಂತಲೂ ಅಪಾಯಕಾರಿ ಎಂದು ಗೂಗಲ್ ಹುಡುಕಾಟದಲ್ಲಿ ಮಾಹಿತಿ ಸಿಗುತ್ತದೆ.
ಪಬ್ ಜಿ ಮೊಬೈಲ್ ಆನ್ ಲೈನ್ ಗೇಂ ಬಗ್ಗೆ ಗೊತ್ತಿರದವರು ಕಡಿಮೆ. ಇದೊಂದು ಮೊಬೈಲ್ ಆಪ್ ಮೂಲಕ ದೇಶದ, ವಿದೇಶದ ಯಾರ ಜೊತೆ ಬೇಕಾದರೂ ಆಡುವ ಗೇಮ್. ಆಧುನಿಕ ಜಗತ್ತಿನಲ್ಲಿ ಹೆಚ್ಚು ಜನಪ್ರಿಯವಾಗುತ್ತಿರುವ ಅಪಾಯಕಾರಿ ಆಟ. ಪ್ಲೇಯರ್ಸ್ ಅನ್ನೋನ್ ಬ್ಯಾಟಲ್ ಗ್ರೌಂಡ್ (PUBG)
(PLAYER UNKNOWN’S  BATTLE GROUNDS)  ಎನ್ನುವುದು  ಇದರ ಹೆಸರು. ಅಂದರೆ ಆಟಗಾರನ ಅಜ್ಞಾತ ಯುದ್ಧಭೂಮಿಗಳ ನಡುವಿನ ಕದನ. ಸುಲಭದಲ್ಲಿ ಹೇಳುವುದಾದರೆ ಶೂಟಿಂಗ್. ತಂಡವಾಗಿ ನಡೆಸುವ ಶೂಟಿಂಗ್ ಮತ್ತೂ ಸುಲಭದಲ್ಲಿ  ಹೇಳುವುದಾದರೆ ಯುದ್ಧ.
ಇಲ್ಲಿ ಯುದ್ಧಭೂಮಿಗಳಲ್ಲಿ ಸ್ಫರ್ಧೆ ನಡೆಯುತ್ತದೆ.ಆಟಗಾರರನ್ನು ವಿಶಾಲವಾದ, ತೆರೆದ ಪ್ರದೇಶಕ್ಕೆ ಕೈಬಿಡಲಾಗುತ್ತದೆ ಮತ್ತು ಅವರು ಸಾವಿನೊಂದಿಗೆ ಹೋರಾಡಬೇಕು.ಇದರದಲ್ಲಿ  ಆಟಗಾರನು ಎರಡು ಮೋಡ್ ಗಳಲ್ಲಿ ಆಟವಾಡಬಹುದು. ಆರ್ಕೇಡ್ ಮೋಡ್ ಅಥವಾ ಕ್ಲಾಸಿಕ್ ಮೋಡ್ ನಲ್ಲಿ ಆಡಬಹುದು. ಆರ್ಕೇಡ್ ಕ್ರಮದಲ್ಲಿ, ವಿಭಿನ್ನ ಪ್ರಕಾರದ ಮಿಷನ್ ಅಥವಾ ಮೋಡ್ ಗೆ ಆಡಲು ಲಭ್ಯವಿದೆ. ಸಣ್ಣ ಯುದ್ಧ,  ತರಬೇತಿ  ಇತ್ಯಾದಿ.
ಕ್ಲಾಸಿಕ್ ಮೋಡಲ್ಲಿ, ಮೂರು ವಿಧದ ಆಟಗಳು ಲಭ್ಯವಿದೆ.  ಆಟಗಾರರು ಸ್ವಂತ ಆಯ್ಕೆ ಮಾಡಿಕೊಳ್ಳುತ್ತಾರೆ ಮತ್ತು ಅದನ್ನು ಆಟ ಆಡಬಹುದು. ಈ ಮೋಡಲ್ಲಿ 100 ಆಟಗಾರರು  ಏಕಕಾಲಕ್ಕೆ ಆಡಬಹುದು. ತಂಡವಾಗಿ ಆಡಬಹುದು. ಇದರಲ್ಲಿ ವಾಯ್ಸ್ ಚಾಟಿಂಗ್ ಕೂಡಾ ಲಭ್ಯವಿರುತ್ತದೆ. ಹೀಗಾಗಿ ತಂಡವಾಗಿ ಆಟವಾಡುತ್ತಾ ಸಾಗಿದಂತೆ ಪಾಯಿಂಟ್ ಗಳು ಲಭ್ಯವಾಗುತ್ತದೆ. ಗೆಲವು ಆಗುತ್ತದೆ. ಎದುರಾಳಿಗೆ ಶೂಟ್ ಮಾಡುತ್ತಾ ಸಾಗುವುದು  ಈ ಆಟದ ಮೂಲ ಅಷ್ಟೇ. ಕಾಶ್ಮೀರದ ಫೈರಿಂಗ್ ನಂತರ ಭಾರತದಲ್ಲಿ  ಈ ಆಟ ಜನಪ್ರಿಯವಾಗಿತ್ತು.  ಇಡೀ ಪ್ರಪಂಚಲ್ಲಿ  400 ಮಿಲಿಯನ್ ಆಟಗಾರರು ಕಳೆದ ವರ್ಷ ಇದನ್ನು ಡೌನ್ ಲೋಡ್ ಮಾಡಿದ್ದರು. ಪ್ರಪಂಚದಲ್ಲಿ  ಚೀನಾ , ಯು ಎಸ್ ಎ, ಭಾರತ , ಇಂಡೋನೇಷ್ಯಾ ದಲ್ಲಿ   ಅತೀ ಹೆಚ್ಚು ಈ ಆಟಗಾರರು ಇದ್ದರೆ ಎರಡನೇ ಸ್ಥಾನ ಭಾರತಕ್ಕಿದೆ. ಇತ್ತೀಚಿನ ದಿನಗಳಲ್ಲಿ ಈ ಆಟ ಅಪಾಯಕಾರಿಯಾಗುತ್ತಿದೆ ಎಂಬ ವರದಿಗಳು ಬರುತ್ತಿವೆ. ಕೊರಿಯನ್ ಮೂಲದ ಕಂಪನಿ ಈ ಗೇಮಿನ  ಸಂಸ್ಥಾಪಕ. ಬ್ಯೂಹೋಲ್ ವಿಡಿಯೋ ಡೆವಲಪರ್ ಕಂಪನಿಯ ಸಹಸಂಸ್ಥೆ.
ಈ ಆಟ ಮಕ್ಕಳ ಮೇಲೆ ವಿಪರೀತ ಪರಿಣಾಮ ಬೀರುತ್ತಿದೆ. ಹೀಗಾಗಿ ಮಕ್ಕಳು ಮೊಬೈಲ್ ಆಟವಾಡುತ್ತಾ ಗಂಟೆಗಟ್ಟಲೆ ಇದ್ದರೆ ಪರಿಶೀಲನೆ ಮಾಡಲೇಬೇಕು. ಏಕೆಂದರೆ ಎರಡು ದಿನಗಳ ಹಿಂದೆ ಮಧ್ಯಪ್ರದೇಶದ ನೀಮುಚ್ ನಲ್ಲಿ ಬಾಲಕನೊಬ್ಬ ಸಾವನ್ನಪ್ಪಿದ್ದಾರೆ. ವಿಪರೀತವಾದ ಮಾನಸಿಕ ಒತ್ತಡದಿಂದ ಎಂದು ಈಗ ತಿಳಿದಿದೆ.
ರಾಜಸ್ಥಾನ ಮೂಲದ ಕುಟುಂಬವೊಂದು  ಮದುವೆ ಕಾರ್ಯಕ್ರಮಕ್ಕಾಗಿ ಮಧ್ಯಪ್ರದೇಶಕ್ಕೆ ಹೋಗಿತ್ತು. ಆ ಕುಟುಂಬದಲ್ಲಿ 12 ನೇ ತರಗತಿ ಬಾಲಕ ಫರ್ಕಾನ್ ಖುರೇಷಿ ಮೃತಪಟ್ಟ ಬಾಲಕ.  ಆತ ಮದುವೆಗೆ ಬಂದರೂ ಸತತ 6 ಗಂಟೆಗಳ ಕಾಲ ಪಬ್ ಜಿ ಗೇಮಲ್ಲೇ ಮುಳುಗಿದ್ದ . ಈ ಬಗ್ಗೆ  ಪೋಷಕರು ಏನು ಹೇಳಿದರೂ ಕೇಳಿರಲಿಲ್ಲ. ಸತತವಾಗಿ ಪಬ್ ಜೀ ಗೇಮ್ ಆಡುವುದನ್ನು ಮುಂದುವರೆಸಿದ್ದ,   ಒಂದು ಹಂತದಲ್ಲಿ  ನೀನು ನನ್ನ ಆಟವನ್ನು ಸೋಲಿಸಿದೆ, ನನ್ನ ಜೀವನವನ್ನೂ ಸೋಲಿಸಿದೆ, ನಿನ್ನೊಂದಿಗೆ ಎಂದಿಗೂ ಆಡುವುದಿಲ್ಲ ಎಂದು ಜೋರಾಗಿ ಕಿರುಚಿದ್ದನ್ನು ಆತನ ಸಹೋದರಿಯರು ಗಮನಿಸಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿಆತ ತಲೆ ನೋವುತ್ತಿದೆ ಎಂದು ಕುಸಿದುಬಿದ್ದಿದ್ದಾನೆ. ತಕ್ಷಣವೇ ಪೋಷಕರು ಆತನನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಆತ  ಮೃತಪಟ್ಟಿದ್ದ. ಓದಿನಲ್ಲೂ ಮುಂದಿದ್ದ ಫರ್ಕಾನ್ ಖುರೇಷಿ, ಆನ್ ಲೈನ್ ನಲ್ಲಿ   6-8 ಯುವಕರ ತಂಡ ಕಟ್ಟಿಕೊಂಡು ಕಳೆದ ಒಂದೂವರೆ ವರ್ಷದಿಂದ ನಿರಂತರವಾಗಿ ಪಬ್ ಜಿ ಗೇಮ್ ಆಡುತ್ತಿದ್ದ ಎಂದು ಅವರ ತಂದೆ ಹರೂನ್ ರಶಿದ್ ಖುರೇಷಿ ಹೇಳಿದ್ದಾರೆ. ಆಸ್ಪತ್ರೆ ವೈದ್ಯರ ಪ್ರಕಾರ ಸೋಲಿನಿಂದ ಏಕಾ ಏಕಿ  ಉಂಟಾದ ಶಾಕ್ ನಿಂದ ಹೃದಯಸ್ತಂಭನ ಉಂಟಾಗಿದೆ ಎಂದಿದ್ದಾರೆ.
ಗೂಗಲ್ ನೀಡುವ ಮಾಹಿತಿ ಹೀಗಿದೆ…..
ಈ ಪಬ್ ಜಿ ಗೇಮ್ ಕೂಡಾ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಮಾಡುವುದು ಇದೇ. ಮನಸ್ಸಿನ ಮೇಲೆ  ಒತ್ತಡ ಮಾಡುತ್ತದೆ. ಅದರಲ್ಲಿ  ಕೆಲವು ಹೀಗೆ ಇರಬಹುದು ಮನಸ್ಸಿನಲ್ಲಿ  ತೀವ್ರ ಹಿಂಸಾಚಾರಕ್ಕೆ ಪ್ರಚೋದನೆ, ವಿಡಿಯೋ ಗೇಮ್ ಚಟ, ಕಡಿಮೆ ಸಾಮಾಜಿಕ ಸಂವಹನ, ಕಡಿಮೆ ಮಾತು, ದೈಹಿಕ ಆರೋಗ್ಯದ ಮೇಲೆ ಪರಿಣಾಮ,ಮಾನಸಿಕ ಆರೋಗ್ಯದ ಮೇಲೆ ಪರಿಣಾಮ, ಕಡಿಮೆ ನಿದ್ರೆ ಇತ್ಯಾದಿಗಳು ಇರಬಹುದು ಎಂದು ಗೂಗಲ್ ಮಾಹಿತಿ ನೀಡುತ್ತದೆ.
ಇವತ್ತಂತೂ ಮಕ್ಕಳಿಗೆ ಮೊಬೈಲ್ ಹುಚ್ಚು ವಿಪರೀತ. ಅದಿಲ್ಲದೆ ಸಾಧ್ಯವೇ ಇಲ್ಲ ಎಂದ ಸ್ಥಿತಿ ಇದೆ. ಇಡೀ ಸಮಾಜದಲ್ಲಿ ಎಲ್ಲಾ ಮಕ್ಕಳು ಮೊಬೈಲ್ ನೋಡುವಾಗ ನಿಮಗೆ ಕೊಡಲು ಇರದೇ ಆಗುವುದಿಲ್ಲ, ಕೊಡದೇ ಇದ್ದರೆ ಬೇರೊಬ್ಬರ ಮೊಬೈಲ್ ನೋಡುವುದು, ಕದಿಯುವುದು ಇತ್ಯಾದಿಯೂ ನಡೆಯಬಹುದು. ಹೀಗಾಗಿ ಬಳಕೆಯಲ್ಲಿ ನಿಯಂತ್ರಣ ಹಾಗೂ ಮೊಬೈಲ್ ವೀಕ್ಷಣೆಗೆ ಸಮಯದ ಮಿತಿ ಹಾಕಿ ನಿಯಂತ್ರಣವನ್ನು  ಹೆತ್ತವರು ಮಾಡಲೇಬೇಕಾದ ಅನಿವಾರ್ಯತೆ ಇಂದಿದೆ.

Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಗ್ಯಾರಂಟಿಗಳೂ ಮುಂದುವರೆಯುತ್ತವೆ | ಅಭಿವೃದ್ಧಿಯೂ ನಿಲ್ಲಲ್ಲ : ಒಂದು ವರ್ಷ ಪೂರೈಸಿ ಕಾಂಗ್ರೆಸ್‌ ಸರ್ಕಾರ | ಗ್ಯಾರಂಟಿಗಳಿಗೆ ವಾರೆಂಟಿ ಕೊಟ್ಟ ಸಿಎಂ |
May 20, 2024
5:31 PM
by: The Rural Mirror ಸುದ್ದಿಜಾಲ
ದ್ವಿತೀಯ ಪಿಯುಸಿ 2ನೇ ಪರೀಕ್ಷೆ ಫಲಿತಾಂಶ ನಂತರವೇ CET ಫಲಿತಾಂಶ | ಕರ್ನಾಟಕ ಪರೀಕ್ಷಾ ಪ್ರಾಧಿಕಾರ
May 20, 2024
2:34 PM
by: The Rural Mirror ಸುದ್ದಿಜಾಲ
ಮಳೆ ಇಲ್ಲ, ನೀರಿಲ್ಲ, ಬರಗಾಲ ಎಂದು ಬೊಬ್ಬೆ ಹೊಡೆಯದಿರಿ | ಮಳೆ ನೀರನ್ನು ಹಿಡಿದಿಡುವ ಕಾರ್ಯ ಅಗತ್ಯ |
May 19, 2024
5:57 PM
by: The Rural Mirror ಸುದ್ದಿಜಾಲ
ಮಾನವರಾದ ನಮಗೆ ಪರಿಸರ ಎಷ್ಟು ಮುಖ್ಯ..? | ಪರಿಸರಿದಿಂದ ನಮಗಾಗುವ ಪ್ರಯೋಜನವೇನು..? |
May 19, 2024
5:28 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror