ಪಯಸ್ವಿನಿ ಉಳಿಸಲು ಮಕ್ಕಳಿಂದಲೂ ಅಳಿಲ ಪ್ರಯತ್ನ : ಚಿತ್ರದ ಮೂಲಕ ದಾಖಲೀಕರಣ ಮಾಡಿದ ಸ್ನೇಹ ಶಾಲೆಯ ವಿದ್ಯಾರ್ಥಿಗಳು

January 25, 2020
2:05 PM

ಸುಳ್ಯ: ಜೀವನದಿ ಪಯಸ್ವಿನಿ ಮಳೆಗಾಲ ತುಂಬಿ ಹರಿಯುತ್ತದೆ. ಬೇಸಗೆಯಾದಂತೆ ಈಚೆಗೆ ಬತ್ತಲು ಶುರುವಾಗಿದೆ. ಹಿಂದೆಲ್ಲಾ ಹೀಗೆ ಇರಲಿಲ್ಲ. ಸುಳ್ಯದ ಜನರಿಗೆ ಕುಡಿಯುವ ನೀರು ಲಭ್ಯವಾಗುತ್ತಿತ್ತು, ಕೃಷಿಗೂ ಸಾಕಷ್ಟು ನೀರು ಪಯಸ್ವಿನಿ ನೀಡುತ್ತಿತ್ತು. ಹೀಗಾಗಿ ಈಗ ಪಯಸ್ವಿನಿ ಉಳಿಸಿ ಆಂದೋಲನ ಶುರುವಾಗಿದೆ. ಈ ಆಂದೋಲನದಲ್ಲಿ ಈಗ ಮಕ್ಕಳೂ ತೊಡಗಿಕೊಂಡಿದ್ದಾರೆ. ಸುಳ್ಯದ ಸ್ನೇಹ ಶಾಲೆ ವಿದ್ಯಾರ್ಥಿಗಳು ನದಿಯ ತಟದಲ್ಲಿ ಕುಳಿತು ಹಾಗೂ ಆಲೆಟ್ಟಿ ಸೇತುವೆಯ ಮೇಲೆ ನಿಂತು ಸ್ಥಳದಲ್ಲೇ ಚಿತ್ರಗಳನ್ನು ಬಿಡಿಸಿದರು. ಈ ಮೂಲಕ ನದಿಯ ಈಗಿನ ಸ್ಥಿತಿಯ ದಾಖಲೀಕರಣ ಮಾಡಿದರು.

ಸುಳ್ಯದ ಪಯಸ್ವಿನಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಇಳಿಯುತ್ತಿದೆ. ಮಳೆಗಾಲದಲ್ಲಿ ತುಂಬಿ ಹರಿಯುವ ನದಿಯ ಪಾತಳಿಯಲ್ಲಿ ವಿಸ್ತಾರವಾದ ದಿಬ್ಬಗಳು ಗೋಚರಿಸತೊಡಗಿವೆ. ನದಿ ನೀರು ಬತ್ತದಂತೆ ಮಾಡಲು ಸಾರ್ವಜನಿಕರ ಸಹಭಾಗಿತ್ವದಲ್ಲಿ ಏನಾದರೊಂದು ಸುಧಾರಣೆ ಮಾಡಬೇಕಾಗಿದೆ. ಅದಕ್ಕಾಗಿ ಚಿತ್ರಗಳ ಮೂಲಕ ಎಚ್ಚರ ಮೂಡಿಸುವ ಪ್ರಯತ್ನವಾಗಿ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ನದಿಯ ತಟದಲ್ಲಿ ಕುಳಿತು ಹಾಗೂ ಆಲೆಟ್ಟಿ ಸೇತುವೆಯ ಮೇಲೆ ನಿಂತು ಸ್ಥಳದಲ್ಲೇ ಚಿತ್ರಗಳನ್ನು ಬಿಡಿಸಿದರು. ಪರಿಸರ, ಜಲಸಂರಕ್ಷಣೆಯಲ್ಲಿ  ತೊಡಗಿಕೊಂಡಿರುವ, ಜಾಗೃತಿ ಮೂಡಿಸುತ್ತಿರುವ ಸುಳ್ಯದ ಕನ್ನಡ ಮಾಧ್ಯಮ ಶಾಲೆ ಈಗ ಇನ್ನೊಂದು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಜಲಸಂರಕ್ಷಣೆಯ ಕಡೆಗೆ ಮಕ್ಕಳಲ್ಲಿ  ಆಸಕ್ತಿ ಮೂಡಿಸುತ್ತಿದೆ.

ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರ ಮಾರ್ಗದರ್ಶನದಲ್ಲಿ ಮುಖ್ಯೋಪಾಧ್ಯಾಯಿನಿ  ಜಯಲಕ್ಷ್ಮಿ ದಾಮ್ಲೆ, ಅಧ್ಯಾಪಕರಾದ  ಸವಿತಾ , ದೇವಿಪ್ರಸಾದ್ ಸರ್ ಹಾಗೂ ದಿವ್ಯಶ್ರೀ  ಸಹಕರಿಸಿದರು.

 

Payaswini

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 11-04-2026 | ದಕ್ಷಿಣದಲ್ಲಿ ಮಳೆ, ಉತ್ತರದಲ್ಲಿ ಬಿಸಿ… ಮುಂದೇನು?
April 11, 2026
1:52 PM
by: ಸಾಯಿಶೇಖರ್ ಕರಿಕಳ
ಜನನ-ಮರಣ ನೋಂದಣಿ 21 ದಿನಗಳೊಳಗೆ ಕಡ್ಡಾಯ ನೋಂದಣಿ – ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ
April 11, 2026
7:09 AM
by: ಮಿರರ್‌ ಡೆಸ್ಕ್
ಹವಾಮಾನ ವರದಿ | 10-04-2026 | ಕರ್ನಾಟಕ ಹವಾಮಾನ ಅಪ್ಡೇಟ್‌- ಎಪ್ರಿಲ್ 15 ನಂತರ ಮಳೆ …! ಬಿಸಿಲಿನ ಬಿಸಿ ಮುಂದುವರಿಕೆ
April 10, 2026
3:11 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 09-04-2026 | ಕರ್ನಾಟಕದಲ್ಲಿ ಮಳೆ ಸಾಧ್ಯತೆ | ಕರಾವಳಿ–ಮಲೆನಾಡಿನಲ್ಲಿ ಗುಡುಗು ಮಳೆ ಎಚ್ಚರಿಕೆ..!
April 9, 2026
1:23 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror