ಸುಬ್ರಹ್ಮಣ್ಯ: ವ್ಯಾಪಾರ ವಹಿವಾಟಿನ ಜತೆಗೆ ಸಹಾಯ ಮಾಡುವ ಗುಣ ಹೊಂದಿರಬೇಕು. ಸಮಾಜದ ಹಲವು ಸಂಘ ಸಂಸ್ಥೆಗಳು ಸಮಾಜದಲ್ಲಿನ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿರವುದು ಶ್ಲಾಘನೀಯ. ಪರಸ್ಪರ ಸಹಾಯ ಮಾಡುವ ಮನೋಭಾವನೆ ಎಲ್ಲರಲ್ಲೂ ಬೆಳೆಯಬೇಕು ಎಂದು ಸುಬ್ರಹ್ಮಣ್ಯ ಜೇಸಿಐನ ಹರಿಪ್ರಸಾದ್ ಎಂ ಹೇಳಿದರು.
Advertisement
ಸುಬ್ರಹ್ಮಣ್ಯ ಕೃಷ್ಣಪ್ಯಾಲೇಸ್ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ನಿತಿನ್ ನೂಚಿಲ ಮಾಲಕತ್ವ ಅರೆಂಜ್ ಎಂಟರ್ ಪ್ರೈಸಸ್ ಸಂಸ್ಥೆಯಿಂದ ಪರ್ವತಮುಖಿ ಅಂಗನವಾಡಿ ಕೇಂದ್ರಕ್ಕೆ ಉಚಿತವಾಗಿ ನೀಡಲಾದ ಕೊಡೆ ಹಾಗೂ ಶಾಲಾ ಬ್ಯಾಗು ವಿತರಿಸಿ ಮಾತನಾಡಿದರು.
Advertisement
ಮಾಲಕ ನಿತಿನ್ ಅವರು ಮಾತನಾಡಿ ಗಳಿಕೆಯ ಒಂದಂಶವನ್ನು ಸಾಮಾಜಿಕ ಚಟುವಟಿಕೆ ನೀಡುವುದು ಕರ್ತವ್ಯ. ಅದನ್ನು ಮಕ್ಕಳ ಶಿಕ್ಷಣಕ್ಕೆ ಬಳಸಿಕೊಳ್ಳುವುದು ಸೂಕ್ತ ಎಂದರು.
ಸೃಷ್ಠಿ ಮೊಬೈಲ್ಸ್ ಮಾಲಕ ಪ್ರದೀಪ್ ಕೆ.ಜೆ, ಅಂಗನವಾಡಿ ಕಾರ್ಯಕರ್ತೆ ಸುಗುಣ ವಿ, ಸಹಾಯಕಿ ಉಷಾ ಎಂ.ಎ. ಪುಟಾಣಿಗಳು ಉಪಸ್ಥಿತರಿದ್ದರು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement