ಪುತ್ತೂರಿನಲ್ಲಿ ನಡೆಯಲಿದೆ ಹಣ್ಣು ಮೇಳ : ಲೈವ್ ಡೆಮೋಕ್ಕೆ ಸಿದ್ಧವಾಗುತ್ತಿದೆ ಪುತ್ತೂರಿನ ನೆಲ…

March 8, 2020
10:44 AM

ಪುತ್ತೂರು: ಮೇ ತಿಂಗಳ ಅಂತ್ಯದಲ್ಲಿ ಪುತ್ತೂರಿನ ಸುದಾನ ಶಾಲೆಯ ವಠಾರದಲ್ಲಿ  ಹಣ್ಣು ಮೇಳ ನಡೆಯಲಿದೆ. ತೋಟಗಾರಿಕಾ ಮೇಳ ಇದಾಗಿರುವುದರಿಂದ ವಿಶೇಷವಾಗಿ ಕಾರ್ಯಕ್ರಮ ಆಯೋಜನೆಗೆ ಸಿದ್ಧತೆ ನಡೆಯುತ್ತಿದೆ. ಈ ಸಂದರ್ಭ ಕರಾವಳಿ ಜಿಲ್ಲೆಯಲ್ಲಿ  ಬೆಳೆಯುಬಹುದಾದ ಹಣ್ಣುಗಳು ಹಾಗೂ ತರಕಾರಿಗಳ ಲೈವ್ ಡೆಮೋ ನಡೆಯಲಿದೆ. ಇದಕ್ಕಾಗಿ ಗಿಡಗಳ ನಾಟಿ ಮಾಡುವ ಕೆಲಸ ಆರಂಭಗೊಂಡಿದೆ.  ಇದರ ಜೊತೆಗೆ ಮೇಳದ ಮೂಲಕ ಯುವಕರಿಗೆ ನೂತನ ಕೃಷಿಯ ಬಗ್ಗೆ ಸಂದೇಶ ನೀಡುವ ಕೆಲಸದ ಕಡೆಗೆ ಗಮನಹರಿಸಲಾಗಿದೆ.

Advertisement
Advertisement
Advertisement

ನವತೇಜ ಟ್ರಸ್ಟ್ ಪುತ್ತೂರು ಹಾಗೂ ಜೆಸಿಐ ಪುತ್ತೂರು ಇವರ ಸಹಭಾಗಿತ್ವದಲ್ಲಿ, Indian Institute of Horticulture (IIHR) ಸಹಕಾರದಲ್ಲಿ ಮೂರು ದಿನಗಳ “ಪುತ್ತೂರು ಹಣ್ಣು ಮೇಳ-2020” ತೋಟಗಾರಿಕಾ ಮೇಳ ಮೇ.23 ,24 ಹಾಗೂ 25 ರಂದು ಸುದಾನ ಶಾಲೆ ಪುತ್ತೂರಿನಲ್ಲಿ ನಡೆಯಲಿದೆ. ಮೇಳದಲ್ಲಿ ಹಣ್ಣುಗಳ ಪ್ರಾತ್ಯಕ್ಷಿಕೆ, ಚರ್ಚೆಗಳು, ವ್ಯವಹಾರ ಮಳಿಗೆಗಳು ಹಾಗೂ ಹಲವು ಕಾರ್ಯಕ್ರಮಗಳನ್ನು ಒಳಗೊಂಡಿದ್ದು, ಕರ್ನಾಟಕ ಸರಕಾರ, ತೋಟಗಾರಿಕಾ ಇಲಾಖೆ, ಸರ್ಕಾರಿಯೇತರ ಸಂಘ ಸಂಸ್ಥೆಗಳು, ಸಹಕಾರಿ ಸಂಘಗಳು, ರೈತರು, ಹಾಗೂ ಉದ್ಯಮಿಗಳ ಸಹಭಾಗಿತ್ವದಲ್ಲಿ  ಕಾರ್ಯಕ್ರಮ ನಡೆಯಲಿದೆ.

Advertisement

ಮೇಳದ ಮುಖ್ಯ ಉದ್ದೇಶ ಹೀಗಿದೆ….

  • ರೈತರು, ವಿಜ್ಞಾನಿಗಳು, ಸರಕಾರ ಹಾಗೂ ಸಮಾಜವನ್ನು ಒಂದೇ ಸೂರಿನಡಿಯಲ್ಲಿ ತರುವುದು.

    Advertisement
  •  ವಿವಿಧ ಹಣ್ಣು ಕೃಷಿಗಳ ಬಗ್ಗೆ ಅರಿವು, ತಿಳುವಳಿಕೆ, ಉತ್ತೇಜನ ಹಾಗೂ ಉದ್ಯಮಶೀಲತೆ

  • ವಿವಿಧ ದೇಶೀಯ, ಸ್ಥಳೀಯ ಹಣ್ಣುಗಳು, ಸಾಂಪ್ರದಾಯಿಕ ವಾಣಿಜ್ಯ ಬೆಳೆಗಳು, ಭವಿಷ್ಯದ ಹಣ್ಣುಗಳ ಬೆಳೆಗಳು, ಮೌಲ್ಯವರ್ಧನೆಗೆ ಅವಕಾಶಗಳು ಮತ್ತು ಹಣ್ಣುಗಳ ಸಂಸ್ಕರಣೆಗಳ ಚಿಂತನೆ

    Advertisement
  • ಉಷ್ಣ ವಲಯದ ಹಣ್ಣುಗಳು, ಉತ್ತರದ ಗೋವದಿಂದ ದಕ್ಷಿಣದ ಕಣ್ಣೂರು, ಪಶ್ಚಿಮ ಘಟ್ಟ ಮತ್ತು ಮಲೆನಾಡಿನಲ್ಲಿ ಬೆಳೆಯುವ ಹಣ್ಣುಗಳ ಸುಸ್ಥಿರ ತೋಟಗಾರಿಕೆಯನ್ನು ಉತ್ತೇಜನಗೊಳಿಸುವುದು.

  • ಕಾರ್ಯಕ್ರಮದ ಮೂಲಕ ಯುವ ಕೃಷಿಕರಿಗೆ ಉತ್ತೇಜನ ನೀಡುವುದು

    Advertisement
  • ಮಾರುಕಟ್ಟೆ ಬಗ್ಗೆ ಕೃಷಿಕರಿಗೆ ಅರಿವು ಮೂಡಿಸುವುದು

 

Advertisement

ಪುತ್ತೂರಿನಲ್ಲಿ  ಈ ಬಾರಿ ತೋಟಗಾರಿಕಾ ಮೇಳವನ್ನು ವಿಶೇಷವಾಗಿ  ಆಯೋಜನೆಗೆ ಸಿದ್ಧತೆ ನಡೆಯುತ್ತಿದೆ. ಪುತ್ತೂರು ಜೇಸಿಐ ಸಂಪೂರ್ಣ ಸಹಕಾರ ನೀಡುತ್ತಿದೆ. ಇದರ ಜೊತೆಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ಸಹಕಾರದೊಂದಿಗೆ  ಸುದಾನ ಶಾಲೆ, ವಿವಿಧ ಇಲಾಖೆಗಳು ಸಹಭಾಗಿತ್ವ ನೀಡಲಿದೆ. ಕಾರ್ಯಕ್ರಮದ ಮೂಲಕ ಕೃಷಿಕರು ಹಾಗೂ ಗ್ರಾಹಕರಿಗೆ ನೇರ ಸಂಪರ್ಕ ಒದಗಿಸುವುದರ ಜೊತೆಗೆ ಯುವಕೃಷಿಕರನ್ನು ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ.  – ಅನಂತ ಪ್ರಸಾದ್ ನೈತಡ್ಕ, ಅಧ್ಯಕ್ಷ , ನವತೇಜ ಟ್ರಸ್ಟ್ , ಪುತ್ತೂರು

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಕ್ಯಾನ್ಸರ್‌ಕಾರಕ | ತಿರುಚಿದ ವರದಿ ಪ್ರಕಟಿಸಿದ WHO | ಕೇಂದ್ರ ಸರ್ಕಾರ ಮಧ್ಯಪ್ರವೇಶಕ್ಕೆ ಕ್ಯಾಂಪ್ಕೊ ಒತ್ತಾಯ |
November 26, 2024
7:05 PM
by: ದ ರೂರಲ್ ಮಿರರ್.ಕಾಂ
ಅಡಿಕೆಯ ಔಷಧೀಯ ಗುಣ | “we made” ಅಡಿಕೆಯ ಲಿಕ್ವಿಡ್‌ ಸೋಪು | ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ |
November 26, 2024
7:11 AM
by: ಮಹೇಶ್ ಪುಚ್ಚಪ್ಪಾಡಿ
ಇಂಡಿಯನ್ ಅಕಾಡೆಮಿ ಆಫ್ ಓರಲ್ ಮೆಡಿಸಿನ್ ಅಂಡ್ ರೇಡಿಯಾಲಜಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಾ.ಜಯಪ್ರಸಾದ ಆನೆಕಾರ
November 26, 2024
5:53 AM
by: ದ ರೂರಲ್ ಮಿರರ್.ಕಾಂ
ನೀರಿಗಾಗಿ ಏಕಾಂಗಿಯಾಗಿ ಸುರಂಗ ತೋಡಿದ ಕೃಷಿಕ | ಹಸಿರಾದ ಕೃಷಿ |
November 25, 2024
8:44 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror