ಪರಿಣಾಮ ಬೀರದ “ನೋಟಾ” ; ದಕ್ಷಿಣ ಕನ್ನಡದಲ್ಲಿ 7380 NOTA ಮತದಾರರು…!

May 24, 2019
8:00 AM

ಲೋಕಸಭಾ ಮತದಾನದ ಎಣಿಕೆ ಕಾರ್ಯ ಮುಗಿದು ಯಾವ ಪಕ್ಷ ಅಧಿಕಾರಕ್ಕೆ ಹಾಗೂ ಎಷ್ಟು ಮತ ಎಂಬ ಲೆಕ್ಕಾಚಾರವೂ ಮುಗಿದಿದೆ. ದಕ್ಷಿಣ ಕನ್ನಡದಲ್ಲೂ ಭರ್ಜರಿ ಲೀಡ್ ಮೂಲಕ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಗೆಲುವು ಸಾಧಿಸಿದ್ದಾರೆ. ಈ ಬಾರಿ ನರೇಂದ್ರ ಮೋದಿ ಅವರೇ ಅಭ್ಯರ್ಥಿ ಎಂಬಷ್ಟರ ಮಟ್ಟಿಗೆ ಪ್ರಚಾರ ನಡೆದಿತ್ತು. ಹೀಗಾಗಿ ಎಲ್ಲೆಡೆಯ ಗೆಲವೂ ನರೇಂದ್ರ ಮೋದಿ ಅವರ ಕೊಡುಗೆ ಎಂದು ಮತ್ತೆ ಹೇಳಬೇಕಾಗಿಲ್ಲ. ಆದರೆ ಅದಕ್ಕಿಂತಲೂ ಗಮನಿಸಬೇಕಾದ್ದು “ನೋಟ” ಮತದಾನ. ಈ ಬಾರಿ ತುಮಕೂರು ಹಾಗೂ ಚಾಮರಾಜನಗರ ದಲ್ಲಿ ಗೆಲುವಿನ ಅಂತರದ ಮೇಲೆ ಪರಿಣಾಮ ಬೀರಿದ್ದು  ಹೊರತುಪಡಿಸಿದರೆ ಬೇರೆಲ್ಲೂ ನೋಟಾ ಪರಿಣಾಮವೇ ಬೀರಿಲ್ಲ. ಆದರೆ ಮತದಾರರ ಸಂಖ್ಯೆ  ಮಾತ್ರಾ ಹೆಚ್ಚಿದೆ.

Advertisement
Advertisement
Advertisement

ಈ ಬಾರಿ 7380 ಮತದಾರರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೋಟ ಚಲಾಯಿಸಿದ್ದಾರೆ. ಈ ಬಗ್ಗೆ ಗಂಭೀರವಾಗಿ ಯೋಚನೆ ನಡೆಸಬೇಕು. ಏಕೆಂದರೆ ಇವರು ಅವಿದ್ಯಾವಂತರಲ್ಲ.  ಇದರಲ್ಲಿ  ಬೆಳ್ತಂಗಡಿ 1073 , ಮೂಡಬಿದ್ರೆ 943 , ಮಂಗಳೂರು ಉತ್ತರ 926 , ಮಂಗಳೂರು ಉತ್ತರ 818 , ಮಂಗಳೂರು 582 , ಬಂಟ್ವಾಳ 980 , ಪುತ್ತೂರು 1010 ಹಾಗೂ ಸುಳ್ಯದಲ್ಲಿ 1043 ಮತಗಳು ನೋಟಾ ಚಲಾವಣೆಯಾದರೆ  ಅಂಚೆ ಮತಗಳಲ್ಲಿ  5 ಮತಗಳು ನೋಟಾ ಚಲಾವಣೆಯಾಗಿದೆ. ಹೀಗೆ ಒಟ್ಟು 7380 ಮತಗಳು ನೋಟಾ ಚಲಾವಣೆಯಾಗಿದೆ. ಅದರಲ್ಲೂ ಸುಳ್ಯದಲ್ಲಿ  1043 ಮತಗಳು ನೋಟಾ ಚಲಾವಣೆಯಾಗುವ ಮೂಲಕ ಅತ್ಯಧಿಕ ಮತವಾಗಿದೆ. ಸುಳ್ಯದಲ್ಲೇ ಅತ್ಯಧಿಕ ಮತಗಳು ಬಿಜೆಪಿಗೆ ಲಭ್ಯವಾಗಿದೆ, ಇದೇ ವೇಳೆ ನೋಟಾವು ಜಿಲ್ಲೆಯಲ್ಲೇ ಅಧಿಕ ಪ್ರಮಾಣದಲ್ಲಿ ಚಲಾವಣೆ ಸುಳ್ಯದಿಂದಲೇ ನಡೆದಿದೆ.

Advertisement

ಜಿಲ್ಲೆಯಲ್ಲಿ ಶೇ.57.57 ಮತಗಳು ನಳಿನ್ ಕುಮಾರ್ ಪರ ಚಲಾವಣೆಯಾಗಿ ಶೇ37.15 ಮತಗಳು ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ಅವರ ಪರ ಚಲಾವಣೆಯಾಗಿದೆ. ಶೇ.3.48 ಮತಗಳಿ ಎಸ್ ಡಿ ಪಿ ಐ ಅಭ್ಯರ್ಥಿ ಮಹಮ್ಮದ್ ಇಲಿಯಾಸ್ ಪರ ಚಲಾವಣೆಯಾದರೆ ನಂತರದ ಸ್ಥಾನ ನೋಟಾಕ್ಕಿದೆ. ನೋಟಾಕ್ಕೆ ಶೇ.0.55 ಮತಗಳು ಚಲಾವಣೆಯಾಗಿದೆ. ಜಿಲ್ಲೆಯಲ್ಲಿ  4 ನೇ ಸ್ಥಾನ ನೋಟ ಪಡೆದುಕೊಂಡಿದೆ.

ಉಡುಪಿಯಲ್ಲೂ 7510 ನೋಟಾ ಮತಗಳು ಚಲಾವಣೆಯಾದರೆ ಮೈಸೂರಿನಲ್ಲಿ 5346 ಮತಗಳು ನೋಟಾಕ್ಕೆ ಬಿದ್ದಿವೆ. ಉಳಿದಂತೆ ಬಾಗಲಕೋಟೆಯಲ್ಲಿ  11328 ಮತಗಳ ನೋಟಾ , ಬೆಂಗಳೂರು ಸೆಂಟ್ರಲ್ 10760 ಮತಗಳು ನೋಟಾ,  ಬೆಂಗಳೂರು  ಉತ್ತರ 11632 ಮತಗಳು ನೋಟಾ, ಬೆಂಗಳೂರು ಗ್ರಾಮಾಂತರ 12454  ಮತಗಳು ನೋಟಾ ,  ಬೆಂಗಳೂರು ದಕ್ಷಿಣ  9938  ಮತಗಳು ನೋಟಾ, ಬೆಳಗಾಂ 3233 ಮತಗಳ ನೋಟಾ , ಬಳ್ಳಾರಿ 9024  ಮತಗಳು ನೋಟಾ,    ಬೀದರ್ 1948 ಮತಗಳು ನೋಟಾ, ಬೀಜಾಪುರ  12286 ಮತಗಳು ನೋಟಾ, ಚಾಮರಾಜ ನಗರ 12716 ಮತಗಳು ನೋಟಾ, ಚಿಕ್ಕಬಳ್ಳಾಪುರ  8025 ಮತಗಳು ನೋಟಾ, ಚಿಕ್ಕೋಡಿ  10362 ಮತಗಳು ನೋಟಾ , ಚಿತ್ರದುರ್ಗ  4368 ಮತಗಳು ನೋಟಾ,  ದಾವಣಗೆರೆ 3098 ಮತಗಳು ನೋಟಾ, ಧಾರವಾಡ 3512 ಮತಗಳು ನೋಟಾ,  ಗುಲ್ಬರ್ಗಾ 10487 ಮತಗಳು ನೋಟಾ    , ಹಾಸನ 11662 ಮತಗಳು ನೋಟಾ , ಹಾವೇರಿ 7412 ಮತಗಳು ನೋಟಾ  , ಕೋಲಾರ 13889 ಮತಗಳು ನೋಟಾ , ಕೊಪ್ಪಳ 10813  ಮತಗಳು ನೋಟಾ, ಮಂಡ್ಯ 3526 ಮತಗಳು ನೋಟಾ  , ರಾಯಚೂರು 14921   ಮತಗಳು ನೋಟಾ , ಶಿವಮೊಗ್ಗ 6868 ಮತಗಳು ನೋಟಾ, ತುಮಕೂರು 10295  ಮತಗಳು ನೋಟಾ, ಉತ್ತರಕನ್ನಡ  16017 ಮತಗಳು ನೋಟಾ ಚಲಾವಣೆಯಾಗಿದೆ.

Advertisement

ಈ ಬಾರಿ ಎಲ್ಲೂ ಅಷ್ಟೊಂದು ಪರಿಣಾಮ ಬೀರಿಲ್ಲ ನೋಟಾ. ಆದರೆ ದೇವೇ ಗೌಡ ಅವರ ಸೋಲಿಗೆ ನೋಟಾವೂ ಕಾರಣವಾಯಿತೇ ಎಂಬ ಪ್ರಶ್ನೆ ಈಗ ಇದೆ.

 

Advertisement

 

Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಮಳೆ-ಹಿಮಪಾತ | ಹಿಮಾಚಲ ಪ್ರದೇಶದ 104 ರಸ್ತೆಗಳಲ್ಲಿ ಸಂಚಾರ ನಿರ್ಬಂಧ |
April 21, 2024
11:06 PM
by: ದ ರೂರಲ್ ಮಿರರ್.ಕಾಂ
ಭವಿಷ್ಯದಲ್ಲಿ ಭಾರತದ ಕೃಷಿ ಬೆಳವಣಿಗೆ ಹವಾಮಾನದ ಆಧಾರದಲ್ಲಿ | ಈ ಚುನಾವಣೆಯಲ್ಲಿ ಹವಾಮಾನ ಸ್ಥಿರತೆಯ ಬಗ್ಗೆ ಪಕ್ಷಗಳ ನಿಲುವು ಏನು ?
April 21, 2024
10:27 PM
by: ದ ರೂರಲ್ ಮಿರರ್.ಕಾಂ
ಪರಿಸರ ಸ್ನೇಹಿ ಕೈಚೀಲಗಳ ಕುರಿತು ಒಂದಿಷ್ಟು ಮಾಹಿತಿ ನಿಮಗಾಗಿ | ನಮ್ಮ ದೇಶದ ಡಿಫೆನ್ಸ್ ರೀಸರ್ಚ ಡೆವಲಪ್ಮೆಂಟ್ ಸೆಂಟರ್‌ನಿಂದ ತಯಾರಿ |
April 20, 2024
5:07 PM
by: The Rural Mirror ಸುದ್ದಿಜಾಲ
ರಕ್ಷಣಾ ವಲಯದಲ್ಲಿ ಭಾರತದ ಸಾಧನೆ | ಫಿಲಿಪೈನ್ಸ್‌ಗೆ ಭಾರತದ ಬ್ರಹ್ಮೋಸ್ ರಫ್ತು| ಬೇರೆ ರಾಷ್ಟ್ರಗಳಿಂದ ಹೆಚ್ಚಿದ ಬೇಡಿಕೆ
April 20, 2024
3:14 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror