ಪುಸ್ತಕಗಳೇ  ಮೆಚ್ಚಿನ ಸಂಗಾತಿಗಳು

May 22, 2019
11:00 AM
 ಬಾಲ್ಯದಲ್ಲಿ ಓದುವ ಅಭ್ಯಾಸ ರೂಡಿಯಾದರೆ ಯಾವತ್ತೂ ಒಂಟಿತನ ಅನುಭವವಾಗುವುದಿಲ್ಲ. ಪುಸ್ತಕ ಗಳೇ ಗೆಳೆಯರಾಗಿ ಜೊತೆಗಿರುತ್ತವೆ. ಎಲ್ಲೇ ಹೋದರೂ ಚೀಲದಲ್ಲಿ ಒಂದೆರಡು ಪುಸ್ತಕ ಗಳನ್ನು ಹಾಕಿಕೊಂಡುಬಿಡುತ್ತೇವೆ.
   ಮನೆಯಲ್ಲಿ ಹಿರಿಯರು ಓದುವುದನ್ನು ನೋಡಿ ನೋಡಿಯೇ ಮಕ್ಕಳಿಗೆ   ಓದುವುದು   ಅಭ್ಯಾಸವಾಗಿ ಬಿಡುತ್ತದೆ. ಹಿರಿಯರಿಗೆ ಓದು ಇಷ್ಟವಾದ ಹವ್ಯಾಸ ವಾಗಿದ್ದರೆ ಸಹಜವಾಗಿ ಮನೆ ತುಂಬಾ ಪುಸ್ತಕ ಗಳ ರಾಶಿಯೇ ತುಂಬಿರುತ್ತವೆ. ಕೊಂಡು ಓದುವ ಹವ್ಯಾಸ ಒಮ್ಮೆ ಅಭ್ಯಾಸ ವಾದರೆ ಬಿಡಿಸಿಕೊಳ್ಳಲಾಗದು.ಎಲ್ಲೇ ಪುಸ್ತಕದ ಅಂಗಡಿ ಕಂಡು ಬರಲಿ ಒಮ್ಮೆ ಇಣುಕದೆ ಇರಲಾಗದು. ಅಷ್ಟರ ಮಟ್ಟಿಗೆ ಪುಸ್ತಕ ಗಳು ಸೆಳೆದು ಬಿಡುತ್ತವೆ.
 ಹಿಂದೆಲ್ಲಾ ಮುಂಗಡ ಪಾವತಿ( ಮುದ್ರಣ ವಾಗುವ ಮೊದಲೇ) ‌ಮಾಡಿ ಪುಸ್ತಕಗಳನ್ನು ತರಿಸಿಕೊಳ್ಳ ಬೇಕಾಗುತ್ತಿತ್ತಂತೆ. ಅನುಪಮ ನಿರಂಜನರ‌ ಪ್ರಸಿದ್ಧ ವಾದ ‘ದಿನಕ್ಕೊಂದು ಕಥೆಗಳು’ ಮುಂಗಡ ಪಾವತಿಸಿ ನಮ್ಮ ಲ್ಲಿಗೆ ತರಿಸಿಕೊಂಡದ್ದೆಂದು ಅತ್ತೆಯವರು ಯಾವಾಗಲೂ ನೆನಪಿಸಿಕೊಳ್ಳುತ್ತಾರೆ. ಹಲವು ಪ್ರಮುಖ ಲೇಖಕರ ಪುಸ್ತಕಗಳನ್ನು ಮುದ್ರಣ ವಾಗುವ ಮೊದಲೇ ಕಾಯ್ದಿರಿಸಿಕೊಳ್ಳುವುದು ಜನರ ಮೆಚ್ಚಿನ ಹವ್ಯಾಸವಾಗಿತ್ತು.
ಪ್ರತಿ ಸಂಧರ್ಭದಲ್ಲಿಯೂ ಪುಸ್ತಕಗಳನ್ನು ಕೊಂಡು ಓದುವುದು ಅಸಾಧ್ಯ. ಕೆಲವೊಂದು ಬಾರಿ ದುಬಾರಿ ಪುಸ್ತಕಗಳನ್ನು ಎರವಲು ಪಡೆದೋ, ಗ್ರಂಥಾಲಯ ಗಳಿಂದ ತೆಗೆದುಕೊಂಡೋ ಓದಬೇಕಾದ ಅನಿವಾರ್ಯತೆ. ಕೆಳ ಮಧ್ಯಮ ವರ್ಗದ ಜನರಂತೂ ಲೈಬ್ರರಿ ಗಳನ್ನೇ ನೆಚ್ಚುವ ಪರಿಸ್ಥಿತಿ. ಶಾಲಾ ಕಾಲೇಜು ಗಳಲ್ಲಿ ಉತ್ತಮ ದರ್ಜೆಯ ಗ್ರಂಥಾಲಯವಿದ್ದರಂತು ಮಕ್ಕಳ ಭಾಗ್ಯವೇ ಸರಿ. ಪುಸ್ತಕ ಗಳಿದ್ದರೆ ಸಾಲದು ಬೇಕಾದ ಪುಸ್ತಕಗಳು ಅಗತ್ಯವಿದ್ದವರಿಗೆ ಸಮಯಕ್ಕೆ ಸರಿಯಾಗಿ ಸಿಗುವಂತಿರಬೇಕು. ಓದುವ ಹವ್ಯಾಸ ವಿದ್ದ , ನಗುಮೊಗದ ಸಿಬ್ಬಂದಿ ಗಳು ಗ್ರಂಥಾಲಯ ಗಳಲ್ಲಿದ್ದರೆ ಓದುವವರಿಗೂ ಖುಷಿ.
ಸಂಗೀತ, ನಾಟಕ, ಯಕ್ಷಗಾನಗಳು ಜನರ‌ ಮೆಚ್ಚಿನ ಮನೋರಂಜನೆಯ ಮೂಲಗಳಾಗಿದ್ದವು. ಆದರೆ ಪುಸ್ತಕ ಗಳು ಎಲ್ಲಾ ಕಾಲದ ಮೆಚ್ಚಿನ ಸಂಗಾತಿಗಳು. ಜನರ  ಮನೋಇಚ್ಚೆಗನುಸಾರವಾಗಿ ಹಲವು ರೀತಿಯ ಪುಸ್ತಕಗಳು ಲಭ್ಯ. ಇತಿಹಾಸ, ಪೌರಾಣಿಕ, ವೈಜ್ಞಾನಿಕ, ಕಥೆಗಳು, ಪದ್ಯಗಳು, ಕಾದಂಬರಿಗಳು , ಸಾಹಸಮಯ , ಹಾಸ್ಯ ಕಥೆಗಳು ಹೀಗೆ ಹತ್ತು ಹಲವು ಬಗೆಯ. ಪುಸ್ತಕಗಳು ಮಾರುಕಟ್ಟೆ ಗಳಲ್ಲಿ ಲಭ್ಯ.
ಇಂದು ಮನರಂಜನೆಗಾಗಿ ಹಲವು ಮಾಧ್ಯಮ ಗಳನ್ನು ನಾವು ಹೊಂದಿದ್ದೇವೆ. ಕೈಯಲ್ಲಿ ಮೊಬೈಲ್ , ಅದರಲ್ಲೇ ಸಿನೆಮಾ, ಆಟ, ಸಂಗೀತ, ಕುಣಿತ ಮಾತ್ರ ವಲ್ಲ ಪುಸ್ತಕ ಗಳನ್ನು ಓದುವುದು ಸಾಧ್ಯ. ಈ ಬೆಳವಣಿಗೆಗಳನ್ನು ಎಂಬತ್ತರ ದಶಕದಲ್ಲಿ ಕಲ್ಪಿಸಲೂ ಸಾಧ್ಯವಿರಲಿಲ್ಲ.  ಎಲೆಕ್ಟ್ರಾನಿಕ್ ಮಾಧ್ಯಮಗಳ ಹೊಸ ಆವಿಷ್ಕಾರಗಳು ಜನರ ಜೀವನ ಕ್ರಮವನ್ನು ಬದಲಾಯಿಸಿದೆ, ಕನಸುಗಳನ್ನು ,ಬದುಕಿನ ಸಾಧ್ಯತೆ ಗಳನ್ನು ವಿಸ್ತೃತ ಗೊಳಿಸಿವೆ.
ಎಷ್ಟೇ ಬದಲಾವಣೆ ಗಳು ಈ ಪ್ರಪಂಚ ದಲ್ಲಿ ಕಂಡು ಬಂದರೂ ಪುಸ್ತಕ ಕ್ಕೆ ಯಾವಾಗಲೂ ಜೈ.
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

Open Talk | ಆರಂಭದ ಮಳೆ ಹಾಗೂ ಗ್ರಾಮೀಣ ಭಾಗದಲ್ಲಿ ಕೈಕೊಡುವ ವಿದ್ಯುತ್..!‌ | ಪರಿಹಾರ ಏನು..?
May 20, 2024
11:02 AM
by: ದ ರೂರಲ್ ಮಿರರ್.ಕಾಂ
ಸತ್ಯ……..ಸತ್ಯದ ಹುಡುಕಾಟ ನಿಮ್ಮ ಆದ್ಯತೆಯಾಗಿರಲಿ……..
May 18, 2024
12:36 PM
by: ವಿವೇಕಾನಂದ ಎಚ್‌ ಕೆ
ಸಮಾಜಕ್ಕೆ ಸೇವೆ ಮಾಡುವುದು ಎಂದರೆ ಹಲವು ಆಯಾಮಗಳಿವೆ | ಹವಾಮಾನ ಹೇಳುವುದೂ ಒಂದು ಸೇವೆ |
May 17, 2024
11:12 AM
by: ದ ರೂರಲ್ ಮಿರರ್.ಕಾಂ
ಮಲೆನಾಡ ಗಿಡ್ಡ ಗೋತಳಿಗಳನ್ನು ಉಳಿಸಿ ಸಂವರ್ಧಿಸಬೇಕು ಏಕೆ..?
May 15, 2024
2:29 PM
by: ಮುರಲೀಕೃಷ್ಣ ಕೆ ಜಿ

You cannot copy content of this page - Copyright -The Rural Mirror