ಪ್ರಗತಿಪರ ಕೃಷಿಕ ಮರಿಕೆ ಎ.ಪಿ ರಮಾನಾಥ್ ರಾವ್ ನಿಧನ

Advertisement
Advertisement
Advertisement

ಪುತ್ತೂರು: ಆರ್ಯಾಪು ಗ್ರಾಮದ ಸಂಟ್ಯಾರ್ ಬಳಿಯ ನಿವಾಸಿ ಪ್ರಗತಿಪರ ಕೃಷಿಕ, ಸಾಮಾಜಿಕ ಮುಂದಾಳು ಮರಿಕೆ ಎ.ಪಿ ರಮಾನಾಥ ರಾವ್ (82) ಗುರುವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು.

Advertisement

ಸಂಟ್ಯಾರ್ ಬಳಿ ಕೃಷಿ, ಹೈನುಗಾರಿಕೆ ಯಲ್ಲಿ ವಿಶೇಷ ಸಾಧನೆಗೈದ ಇವರು ಪುತ್ತೂರು ಏಳ್ಮುಡಿಯ ಹಾಲು ಉತ್ಪಾದಕರ ಸಂಘದ ಸ್ಥಾಪನೆಗೆ ಕಾರಣಕರ್ತರಾಗಿದ್ದರು. ಶತಮಾನ ಕಂಡ ದ.ಕ ಜಿ.ಪಂ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಳೆದ ಶತಮಾನೋತ್ಸವದಲ್ಲೂ ಸಕ್ರಿಯವಾಗಿ ಪಾಲ್ಗೊಂಡ ಇವರು, ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾಗಿ, ಸಂಟ್ಯಾರ್ ಸಾರ್ವಜನಿಕ ಗಣೇಶೋತ್ಸವದಲ್ಲಿ ಗೌರವಾಧ್ಯಕ್ಷರಾಗಿ, ಸಾರ್ವಜನಿಕ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷರಾಗಿ, ಹಂಟ್ಯಾರ್ ಶಾಲಾ ಹಳೆವಿದ್ಯಾರ್ಥಿ ಸಂಘದ ಪ್ರಮುಖರಾಗಿ ಗುರುತಿಸಿಕೊಂಡಿದ್ದರು.  ಕಾರ್ಪಾಡಿ ದೇವಳದ ಜಾತ್ರೆಯ ಸಾರ್ವಜನಿಕ ಅನ್ನಸಂತರ್ಪಣೆಯ ಸೇವಾಕರ್ತರಾಗಿ, ಹಂಟ್ಯಾರ್ ಶಾಲಾ ಅಭಿವೃದ್ಧಿ ಸಮಿತಿಯ ದಾನಿಗಳಾಗಿ ಗುರುತಿಸಿಕೊಂಡಿದ್ದರು.

Advertisement

ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಮೃತರ ಅಂತ್ಯ ಸಂಸ್ಕಾರ ನಡೆಯಲಿದೆ .

 

Advertisement
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಪ್ರಗತಿಪರ ಕೃಷಿಕ ಮರಿಕೆ ಎ.ಪಿ ರಮಾನಾಥ್ ರಾವ್ ನಿಧನ"

Leave a comment

Your email address will not be published.


*