ಪುತ್ತೂರು ಎಪಿಎಂಸಿ ರೈಲ್ವೇ ಅಂಡರ್‌ಪಾಸ್ ಕಾಮಗಾರಿಗೆ ಮೂಲ ಸೌಕರ್ಯ ನಿಧಿಯಿಂದ ಅನುದಾನಕ್ಕೆ ಸಂಸದೆ ಶೋಭಾ ಕರಂದ್ಲಾಜೆಗೆ ಮನವಿ

August 29, 2019
1:00 PM

ಸವಣೂರು : ಎಪಿಎಂಸಿ ರೈಲ್ವೇ ಅಂಡರ್‌ಪಾಸ್ ಕಾಮಗಾರಿಗೆ ಮೂಲ ಸೌಕರ್ಯ ನಿಽಯಿಂದ ಅನುದಾನಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಚಾರ್ವಾಕದ ಅವರ ಮನೆಯಲ್ಲಿ ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಮನವಿ ಸಲ್ಲಿಸಿದರು.

ಪುತ್ತೂರು ಎಪಿಎಂಸಿ ರಸ್ತೆಯಲ್ಲಿ ರೈಲ್ವೇ ಅಂಡರ್‌ಪಾಸ್ ನಿರ್ಮಾಣಕ್ಕೆ ಈಗಾಗಲೇ 12.70 ಕೋಟಿಯ ಕ್ರಿಯಾಯೋಜನೆ ತಯಾರಿಸಲಾಗಿದ್ದು, ರೈಲ್ವೇ ಇಲಾಖೆ ಹಾಗೂ ಎಪಿಎಂಸಿ 50:50 ಯಂತೆ ಅನುದಾನ ಭರಿಸುವ ಕುರಿತು ಈಗಾಗಲೇ ಅಂದಾಜು ಪಟ್ಟಿ ಮಾಡಲಾಗಿದೆ. ಇದರಿಂದಾಗಿ ರೈಲ್ವೇ ಇಲಾಖೆ 6.35 ಕೋಟಿ ವೆಚ್ಚ ನೀಡಲಿದ್ದು,ಉಳಿದ 6.35 ಕೋಟಿ ರೂಗಳನ್ನು ಎಪಿಎಂಸಿ ಭರಿಸಬೇಕಾಗಿದೆ. ಈ ಕುರಿತು ಈಗಾಗಲೇ ಎಪಿಎಂಸಿ ವತಿಯಿಂದ ಪುತ್ತೂರು ನಗರ ಸಭೆ ,ಶಾಸಕರಿಗೆ,ಸಂಸದರಿಗೆ ಮನವಿ ಮಾಡಲಾಗಿದೆ.ಇದಕ್ಕಾಗಿ ಸರಕಾರದ ಮೂಲ ಸೌಕರ್ಯ ನಿಧಿಯಿಂದ ರೂ 5 ಕೋಟಿ ಅನುದಾನ ನೀಡುವಂತೆ ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಅವರು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಸಲ್ಲಿಸಿದರು.

ಅಲ್ಲದೆ ಕಾಮಗಾರಿ ತ್ವರಿತವಾಗಿ ಆರಂಭಿಸಲು ರೈಲ್ವೇ ಇಲಾಖೆಯ ಡಿ.ಆರ್.ಎಂ ಅಪರ್ಣಾ ಗಾರ್ಗ್ ಅವರಿಗೆ ಶೋಭಾ ಕರಂದ್ಲಾಜೆ ಅವರು ದೂರವಾಣಿ ಮೂಲಕ ತಿಳಿಸಿದರು.

ಮರಳು ಸಮಸ್ಯೆ ಪರಿಹಾರಕ್ಕೆ ಸಭೆ:  ಅಲ್ಲದೆ ಸರಕಾರದ ಮರಳು ನೀತಿಯಿಂದ ಜನತೆಗೆ ಸಮಸ್ಯೆಯಾಗಿದೆ.ಮನೆ ಹಾಗೂ ಯಾವುದೇ ಕಾಮಗಾರಿ ನಡೆಸಲು ಸಾಧ್ಯವಾಗದ ಸ್ಥಿತಿ ಇದೆ. ನಾನ್ ಸಿಆರ್‌ಝೆಡ್ ನವರಿಗೂ ಮರಳು ತೆಗೆಯಲು ಅವಕಾಶ ನೀಡುವ ಕುರಿತು ಸಚಿವರೊಂದಿಗೆ ಸಭೆ ನಡೆಸುವಂತೆಯೂ ಸಂಸದರಿಗೆ ದಿನೇಶ್ ಮೆದು ಮನವಿಮಾಡಿದರು.

ಪ್ರತಿಕ್ರಿಯೆ ನೀಡಿದ ಸಂಸದೆ ಶೋಭಾ ಕರಂದ್ಲಾಜೆ ಅವರು ದ.ಕ.ಸಂಸದ ನಳಿನ್ ಕುಮಾರ್ ಅವರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಶಾಸಕರ ಜತೆಗೂಡಿ ಮುಖ್ಯಮಂತ್ರಿ ಹಾಗೂ ಗಣಿ,ಭೂ ವಿಜ್ಞಾನ ಇಲಾಖೆಯ ಸಚಿವರ ಜತೆ ಸಭೆ ನಡೆಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು .ಮರಳು ಸಮಸ್ಯೆ ಸರಪಡಿಸಲು ಶ್ರಮಿಸಲಾಗುವುದು ಎಂದರು.

ಈ ಸಂದರ್ಭ ಸವಣೂರು ಗ್ರಾ.ಪಂ.ಸದಸ್ಯ ಪ್ರಕಾಶ್ ಕುದ್ಮನಮಜಲು, ಸ್ಥಳೀಯರಾದ ತೀರ್ಥರಾಮ ಕೆಡೆಂಜಿ,ಬೆಳಿಯಪ್ಪ ಗೌಡ ಚೌಕಿಮಠ ಹಾಜರಿದ್ದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಗುತ್ತಿಗಾರಿನಲ್ಲಿ ಮಹಿಳೆಯರ ನೇತೃತ್ವದಲ್ಲಿ ಗೇರು ಹಣ್ಣಿನ ಜ್ಯೂಸ್‌ ಘಟಕ ಆರಂಭ – ಮಹಿಳೆಯರ ನೇತೃತ್ವದಲ್ಲಿ ಗ್ರಾಮೀಣ ಉದ್ಯಮಕ್ಕೆ ಹೊಸ ದಿಕ್ಕು
April 29, 2026
10:45 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಎಲೆಚುಕ್ಕೆ ರೋಗದ ವಿರುದ್ಧ ಹೋರಾಟ – ಸಮುದಾಯ ಮಟ್ಟದಲ್ಲಿ ಕ್ರಿಯಾ ಯೋಜನೆಗೆ ಸಂಸದ ಬ್ರಿಜೇಶ್ ಚೌಟ ಕರೆ
April 29, 2026
10:05 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 28-04-2026 | ಎಪ್ರಿಲ್ 29ರಿಂದ ಕರ್ನಾಟಕದಲ್ಲಿ ಮಳೆ ಚುರುಕು! ಕರಾವಳಿ–ಮಲೆನಾಡಿನಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ
April 28, 2026
2:11 PM
by: ಸಾಯಿಶೇಖರ್ ಕರಿಕಳ
ಹೆಸರಘಟ್ಟ ಹಕ್ಕಿಜ್ವರ ನಿಯಂತ್ರಣದಲ್ಲಿ | ಜನರಿಗೆ ಯಾವುದೇ ಆತಂಕ ಬೇಡ ಎಂದ ಆರೋಗ್ಯ ಇಲಾಖೆ
April 27, 2026
9:34 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror