ಪೈಂಬೆಚ್ಚಾಲು ಅಜ್ಮೀರ್ ಆಂಡ್ ನೇರ್ಚೆಗೆ ವಿದ್ಯುಕ್ತ ಚಾಲನೆ

March 3, 2020
9:56 AM

ಪೈಂಬೆಚ್ಚಾಲು: ಎರಡು ದಿನಗಳಲ್ಲಿ ಬಹಳ ವಿಜ್ರಂಬಣೆಯಿಂದ ನಡೆಯುವ ಐದನೇ ಅಜ್ಮೀರ್ ಆಂಡ್ ನೇರ್ಚೆ ಹಾಗೂ ದ್ವಿದಿನ ಮೆಹ್ಫಿಲೇ ನಸ್ವೀಹ ಕಾರ್ಯಕ್ರಮಕ್ಕೆ, ಜಮಾಅತ್ ಅಧ್ಯಕ್ಷರಾದ ಟಿ.ಎಂ.ಅಬ್ದುಲ್ ಕಾದರ್ ರವರ ಅಧ್ಯಕ್ಷತೆಯಲ್ಲಿ, ಗೌರವಾಧ್ಯಕ್ಷರಾದ ಪಿ.ಎಂ.ಮೂಸ ಹಾಜಿಯವರು ಧ್ವಜಹಾರೋಹಣದ ಮೂಲಕ ಇಂದು ಬೆಳಿಗ್ಗೆ ಚಾಲನೆ ನೀಡಿದರು.

Advertisement
Advertisement
Advertisement
Advertisement

ಖತೀಬ್ ಉಸ್ತಾದರು ಪ್ರಾರ್ಥನೆ ನಡೆಸಿದರು. ಈ ಸಂದರ್ಭದಲ್ಲಿ ಫಾರೂಖ್ ಮದನಿ ಉಸ್ತಾದ್ ಸೆರ್ಕಳ, ಜಮಾಅತ್ ನಾಯಕರಾದ ಟಿ.ಎಂ.ಅಬ್ದುಲ್ ರಹಿಮಾನ್, ಎಂ.ಪಿ‌.ಇಬ್ರಾಹಿಂ, ಕೆ.ಎಚ್.ಇಬ್ರಾಹಿಂ ಮುಂತಾದವರು ಉಪಸ್ಥಿತರಿದ್ದರು. ಮಾರ್ಚ್ 3 ಹಾಗು 4 ರಂದು ನಡೆಯುವ ಈ ಕಾರ್ಯಕ್ರಮದಲ್ಲಿ ಇಂದು ರಾತ್ರಿ ಪ್ರಖ್ಯಾತ ಕೆ.ಸಿ.ಎ.ಕುಟ್ಟಿ ಕೊಡುವಳ್ಳಿ ಹಾಗು ಸಂಘಡಿಗರಿಂದ ಕಥಾ ಪ್ರಸಂಗ ನಡೆಯಲಿದೆ. ಸೂಫಿವರ್ಯರಾದ ವಾಲೆಮಂಡೋವು ಉಸ್ತಾದ್ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.

Advertisement

ಮಾ.4ರಂದು ನಡೆಯುವ ಗ್ರಾಂಡ್ ಅಜ್ಮೀರ್ ಆಂಡ್ ನೆರ್ಚೆಯಲ್ಲಿ ಝೈನುಲ್ ಉಲಮಾ ಮಾಣಿ ಉಸ್ತಾದ್, ಕೂರಿಕ್ಕುಝಿ ತಙಳ್, ಸಯ್ಯಿದ್ ಸಾಲಿಂ ಬುಖಾರಿ ತಙಳ್, ಸಯ್ಯಿದ್ ಜಿಫ್ರಿ ತಙಳ್ , ಖ್ಯಾತ ಭಾಷಣಗಾರ ಹಾಫಿಳ್ ಮಸ್ಊದ್ ಸಖಾಫಿ ಗೂಡಲ್ಲೂರು ಮೊದಲಾದ ಉಲಮಾ ಉಮರಾ ನಾಯಕರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಜಮಾಅತ್ ಪ್ರಧಾನ ಕಾರ್ಯದರ್ಶಿ ಅಲ್ ಹಾಜ್ ಬಿ.ಎಂ.ಇಸ್ಮಾಯಿಲ್ ಸಖಾಫಿ ಸ್ವಾಗತಿಸಿ ಧನ್ಯವಾದವಿತ್ತರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ದೇಶದ ಆರ್ಥಿಕತೆಗೆ ಕೃಷಿ ಕ್ಷೇತ್ರದ ಕೊಡುಗೆ ಅಪಾರ | ಸರ್ವೇ ಪ್ರಕಾರ ಜಿಡಿಪಿ ದರಕ್ಕೆ ಕೃಷಿ ಕ್ಷೇತ್ರದ ಕೊಡುಗೆ ಶೇ.16 |
February 26, 2025
6:49 AM
by: The Rural Mirror ಸುದ್ದಿಜಾಲ
ಕಾಡಾನೆ ಹಾವಳಿ ನಿಯಂತ್ರಿಸಲು ಸರ್ಕಾರ 22 ಕೋಟಿ ರೂಪಾಯಿ ಬಿಡುಗಡೆ | ರೈಲ್ವೆ ಬ್ಯಾರಿಕೇಡ್ ನಿರ್ಮಾಣದ ಪ್ರಕ್ರಿಯೆಗೆ ಚಾಲನೆ
February 26, 2025
6:40 AM
by: The Rural Mirror ಸುದ್ದಿಜಾಲ
ಮಹಾಕುಂಭಮೇಳ ಸಂಪನ್ನ | ಮಹಾಶಿವರಾತ್ರಿಯಂದು ಕೊನೆಯ ಪುಣ್ಯಸ್ನಾನ
February 26, 2025
6:30 AM
by: The Rural Mirror ಸುದ್ದಿಜಾಲ
ಮಹಿಳಾ ಸ್ವಾವಲಂಬನೆಗೆ ಆದ್ಯತೆ | ಶಿವಮೊಗ್ಗದಲ್ಲಿ ‘ಅವ್ವ ಸಂತೆ’ ಆಯೋಜನೆ
February 26, 2025
6:26 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror