ಸುಳ್ಯ: ಕರ್ನಾಟಕ ಮತ್ತು ಕೇರಳ ನೆರೆಯ ಪ್ರಭಾವದ ನೋವಿನ ಮಧ್ಯೆ ಈದ್ ಆಚರಣೆ ಬಹಳ ಸರಳವಾಗಿ ಅಚರಿಸುವ ಉದ್ದೇಶದಿಂದ ಜಟ್ಟಿಪಳ್ಳದ ಯುವಕರು ಸ್ವಚ್ಛತಾ ಅಭಿಯಾನ ಮೂಲಕ ಆಚರಿಸಿದರು.
ಸಿ.ಎಫ್.ಸಿ ಜಟ್ಟಿಪಳ್ಳ ಇದರ ವತಿಯಿಂದ ನಡೆದುಕೊಂಡು ಬರುತ್ತಿರುವ ಸ್ವಚ್ಛ ವಾರ್ಡ್ ಜಟ್ಟಿಪಳ್ಳ ಅಭಿಯಾನದ 3 ನೇ ಹಂತದ ಕಾರ್ಯಕ್ರಮ ಬಕ್ರೀದ್ ಹಬ್ಬದ ದಿನದಂದು ಜರಗಿತು.
ಡಿಗ್ರಿ ಕಾಲೇಜ್ ರೋಡ್ ಜಟ್ಟಿಪಳ್ಳವಾಗಿ ಕನಿಕರಪಳ್ಳ ಸಂಪರ್ಕ ರಸ್ತೆಯು (ಕಾಂಕ್ರೀಟ್) ಪಾಚಿ ಹಿಡಿದು ನಡೆಯಲು ಕಷ್ಟದ ಸ್ಥಿತಿಯಲ್ಲಿತ್ತು. ಸ್ವಚ್ಛ ವಾರ್ಡ್ ಜಟ್ಟಿಪಳ್ಳ ಅಭಿಯಾನ ಇದರ ಮೂರನೇ ಹಂತದ ಕಾರ್ಯಕ್ರಮ ದಲ್ಲಿ ಶುಚಿಗೊಳಿಸಿದರು .
ಅಭಿಯಾನದಲ್ಲಿ ಸಿ.ಎಫ್.ಸಿ ಅಧ್ಯಕ್ಷ ನಾಸಿರ್ ಸಿ.ಎ, ಗ್ರೀನ್ ಬಾಯ್ಸ್ ಅಸೋಸಿಯೇಶನ್ ಅಧ್ಯಕ್ಷ ಶಿಹಾಬ್ ಷಾ, ಜಟ್ಟಿಪಳ್ಳ ಫ್ರೆಂಡ್ಸ್ ಅಧ್ಯಕ್ಷ ಶರೀಫ್ , ಕರವೇ ಸ್ವಾಭಿಮಾನಿ ಬಣದ ಸುಳ್ಯ ನಗರ ಅಧ್ಯಕ್ಷ ರಶೀದ್ ಜಟ್ಟಿಪಳ್ಳ, ಇಬ್ಬನಿ ಅಧ್ಯಕ್ಷ ಖಾದರ್ ಜಟ್ಟಿಪಳ್ಳ, ಸಿ ಎಫ್ ಸಿ ಸಂಘಟನಾ ಕಾರ್ಯದರ್ಶಿ ಶಿಹಾಬ್ ಜೆ.ಎಂ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಕೆ.ಎ, ಕ್ರೀಡಾ ಕಾರ್ಯದರ್ಶಿ ಇಮ್ರಾನ್ ಬಾರಿಕ್ಕಾಡ್ ಹಾಗೂ ಪದಾಧಿಕಾರಿಗಳಾದ ಸತ್ಯನಾರಯಯಣ, ಆಶಿರ್ ಜಟ್ಟಿಪಳ್ಳ, ಸುಲೈಮಾನ್ ಬಾಷ, ನೌಫಲ್ ಜಟ್ಟಿಪಳ್ಳ, ಫೈಸಲ್ ಜೆಟಿಪಿ ಮೊದಲಾದವರು ಭಾಗವಹಿಸಿದರು.