ಸವಣೂರು: ದ.ಕ.ಜಿ.ಪಂ.ಕೃಷಿ ಇಲಾಖೆ ಪುತ್ತೂರು ತಾ.ಕಡಬ ಹೋಬಳಿ ಇದರ 2019-20 ನೇ ಸಾಲಿನ ಬೀಜೋಪಚಾರ ಹಾಗೂ ಸುರಕ್ಷಿತ ಕೀಟನಾಶಕಗಳ ಬಳಕೆ ಯ ತರಬೇತಿ ಕಾರ್ಯಕ್ರಮ ಸಿದ್ದಿವಿನಾಯಕ ಸೇವಾ ಸಂಘ ,ಗ್ರಾಮ ವಿಕಾಸ ಸಮಿತಿ ಪಾಲ್ತಾಡಿ ಇದರ ಸಹಕಾರದೊಂದಿಗೆ ಪಾಲ್ತಾಡಿ ಮಂಜುನಾಥನಗರ ಶ್ರೀ ಸಿದ್ದಿವಿನಾಯಕ ಸಭಾಭವನದಲ್ಲಿ ಗುರುವಾರ ನಡೆಯಿತು.
ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ ಉದ್ಘಾಟಿಸಿದರು.ಸವಣೂರು ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷ ತಾರಾನಾಥ ಕಾಯರ್ಗ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಗ್ರಾ.ಪಂ.ಸದಸ್ಯರಾದ ಸತೀಶ್ ಅಂಗಡಿಮೂಲೆ,ಪ್ರಕಾಶ್ ಕುದ್ಮನಮಜಲು,ಭಾರತಿ ಗ್ರಾಮ ವಿಕಾಸ ಪ್ರತಿಷ್ಠಾನದ ಅಧ್ಯಕ್ಷ ಸುಧಾಕರ ರೈ ಕುಂಜಾಡಿ,ಗ್ರಾ.ಪಂ.ಮಾಜಿ ಸದಸ್ಯ ಬಾಳಪ್ಪ ಪೂಜಾರಿ,ಕೃಷಿ ಅಧಿಕಾರಿ ತಿಮ್ಮಪ್ಪ ಗೌಡ,ವಿವೇಕಾನಂದ ಯುವಕ ಮಂಡಲದ ಗೌರವಾಧ್ಯಕ್ಷ ಸುಧೀರ್ ಕುಮಾರ್ ರೈ ಕುಂಜಾಡಿ,ಪದ್ಮಪ್ರಸಾದ್ ಆರಿಗ ಪಂಚೋಡಿ ಮೊದಲಾದವರಿದ್ದರು.
ವಿವೇಕಾನಂದ ಯುವಕ ಮಂಡಲದ ಅಧ್ಯಕ್ಷ ಪ್ರಸಾದ್ ರೈ ಬೈಲಾಡಿ ಸ್ವಾಗತಿಸಿದರು. ಗಂಗಾಧರ ಪೆರಿಯಡ್ಕ ವಂದಿಸಿದರು.ಗ್ರಾಮ ವಿಕಾಸ ಸಮಿತಿಯ ಅಧ್ಯಕ್ಷ ಪ್ರವೀಣ್ ಚೆನ್ನಾವರ ನಿರೂಪಿಸಿದರು.