ಪೌರತ್ವ ತಿದ್ದುಪಡಿಯ ಸದುದ್ದೇಶವನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪಿಸಿ : ಬಿಜೆಪಿ ಕಾರ್ಯಕರ್ತರಿಗೆ ಕೋಟ ಕರೆ

January 23, 2020
7:49 PM

ಸುಳ್ಯ: ಪೌರತ್ವ ತಿದ್ದು ಪಡಿ ಕಾಯ್ದೆಯ ಬಗ್ಗೆ ಇಲ್ಲ ಸಲ್ಲದ ಅಪ ಪ್ರಚಾರ, ಆರೋಪ ಎಲ್ಲೆಡೆ ನಡೆಸಲಾಗುತಿದೆ. ದೇಶದ ಹಿತದೃಷ್ಠಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆಯ ಸದುದ್ದೇಶವನ್ನು ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

Advertisement

ಸುಳ್ಯದ ಅಂಬೆಟಡ್ಕದ ಶ್ರೀ ವೆಂಕಟ್ರಮಣ ದೇವ ಮಂದಿರದ ಸಭಾಭವನದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಎಲ್ಲಾ ದೇಶದಲ್ಲಿಯೂ ಅದರದ್ದೇ ಆದ ಪೌರತ್ವ ಕಾಯಿದೆ ಇದೆ. ಆದರೆ ನಮ್ಮ ದೇಶದಲ್ಲಿ ಮಾತ್ರ ಪೌರತ್ವದ ಬಗ್ಗೆ ರಾಷ್ಟ್ರೀಯತೆಯ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿತ್ತು. ಪೌರತ್ವ ತಿದ್ದುಪಡಿ ಕಾಯ್ದೆ ತಂದ ಕಾರಣ ಎಲ್ಲರಲ್ಲಿಯೂ ರಾಷ್ಟ್ರ ಜಾಗೃತಿ ಮೂಡಿಸಲು, ರಾಷ್ಟ್ರೀಯತೆಯೆಡೆಗೆ ಎಲ್ಲರನ್ನು ಕರೆ ತರಲು ಸಾಧ್ಯವಾಗಿದೆ. ಇದು ಮೊದಲ ಯಶಸ್ಸು ಎಂದು ಅವರು ಹೇಳಿದರು. 370ನೇ ವಿಧಿಯ ರದ್ದು, ಪೌರತ್ವ ತಿದ್ದುಪಡಿ ಕಾಯಿದೆ ನಮ್ಮ ಹಿರಿಯರ ಕನಸಾಗಿತ್ತು. ಪ್ರಧಾನಿ ಮತ್ತು ಗೃಹ ಸಚಿವರು ಇಂದು ಹಿರಿಯರ ಕನಸನ್ನು ನನಸು ಮಾಡಿದ್ದಾರೆ ಎಂದವರು ಹೇಳಿದರು. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರ ಆದ ಕಾನೂನಿನ ಬಗ್ಗೆ ವ್ಯವಸ್ಥಿತವಾದ ಅಪಪ್ರಚಾರ ನಡೆಸಲಾಗುತಿದೆ. ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನ ನಡೆಸಲಾಗುತಿದೆ ಎಂದ ಅವರು ಧರ್ಮ ನಡೆ ಮತ್ತು ರಾಷ್ಟ್ರ ನಡೆ ಒಂದೇ ಆಗಿರಬೇಕು ಎಂದು ಅಭಿಪ್ರಾಯಪಟ್ಟರು. ದ.ಕ.ಜಿಲ್ಲಾ ಬಿಜೆಪಿ ವತಿಯಿಂದ ಪೌರತ್ವ ತಿದ್ದುಪಡಿ ಕಾಯಿದೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಹಾ ಜನಜಾಗೃತಿ ಸಮಾವೇಶವನ್ನು ಜ.27 ರಂದು ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಕೇಂದ್ರ ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್ ಭಾಗವಹಿಸುವ ಸಮಾವೇಶಕ್ಕೆ ಅತೀ ಹೆಚ್ಚು ಮಂದಿ ಭಾಗವಹಿಸಬೇಕು ಎಂದರು. ಪೌರತ್ವ ತಿದ್ದುಪಡಿ ಕಾಯಿದೆಯ ಸತ್ಯಾಸತ್ಯತೆಯ ಬಗ್ಗೆ ಜನರಿಗೆ ತಿಳಿಸಲು ಗ್ರಾಮ ಸಭೆಯ ಮೂಲಕ ಜನರಿಗೆ ಮಾಹಿತಿ ನೀಡುವ ಸಾಧ್ಯತೆಗಳ ಬಗ್ಗೆ ಸರ್ಕಾರ ಚಿಂತೆ ನಡೆಸುತಿದೆ ಎಂದು ಅವರು ಹೇಳಿದರು.

ಶಾಸಕ ಎಸ್.ಅಂಗಾರ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ, ಬಿಜೆಪಿ ಮುಖಂಡ ಎ.ವಿ.ತೀರ್ಥರಾಮ ಮಾತನಾಡಿದರು.

 

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ನಕಲಿ, ಕಳಪೆ ಗುಣಮಟ್ಟದ ರಸಗೊಬ್ಬರ ಪೂರೈಕೆ | ಕಠಿಣ ಕ್ರಮಕ್ಕೆ  ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ನಿರ್ದೇಶನ
July 17, 2025
10:13 PM
by: The Rural Mirror ಸುದ್ದಿಜಾಲ
ಮಂಡ್ಯದಲ್ಲಿ  ಸ್ವಸಹಾಯ ಸಂಘದ ಮಹಿಳೆಯರಿಗೆ ಮೇಕೆ, ಕುರಿ, ಕೋಳಿ ಸಾಕಾಣಿಕೆ ಅವಕಾಶ
July 17, 2025
10:01 PM
by: The Rural Mirror ಸುದ್ದಿಜಾಲ
ಇಂಧನ ಆಮದು ದೇಶಗಳ ಗುಂಪು ವಿಸ್ತರಿಸಿದ ಭಾರತ – 2 ಲಕ್ಷ ಚ.ಕಿ.ಮೀ. ಪ್ರದೇಶದಲ್ಲಿ ಹೈಡ್ರೋಕಾರ್ಬನ್ ಪರಿಶೋಧನೆ
July 17, 2025
9:51 PM
by: The Rural Mirror ಸುದ್ದಿಜಾಲ
ಮುಳ್ಳಯ್ಯನಗಿರಿಗೆ 600 ವಾಹನಗಳಿಗೆ ಪ್ರವೇಶ | ವಾಹನಗಳ ದಟ್ಟಣೆ ನಿಯಂತ್ರಿಸಲು ಕ್ರಮ
July 17, 2025
9:46 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group