ಪಯಸ್ವಿನಿ ನದಿಯಲ್ಲಿ ಈಗ ಹರಿಯುತ್ತದೆ ಕೆಂಪು ನೀರು….!

April 24, 2019
12:03 PM

ಸುಳ್ಯ: ಮಳೆ ಬಂದು ಒಂದೆಡೆ ಮಣ್ಣು ಮಿಶ್ರಿತ ಕೆಂಪು ನೀರು ತುಂಬಿ ಹರಿಯುತ್ತಿದ್ದರೆ, ಇನ್ನೊಂದೆಡೆ ಬಿಸಿಲ ಬೇಗೆಗೆ ಸಿಲುಕಿ ಪಯಸ್ವಿನಿ ನದಿಯ ಒಡಲು ಬತ್ತಿ ಬರಡಾಗಿದೆ. ಮಳೆ-ಬಿಸಿಲಿನ ಪ್ರತಾಪಗಳ ಪರಿಣಾಮ ಪಯಸ್ವಿನಿ ನದಿಯ ಎರಡು ತುದಿ ಎರಡು ವಿಭಿನ್ನ ಸ್ವರೂಪವನ್ನು ಪಡೆದುಕೊಂಡ ಬಗೆ ಇದು.
ಕೊಡಗು ಜಿಲ್ಲೆಯ ಭಾಗಗಳಾದ ಜೋಡುಪಾಲ, ಮೊಣ್ಣಂಗೇರಿ ಭಾಗಗಳಲ್ಲಿ ಕಳೆದ ಕೆಲವು ದಿನಗಳಲ್ಲಿ ಸುರಿದ ಮಳೆಯಿಂದಾಗಿ ನದಿಯಲ್ಲಿ ನೀರಿನ ಹರಿವು ಹೆಚ್ಚಿದೆ. ಅಲ್ಲಿಂದ ಕೆಸರು ಮಣ್ಣು ಮಿಶ್ರಿತ ಕೆಂಪು ನೀರು ಹರಿದು ಬರುತಿದೆ. ಸುಳ್ಯ ನಗರಕ್ಕೆ ಸಮೀಪವೇ ಇರುವ ಅರಂಬೂರು ಭಾಗದಲ್ಲಿ ಕೆಂಪು ನೀರು ಹರಿದು ಬಂದಿದೆ. ಕಳೆದ ವರ್ಷ ಜೋಡುಪಾಲ, ಎರಡನೇ ಮೊಣ್ಣಂಗೇರಿ ಭಾಗದಲ್ಲಿ ಉಂಟಾದ ಜಲಪ್ರಳಯ ಮತ್ತು ಭೂ ಕುಸಿತದಿಂದಾಗಿ ಪ್ರಳಯ ಜಲ ಮತ್ತು ಮಣ್ಣು ಮಿಶ್ರಿವಾದ ನೀರು ಸುಮಾರು ಒಂದೂವರೆ ತಿಂಗಳಿಗಿಂತಲೂ ಹೆಚ್ಚು ಸಮಯ ಕೆಂಪು ಬಣ್ಣ ಮಿಶ್ರಿತ ನೀರು ತುಂಬಿ ಹರಿದಿತ್ತು. ಇದೀಗ ಬೇಸಿಗೆ ಮಳೆ ಆರಂಭವಾದಗಲೂ ಅದರ ಮುಂದುವರಿದ ಭಾಗ ಎಂಬಂತೆ ಕೆಂಪು ಮಿಶ್ರಿತ ನೀರು ನದಿಯಲ್ಲಿ ಹರಿದು ಬರುತಿದೆ. ಸಂಪೂರ್ಣ ಹರಿವು ನಿಲ್ಲಿಸಿದ್ದ ಪಯಸ್ವಿನಿಗೆ ಮಳೆಯ ಪರಿಣಾಮದಿಂದ ಮತ್ತೆ ಜೀವ ಕಳೆ ಬಂದಿದೆ. ಕೊಯನಾಡು, ಸಂಪಾಜೆ, ಅರಂತೋಡು, ಅರಂಬೂರು ಭಾಗದಲ್ಲಿ ಸ್ವಲ್ಪ ಮಟ್ಟಿನ ನೀರಿನ ಹರಿವು ಹೆಚ್ಚಳಗೊಂಡಿದೆ ಎಂದು ಸ್ಥಳೀಯರು ಹೇಳುತ್ತಾರೆ.

Advertisement
Advertisement
Advertisement

ನೀರಿನ ಸಮಸ್ಯೆ ತೀವ್ರ:

Advertisement

ಕೇರಳ ಕರ್ನಾಟಕ ಗಡಿ ಪ್ರದೇಶವಾದ ಮಂಡೆಕೋಲು, ಜಾಲ್ಸೂರು ಭಾಗಗಳಲ್ಲಿ ಪಯಸ್ವಿನಿ ನದಿ ಮತ್ತು ಇತರ ಜಲ ಮೂಲಗಳು ಬತ್ತಿ ಹೋಗಿದೆ. ಪಯಸ್ವಿನಿ ನದಿಯಲ್ಲಿ ನೀರಿನ ಹರಿವು ತೀವ್ರ ಕಡಿಮೆಯಾಗಿದ್ದು ಕುಡಿಯಲು, ಕೃಷಿಗೆ ನೀರಿಲ್ಲದೆ ಬವಣೆ ಪಡುವಂತಾಗಿದೆ. ಜಲಚರಗಳು ಕೂಡ ಸಾಯುವ ಪರಿಸ್ಥಿತಿ ಉಂಟಾಗಿದೆ. ಕೆಲವು ಹೊಂಡಗಳಲ್ಲಿ ಮಾತ್ರ ನೀರು ಇದ್ದು ಅಲ್ಲಿ ನೀರು ಬಿಸಿ ಆಗಿ ಜಲಚರಗಳು ವಿಲ ವಿಲನೆ ಒದ್ದಾಡುವ ಪರಿಸ್ಥಿತಿ ಎದುರಾಗಿದೆ. ಅಲ್ಲದೆ ಮಂಡೆಕೋಲು ಮತ್ತಿತರ ಕಡೆಗಳಲ್ಲಿ ನೀರಿಲ್ಲದೆ ಕೃಷಿ ಸಂಪೂರ್ಣ ಒಣಗಿ ಹೋಗುತಿದೆ. ಅಡಿಕೆ, ತೆಂಗಿನ ತೋಟಗಳು ನೀರಿಲ್ಲದೆ ಕರಟಿ ಹೋಗುತಿದೆ. ಮಂಡೆಕೋಲು ಗ್ರಾಮದ ಬೊಳುಗಲ್ಲು ಮತ್ತಿತರ ಕಡೆಗಳಲ್ಲಿ ನೀರಿಗೆ ತೀವ್ರ ಸಮಸ್ಯೆ ಎದುರಾಗಿದೆ. ಕೆಲವು ಭಾಗಗಳಲ್ಲಿ ಅಂತರ್ಜಲ ಮಟ್ಟವೂ ಕುಸಿದಿದ್ದು ಕೊಳವೆ ಬಾವಿಗಳಲ್ಲೂ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಸ್ಥಳೀಯರು. ಸುಳ್ಯ ತಾಲೂಕಿನ ಹಲವು ಗ್ರಾಮಗಳಲ್ಲಿ ನೀರಿನ ಕೊರತೆ ಎದುರಾಗಿದೆ. ಪ್ರತಿ ವರ್ಷ ಏಪ್ರಿಲ್ ಕೊನೆಯವರೆಗೂ ಸಮೃದ್ಧವಾಗಿರುತ್ತಿದ್ದ ತೋಡು, ಕೆರೆ, ಬಾವಿ, ಸುರಂಗಗಳು ಜನವರಿ-ಫೆಬ್ರವರಿ ತಿಂಗಳಲ್ಲಿಯೇ ಬತ್ತಿ ಬರಡಾಗಿದೆ. ಮಳೆ ಬಂದು ಮೇಲ್ಭಾಗದಲ್ಲಿ ಪಯಸ್ವಿನಿಯ ಹರಿವು ಸ್ವಲ್ಪ ಹೆಚ್ಚಾದರೂ ನೀರು ಕೆಳ ಭಾಗಕ್ಕೆ ಇನ್ನೂ ತಲುಪಿಲ್ಲ.

“ಮಂಡೆಕೋಲು ಸೇರಿದಂತೆ ಸುಳ್ಯ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನೀರಿನ ಮೂಲಗಳು ಬತ್ತಿ ಹೋಗಿ ತೀವ್ರ ನೀರಿನ ಸಮಸ್ಯೆ ಉಂಟಾಗಿದೆ. ಜನವರಿ-ಫೆಬ್ರವರಿ ತಿಂಗಳಲ್ಲಿಯೇ ನೀರಿನ ಮೂಲಗಳು ಬತ್ತಿ ಹೋಗಿದೆ. ಇದರ ಪರಿಣಾಮವಾಗಿ ಕೃಷಿ ಸಂಪೂರ್ಣ ಕರಟಿ ಹೋಗಿದೆ. ಸರಿಯಾಗಿ ಮಳೆ ದೊರೆಯದೇ ಇದ್ದಲ್ಲಿ ನೀರಿನ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಆತಂಕ ಎದುರಾಗಿದೆ ” ಎಂದು ಮಂಡೆಕೋಲು ಗ್ರಾ.ಪಂ. ಮಾಜಿ ಅಧ್ಯಕ್ಷ ಸುರೇಶ್ ಕಣೆಮರಡ್ಕ “ಸುಳ್ಯ ಸುದ್ದಿ.ಕಾಂ” ನೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

Team the rural mirror

ಇದನ್ನೂ ಓದಿ

ಕುಕ್ಕೆಸುಬ್ರಹ್ಮಣ್ಯ | ಗಣೇಶೋತ್ಸವದ ಸಾಂಸ್ಕೃತಿಕ ಸಂಜೆಯಲ್ಲಿ ವೈಭವ…! |
September 24, 2023
7:59 PM
by: ದ ರೂರಲ್ ಮಿರರ್.ಕಾಂ
ಸ್ನೇಹದಲ್ಲಿ ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನ | ಪಕ್ಷಿಗಳ ಸ್ವರ ಸಾಮ್ರಾಜ್ಯಕ್ಕೆ ಸಸ್ಯರಾಶಿ ಅವಶ್ಯ
September 24, 2023
7:40 PM
by: ದ ರೂರಲ್ ಮಿರರ್.ಕಾಂ
ಪೆರಾಜೆ ಕಲ್ಲಿನ ಗಣಿಗಾರಿಕೆ | ಸ್ಪೋಟಕ ಬಳಸದೇ ಗಣಿಗಾರಿಕೆಗೆ ಸೂಚನೆ | ಪೆರಾಜೆ ಶಾಸ್ತಾವು ದೇವಳದಲ್ಲಿ ಸಾರ್ವಜನಿಕರಿಂದ ಪೂಜೆ |
September 24, 2023
7:33 PM
by: ದ ರೂರಲ್ ಮಿರರ್.ಕಾಂ
ಗಣೇಶ ಉತ್ಸವ ಸಂಭ್ರಮಗಳಲ್ಲಿ ಭಾಗಿಯಾದ ಅರುಣ್‌ ಪುತ್ತಿಲ | 40 ಕ್ಕೂ ಅಧಿಕ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಯುವಕರ ನೆಚ್ಚಿನ “ಅರುಣಣ್ಣ” |
September 24, 2023
6:16 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror