ಪೈಂಬೆಚ್ಚಾಲು ಸರಳ ಸಂಭ್ರಮದ ಬಕ್ರೀದ್ ಆಚರಣೆ

July 31, 2020
11:16 AM

ಪೈಂಬೆಚ್ಚಾಲು: ತ್ಯಾಗ ಬಲಿದಾನಗಳ ಮಹಾ ಸಂಕೇತವಾದ ಬಕ್ರೀದ್ ಹಬ್ಬವನ್ನು , ಪೈಂಬೆಚ್ಚಾಲಿನಲ್ಲಿ ಸರ್ಕಾರದ ನಿಯಮಗಳನ್ನೂ, ಉಲಮಾಗಳ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಬಹಳ ಸರಳ ಸಂಭ್ರಮದಿಂದ ಆಚರಿಸಲಾಯಿತು.

ಪೆರ್ನಾಳ್ ನಮಾಝ್ ಹಾಗು ಖುತುಬಕ್ಕೆ ಖತೀಬ್ ಉಸ್ತಾದ್ ಬಹು ಅಬ್ದುನ್ನಾಸಿರ್ ಸುಖೈಫಿ ನೇತೃತ್ವ ನೀಡಿದರು. ಪೆರ್ನಾಳ್ ಸಂದೇಶ ಭಾಷಣ ಮಾಡಿದ ಅವರು ಸಮಸ್ಯೆಗಳು, ಸಂಕಷ್ಟಗಳು ಮಾನವನ ಒಡಹುಟ್ಟು. ಜನನದಿಂದ ಮರಣದ ತನಕ ಒಂದಿಲ್ಲೊಂದು ಸಮಸ್ಯೆಗಳು ಸದಾ ಮನುಷ್ಯರನ್ನು ಕಾಡುತ್ತಿರುತ್ತದೆ. ಆದರೆ ವಿಶ್ವಾಸಿಗಳು ಅದರಲ್ಲಿ ನಿರಾಶೆ ಹೊಂದಿ, ಜೀವನದಲ್ಲಿ ಜಿಗುಪ್ಸೆಗೊಳಗಾಗದೆ, ಎಲ್ಲವನ್ನೂ ವಿಶ್ವಾಸದಿಂದ, ಆತ್ಮಸ್ಥೈರ್ಯದಿಂದ ಎದುರಿಸಿ ಉತ್ತಮ ಬದುಕು ಕಟ್ಟಿಕೊಳ್ಳಬೇಕು. ಇದಾಗಿದೆ ಈ ಬಕ್ರೀದ್ ನಮಗೆ ನೀಡುವ ಸಂದೇಶ ಎಂದು ನುಡಿದರು.

ಈ ಸಂದರ್ಭದಲ್ಲಿ ಜಮಾಅತ್ ಅಧ್ಯಕ್ಷರಾದ ಟಿ.ಎಂ.ಅಬ್ದುಲ್ ಕಾದರ್, ಪ್ರ.ಕಾರ್ಯದರ್ಶಿ ಅಲ್ ಹಾಜ್ ಬಿ.ಯಂ.ಇಸ್ಮಾಯಿಲ್ ಸಖಾಫಿ, ಕೋಶಾಧಿಕಾರಿ ಕೆ.ಎಂ.ಮುಹಮ್ಮದ್ ಹಾಜಿ, ಉಪಾಧ್ಯಕ್ಷರಾದ ಟಿ.ಎಂ.ಅಬ್ದುಲ್ ರಹಿಮಾನ್, ಎಚ್.ಐ.ಎಮ್.ಅಧ್ಯಾಪಕರಾದ ಫಾರೂಖ್ ಮದನಿ ಸೆರ್ಕಳ, ಎಸ್ ವೈಎಸ್ ಮಾಜಿ ಅಧ್ಯಕ್ಷರಾದ ಪಿ.ಬಿ.ಮೂಸ ಹಾಜಿ, ಕಾರ್ಯದರ್ಶಿ ರಫಿಖ್ ಪಿ.ಎಂ. ಎಸ್ಸೆಸ್ಸೆಫ್ ಸೆಕ್ಟರ್ ಉಪಾಧ್ಯಕ್ಷರಾದ ಸಿದ್ದೀಖ್ ಸಖಾಫಿ ಪಿ.ಎ. ಎಸ್ಸೆಸ್ಸೆಫ್ ಅಧ್ಯಕ್ಷರಾದ ಆಸಿಫ್ ಕೆ. ಎಂ. ಎಸ್ಕೆ ಎಸ್ಸೆಸ್ಸೆಫ್ ಅಧ್ಯಕ್ಷರಾದ ಅಬ್ದುಲ್ಲ ಫೈಝಿ ಡಿ.ಯಂ. ಸಹಿತ ಜಮಾಅತ್ ಹಾಗು ಊರಿನ ಸರ್ವ ಸಂಘಟನೆಗಳ ನಾಯಕರೂ, ಕಾರ್ಯಕರ್ತರೂ ಉಪಸ್ಥಿತರಿದ್ದರು.

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ನಭೋಮಂಡಲಕ್ಕೆ ಇಣುಕುನೋಟ | ಗಗನಯಾತ್ರಿಗಳನ್ನು ಸ್ವಾಗತಿಸೋಣ…|
March 18, 2025
9:52 PM
by: ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ
ಚಿಕ್ಕಮಗಳೂರು ಜಿಲ್ಲೆ | ಮಂಗನ ಕಾಯಿಲೆ ಸೋಂಕಿಗೆ ವೃದ್ಧೆ ಬಲಿ | ಮಂಗನಕಾಯಿಲೆ ಬಗ್ಗೆ ಇರಲಿ ಎಚ್ಚರ |
March 18, 2025
8:31 PM
by: The Rural Mirror ಸುದ್ದಿಜಾಲ
ಸ್ಥಳೀಯ ಮಟ್ಟದಲ್ಲಿ ಸೌರ ವಿದ್ಯುತ್ ಉತ್ಪಾದಿಸಿ ರೈತರ ಪಂಪ್ ಸೆಟ್ ಗಳಿಗೆ ಪೂರೈಸಲು ಚಿಂತನೆ | ಸದ್ಯ ರೈತರ ಪಂಪ್‌ಸೆಟ್‌ಗಳಿಗೆ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ |
March 18, 2025
8:13 PM
by: The Rural Mirror ಸುದ್ದಿಜಾಲ
ಅಮೆರಿಕದ ಹಲವು ರಾಜ್ಯಗಳಲ್ಲಿ ಚಂಡಮಾರುತ-ಸುಳಿಗಾಳಿ; ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿ
March 18, 2025
7:57 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror