ಪುತ್ತೂರಿಗೆ ಬರಲಿದೆ ಕೃಷಿಗೆ ಪೂರಕವಾಗಿರುವ 600 ಆವಿಷ್ಕಾರಗಳು..!

(ಸಾಂದರ್ಭಿಕ ಚಿತ್ರ)

ಪುತ್ತೂರು: ಪುತ್ತೂರಿನ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ವಠಾರದಲ್ಲಿ ನಡೆಯುವ ಅಗ್ರಿಟಿಂಕರಿಂಗ್ ಫೆಸ್ಟ್ ಅನ್ವೇಷಣಾದಲ್ಲಿ ಸುಮಾರು 600 ರಷ್ಟು ಕೃಷಿ ಪೂರಕ ಸಂಶೋಧನೆಗಳು ಬರುವುದು ಖಚಿತವಾಗಿದೆ. ಇದೆಲ್ಲಾ ಕೃಷಿ ಪೂರಕ ಸಂಶೋಧನೆಗಳು. ಹೀಗಾಗಿ ಈಗ 600 ಕೃಷಿ ಅನ್ವೇಷಣೆಗಳ ಪರಿಚಯವಾಗಲಿದೆ.

Advertisement

ವಿವೇಕಾನಂದ ವಿದ್ಯಾವರ್ಧಕ ಸಂಘ ಹಾಗೂ ಇತರ ಸಂಸ್ಥೆಗಳ ಸಹಯೋಗದಲ್ಲಿ ತೆಂಕಿಲದ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ನ.30 ಹಾಗೂ ಡಿ.1 ರಂದು ನಡೆಸಲಿರುವ ಅಗ್ರಿ ಟಿಂಕರಿಂಗ್ ಫೆಸ್ಟ್ ಅನ್ವೇಷಣಾದಲ್ಲಿ ರಾಜ್ಯದ ವಿವಿಧ ಭಾಗದ ಸುಮಾರು 600 ವಿದ್ಯಾರ್ಥಿಗಳು ಹಾಗೂ ಕೃಷಿಕರು ತಮ್ಮ ಮಾದರಿಗಳೊಂದಿಗೆ ಖಚಿತವಾಗಿದೆ.
ಈ ಕೃಷಿ ಪೂರಕ ನವೀನ ಆವಿಷ್ಕಾರಗಳ ರಾಜ್ಯಮಟ್ಟದ ಮಾದರಿ ತಯಾರಿ ಸ್ಪರ್ಧೆಯಲ್ಲಿ ವಿಶೇಷವಾಗಿ ಮಧ್ಯಮ ವರ್ಗದ ರೈತರಿಗೆ ಉಪಯೋಗವಾಗುವಂತಹ ವಿದ್ಯುತ್ ರಹಿತ ಅಡಿಕೆ ಸುಲಿಯುವ ಉಪಕರಣ, ತೆಂಗಿನಕಾಯಿ ಸುಲಿಯುವ ಉಪಕರಣವೂ ಪ್ರದರ್ಶನಗೊಳ್ಳಲಿದ್ದು, ಕೃಷಿಕರಿಗೆ ಮುಂದಿನ ದಿನಗಳಲ್ಲಿ ಉಪಯೋಗ ಆಗಲಿದೆ.

Advertisement

ಪ್ರಸ್ತುತ ಅಡಿಕೆಯ ಮೌಲ್ಯವರ್ಧನೆ ಕೃಷಿಕರ ಅಗತ್ಯವಾಗಿರುವ ಹಿನ್ನೆಲೆಯಲ್ಲಿ ಅಂತಹ ಪ್ರಾತ್ಯಕ್ಷಿಕೆಗಳೂ ಈ ಅನ್ವಾಷಣಾದಲ್ಲಿ ಕಾಣಿಸಿಕೊಳ್ಳಲಿವೆ. ಹಾಗೆಯೇ ಕೃಷಿ ಆಧಾರಿತ ರಾಸಾಯನಿಕ ರಹಿತ ಗೃಹೋಪಯೋಗಿ ವಸ್ತುಗಳು ಕೂಡ ಇಲ್ಲಿ ಇರಲಿವೆ. ಸಮುದಾಯದ ಒಳಗೊಳ್ಳುವಿಕೆ ಹಾಗೂ ಅಭಿವೃದ್ಧಿಯ ಕನಸಿನೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ವಿವೇಕಾನಂದ ವಿದ್ಯಾವರ್ಧಕ ಸಂಘ ಇದೀಗ ಅನ್ವೇಷಣಾ 2019 ರ ಮೂಲಕ ಮಹತ್ವದ ಹೆಜ್ಜೆ ಇರಿಸಿದೆ.

.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Be the first to comment on "ಪುತ್ತೂರಿಗೆ ಬರಲಿದೆ ಕೃಷಿಗೆ ಪೂರಕವಾಗಿರುವ 600 ಆವಿಷ್ಕಾರಗಳು..!"

Leave a comment

Your email address will not be published.


*