ಪಿಲಿಕುಳ ಮೃಗಾಲಯಕ್ಕೆ ಹೊಸ ವನ್ಯ ಜೀವಿಗಳ ಆಗಮನ

February 28, 2020
9:20 PM

ಮಂಗಳೂರು: ಕೇಂದ್ರ ಮೃಗಾಲಯ ಪ್ರಾಧಿಕಾರದ ಪ್ರಾಣಿ ವಿನಿಮಯ ಯೋಜನೆಯಂತೆ ಪಿಲಿಕುಳ ಮತ್ತು ಮೈಸೂರು ಮೃಗಾಲಯಗಳ ಒಡಂಬಡಿಕೆ ಪ್ರಕಾರ ತಮ್ಮಲ್ಲಿರುವ ಹೆಚ್ಚುವರಿ ಮೃಗಗಳನ್ನು ವಿನಿಮಯ ಮಾಡಿಕೊಂಡಿವೆ.

 

ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಮೈಸೂರಿಂದ ಅಪರೂಪದ ನಾಲ್ಕು ಕಪ್ಪು ಹಂಸಗಳು, ಎರಡು ಪಟ್ಟೆ ಹೈನಗಳು ಮತ್ತು ಎರಡು ಕಾಡು ಕೋಣ ಮರಿಗಳು ಆಗಮಿಸಿದೆ. ಪಿಲಿಕುಳದಲ್ಲಿ ಕಾಡುಕೋಣಗಳ ಸಂಖ್ಯೆ ನಾಲ್ಕಕ್ಕೆ ಹೆಚ್ಚಿದೆ. ಪಿಲಿಕುಳದಿಂದ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಎರಡು 3 ವರ್ಷ ಪ್ರಾಯದ ರಾಯಲ್ ಬೆಂಗಾಲ್ ಹುಲಿ, ನಾಲ್ಕು ಕಾಳಿಂಗ ಸರ್ಪ ಮತ್ತು ಎರಡು ಕಾಡು ಬಾತುಗಳನ್ನು ನೀಡಲಾಗಿದೆ.
ಕಪ್ಪು ಹಂಸಗಳು ಈಗಾಗಲೇ ವಿಕ್ಷಣೆಗೆ ಲಭ್ಯವಿದೆ. ಹೈನಗಳು ಒಂದು ವಾರದ ನಂತರ ಸಂದರ್ಶಕರಿಗೆ ವೀಕ್ಷಣೆಗೆ ಲಭ್ಯವಾಗಲಿದೆ.

ಶೀಘ್ರದಲ್ಲಿ ದೇಶದ ವಿವಿಧ ಮೃಗಾಲಯಗಳಿಂದ ಬಿಳಿ ಮತ್ತು ಕಂದು ರಿಯಾ ಪಕ್ಷಿಗಳು, ಎರಡು ಸ್ವೇಂಪ್ ಡೀರ್‍ಗಳು, ಒರ್‍ಯಂಟಾಲ್ ಡಾರ್ಟಾರ್ ಪಕ್ಷಿಗಳು, ಬಿಳಿ ಹುಲಿಗಳು ಆಗಮಿಸಲಿವೆ ಎಂದು ಮಂಗಳೂರು ಪಿಲಿಕುಳ ಜೈವಿಕ ಉದ್ಯಾವನ ನಿರ್ದೇಶಕ ಹೆಚ್.ಜೆ.ಭಂಡಾರಿ ಅವರ ಪ್ರಕಟಣೆ ತಿಳಿಸಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 31-06-2026 | ಆಗಸ್ಟ್ 4ಕ್ಕೆ ಇನ್ನೊಂದು ವಾಯುಭಾರ ಕುಸಿತ ಸಾಧ್ಯತೆ..?
July 31, 2026
6:08 PM
by: ಸಾಯಿಶೇಖರ್ ಕರಿಕಳ
ಸುಳ್ಯ ಸುತ್ತಮುತ್ತ ಭಾರೀ ಮಳೆ – ಬಾಳುಗೋಡಿನಲ್ಲಿ ಈ ವರ್ಷದ ಮೊದಲ ಸೇತುವೆ ಮುಳುಗಡೆ, ಹೊಳೆ-ತೋಡುಗಳು ತುಂಬಿ ಹರಿವು
July 31, 2026
5:54 PM
by: ದ ರೂರಲ್ ಮಿರರ್.ಕಾಂ
ಹಲಸಿನ ಬೀಜದಿಂದ ಖನಿಜಾಂಶ ಸಮೃದ್ಧ ಆಹಾರ – ಬಾಂಗ್ಲಾದೇಶದ ವಿಜ್ಞಾನಿಗಳಿಂದ ಹೊಸ ತಂತ್ರಜ್ಞಾನಕ್ಕೆ ಪೇಟೆಂಟ್
July 31, 2026
10:20 AM
by: ದ ರೂರಲ್ ಮಿರರ್.ಕಾಂ
ಭಾರತದ ಕೃಷಿ ರಫ್ತು ಪಟ್ಟಿಯಲ್ಲಿ ಈಗ 500ಕ್ಕೂ ಹೆಚ್ಚು ಉತ್ಪನ್ನಗಳು..! ಭಾರತದ ಕೃಷಿ ಕ್ಷೇತ್ರಕ್ಕೆ ಇದು ದೊಡ್ಡ ಸುದ್ದಿ-ರೈತರಿಗೆ ಹೊಸ ಜಾಗತಿಕ ಅವಕಾಶ
July 31, 2026
10:02 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror