ಪುಣ್ಚಪ್ಪಾಡಿ ಶಾಲೆಯಲ್ಲಿ ಬಣ್ಣದ ಹಾಡಿನ ಮುಕ್ತಾಯ ಸಮಾರಂಭ

Advertisement

ಸವಣೂರು: ಮಕ್ಕಳ ಕನಸಿನ ತಿಜೋರಿಯನ್ನು ಗಟ್ಟಿಗೊಳಿಸೋಣ ಎಂದು ಶಿಕ್ಷಣ ಇಲಾಖೆಯ ರಾಜ್ಯ ಸಂಪನ್ಮೂಲ ವ್ಯಕ್ತಿ ರಮೇಶ್ ಉಳಯ ಹೇಳಿದರು.
ಅವರು ಪುಣ್ಚಪ್ಪಾಡಿ ಸರಕಾರಿ ಶಾಲೆಯಲ್ಲಿ ಮೂರು ದಿನಗಳ ಕಾಲ ನಡೆದ ಬಣ್ಣದ ಹಾಡು ಎಂಬ ವಿಭಿನ್ನ ಮಕ್ಕಳ ರಂಗ ಶಿಬಿರದ ಸಮಾರೋಪ ಮಾತುಗಳನ್ನಾಡಿದರು. ಪ್ರತಿಯೊಬ್ಬ ಮಗುವು ಕೂಡ ಬುದ್ದಿವಂತ ಮಗುವೇ ಆಗಿರುತ್ತಾನೆ ಅವರ ಭೌದ್ಧಿಕ ವಿಕಾಸಕ್ಕೆ ಅವಕಾಶ ಮತ್ತು ಪ್ರೋತ್ಸಾಹ ಬೇಕಾಗಿದೆ. ಮಕ್ಕಳು ಕನಸಿನ ಚಿಲುಮೆಗಳು ಅವರ ಕನಸಿನ ಪೆಟ್ಟಿಗೆಯನ್ನು ಗಟ್ಟಿಗೊಳಿಸುವ ಕೆಲಸಗಳು ಇಂತಹ ಮಕ್ಕಳ ಕೂಟಗಳಿಂದ ಸಾಧ್ಯ ಎಂದರು.

Advertisement

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಆಳ್ವಾಸ್ ಮೂಡಬಿದಿರೆಯ ಕಲಾಶಿಕ್ಷಕ ಭಾಸ್ಕರ್ ನೆಲ್ಯಾಡಿ, ಸಂಪನ್ಮೂಲ ವ್ಯಕ್ತಿ ಮುಕ್ವೆ ಸರಕಾರಿ ಶಾಲೆಯ ಮುಖ್ಯ ಶಿಕ್ಷಕ ಚರಣ್ ಕುಮಾರ್ ಪುದು, ಸಂಪನ್ಮೂಲ ವ್ಯಕ್ತಿ ಶ್ರವಣ ರಂಗ ಪ್ರತಿಷ್ಟಾನ ಸವಣೂರಿನ ಸಂಚಾಲಕರಾದ ತಾರನಾಥ ಸವಣೂರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಊರಿನ ಹಿರಿಯರಾದ ಪಿ.ಡಿ ಗಂಗಾದರ್ ರೈ ಯವರು ಮಾತನಾಡಿದರು.ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಉಮಾಶಂಕರ ಗೌಡ, ಪೋಷಕರಾದ ಬಾಬು ಎನ್ ಜರಿನಾರು ವಿದ್ಯಾರ್ಥಿಗಳಾದ ದೀಪ್ತಿ, ತೇಜಸ್ವಿ, ನಿತೀಶ್, ಪಿ. ಆರ್. ಮೋಕ್ಷಿತ್ ಶಿಬಿರದ ಅನಿಸಿಕೆ ವ್ಯಕ್ತ ಪಡಿಸಿದರು.
ಮುಖ್ಯ ಶಿಕ್ಷಕರಾದ ರಶ್ಮಿತಾ ನರಿಮೊಗರು ಕಾರ್ಯಕ್ರಮ ನಿರ್ವಹಿಸಿದರು ಶಿಕ್ಷಕರಾದ ಶೋಭಾ ಕೆ, ಪ್ಲಾವಿಯಾ, ಯತೀಶ್ ಕುಮಾರ್, ಪ್ರತಿಮಾ ಎನ್,ಯಮುನಾ ಬಿ, ಸಹಕರಿಸಿದರು.ಶಿಕ್ಷಕರಾದ ನಾರಯಣ ರೈ ಕುಕ್ಕುವಳ್ಳಿ,ಭಾಸ್ಕರ್ ನೆಲ್ಯಾಡಿ,ಶಿವಗಿರಿ ಕಲ್ಲಡ್ಕ,ರೋಹಿಣಿ ರಾಘವಾ , ಜಗನ್ನಾಥ್ ಅರಿಯಡ್ಕ,ಪ್ರದೀಪ್ ಪಾಣಾಜೆ ಸಂಪನ್ಮೂಲ ವ್ಯಕ್ತಿಗಳಾಗಿ ಸಹಕರಿಸಿದರು.

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಪುಣ್ಚಪ್ಪಾಡಿ ಶಾಲೆಯಲ್ಲಿ ಬಣ್ಣದ ಹಾಡಿನ ಮುಕ್ತಾಯ ಸಮಾರಂಭ"

Leave a comment

Your email address will not be published.


*